Advertisement

ರಾತ್ರೋರಾತ್ರಿ ಪೊಲೀಸ್‌ ಠಾಣೆಗೆ ಮುತ್ತಿಗೆ

05:12 PM Mar 27, 2022 | Team Udayavani |

ಹಳಿಯಾಳ: ಅನ್ಯಕೋಮಿನ ಯುವಕನಿಂದ ಶುಕ್ರವಾರ ಸಾಯಂಕಾಲ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವನ್ನು ಅಶ್ಲೀಲವಾಗಿ ಆ್ಯಡಿಟ್‌ ಮಾಡಿ ಸಾಮಾಜಿಕ ಜಾಲತಾಣ ಇನಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪಟ್ಟಣ ಪೋಲಿಸ್‌ ಠಾಣೆ ಎದುರು ಮಧ್ಯರಾತ್ರಿ ಪ್ರತಿಭಟನೆ ನಡೆದಿದೆ.

Advertisement

ಪಟ್ಟಣದ ದೇಶಪಾಂಡೆ ಆಶ್ರಯ ನಗರ ನಿವಾಸಿ, ಅನ್ಯಕೊಮಿನ ಅಪ್ರಾಪ್ತ ವಯಸ್ಸಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಈ ದುಷ್ಕೃತ್ಯ ನಡೆಸಿದ್ದಾನೆ ಎಂದು ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ಶುಕ್ರವಾರ ತಡರಾತ್ರಿ ಬೆಳಕಿಗೆ ಬರುತ್ತಿದ್ದಂತೆ ಪೋಲಿಸ್‌ ಠಾಣೆ ಎದುರು ಹಾಗೂ ಶಿವಾಜಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು, ವಿಶ್ವ ಹಿಂದೂ ಪರಿಷತ್‌, ಭಜಂಗದಳ, ಶಿವಸೇನೆ, ಶಿವಪ್ರತಿಷ್ಠಾನ, ಜೀಜಾಮಾತಾ ಮಹಿಳಾ ಸಂಘಟನೆ, ಮರಾಠಾ ಸಂಘಟನೆಗಳವರು ಜಮಾಯಿಸಿ ಕೃತ್ಯ ಖಂಡಿಸಿ ಯುವಕನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಮಧ್ಯರಾತ್ರಿವರೆಗೆ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಸುನೀಲ್‌ ಹೆಗಡೆ ಮಾತನಾಡಿ, ಅನ್ಯಕೊಮಿನ ಯುವಕರಿಂದ ಮೇಲಿಂದ ಮೇಲೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಸಮಾಜದಲ್ಲಿ ಶಾಂತಿ ಕದಡಲೆಂದೇ ಈ ರೀತಿ ಕೃತ್ಯ ಎಸಗಲಾಗುತ್ತಿದೆ ಎಂಬ ಸಂಶಯ ಮೂಡುತ್ತಿದೆ ಹಾಗೂ ಎಲ್ಲ ಸಮಯದಲ್ಲಿ ಹಿಂದೂಗಳ ಸಹನೆ ಪರೀಕ್ಷಿಸಲಾಗುತ್ತಿದ್ದು, ಇನ್ನೂ ಮುಂದೆ ಇಂತಹ ಘಟನೆ ನಡೆದರೆ ಹಿಂದೂಗಳು ಠಾಣೆಗೆ ಬರುವುದಿಲ್ಲ, ಬದಲಾಗಿ ಕೃತ್ಯ ಎಸಗಿದವರ ಮನೆಗೆ ತೆರಳಬೇಕಾಗುತ್ತದೆ.

ಆ ಸಂದರ್ಭದಲ್ಲಿ ಏನಾದರೂ ಅನಾಹುತಗಳಾದರೆ ಅದಕ್ಕೆ ಸಮಾಜ ಹಾಗೂ ನಾವು ಜವಾಬ್ದಾರರಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದರು. ಪ್ರತಿಭಟನಾಕಾರರ ಮನವೊಲಿಸುವುದೇ ಪೊಲೀಸರಿಗೆ ದೊಡ್ಡ ತಲೆನೊವಾಗಿ ಪರಿಣಮಿಸಿತು. ಬಳಿಕ ಮಾಜಿ ಶಾಸಕರು ಶನಿವಾರ ಸಾಯಂಕಾಲದ ಒಳಗೆ ಯುವಕನ ಬಂಧನವಾಗದಿದ್ದರೆ ಪಟ್ಟಣದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು ಹಾಗೂ ಪೋಲಿಸರು ಕೂಡ ಬಂಧಿಸುವ ಭರಸವೆ ನೀಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಸ್ಥಗಿತಗೊಳಿಸಿದರು.

Advertisement

ಪ್ರಮುಖರಾದ ಚೂಡಪ್ಪ ಬೋಬಾಟಿ, ವಿಲಾಸ ಯಡವಿ, ಸಂತೋಷ ಘಟಕಾಂಬಳೆ, ಶಾಂತಾ ಹಿರೆಕರ, ಚಂದ್ರಕಾಂತ ಕಮ್ಮಾರ, ಮಂಗಲಾ ಕಶೀಲಕರ, ತಾನಾಜಿ ಪಟ್ಟೇಕರ, ಸರ್ವೆàಶ ಖಾಂದೊಳಕರ, ಪ್ರವೀಣ ನಾಯ್ಕೋಜಿ, ರಾಕೇಶ ವಾಣಿ, ರಾಘವೇಂದ್ರ ಆನೆಗುಂದಿ, ನಾಗರಾಜ ಪಾಟೀಲ್‌, ವಿಜಯ ಬೋಬಾಟಿ, ಗಣಪತಿ ಕುಂದೆಕರ ಮೊದಲಾದವರು ಇದ್ದರು.

ಅಪ್ರಾಪ್ತ ಆಪಾದಿತ ಪೊಲೀಸ್‌ ವಶಕ್ಕೆ

ಹಳಿಯಾಳ: ಅನ್ಯಕೋಮಿನ ಯುವಕನಿಂದ ಛತ್ರಪತಿ ಶಿವಾಜಿ ಚಿತ್ರವನ್ನು ಆಶ್ಲೀಲವಾಗಿ ಪೋಸ್ಟ್‌ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಅಪ್ರಾಪ್ತ ವಯಸ್ಸಿನ ಆಪಾದಿತನನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

ಪಟ್ಟಣದ ದೇಶಪಾಂಡೆ ಆಶ್ರಯ ನಗರ ನಿವಾಸಿ ಯುವಕನನ್ನು ಮಹಾರಾಷ್ಟ್ರದಿಂದ ವಶಕ್ಕೆ ಪಡೆದಿರುವ ಹಳಿಯಾಳ ಪೊಲೀಸರು, ವಿಚಾರಣೆ ನಡೆಸುವ ವೇಳೆ ತಾನು ಮೊಬೈಲ್‌ ರಿಪೇರಿಗೆ ಕೊಟ್ಟಿದ್ದೆ, ಪೋಸ್ಟ್‌ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಯುವಕನ ಹೇಳಿಕೆಯ ನೈಜತೆ ಸಾಬೀತು ಪಡಿಸಲು ಎಫ್‌ಎಸ್‌ ಎಲ್‌ ರಿಪೋರ್ಟ್‌ ಮೂಲಕ ಯುಆರ್‌ಎಲ್‌ ಪರೀಕ್ಷೆಗೆ ಪೊಲೀಸರು ಕಳುಹಿಸಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಸಿಂಹಪಾಲು ಮರಾಠಾ ಸಮುದಾಯವನ್ನು ಹೊಂದಿರುವ ಹಳಿಯಾಳದಲ್ಲಿ ಶಿವಾಜಿ ಮಹಾರಾಜರು ಆರಾಧ್ಯ ದೈವವೇ ಸರಿ. ಇಂತಹ ಕ್ಷೇತ್ರದಲ್ಲಿ ಅನ್ಯಕೋಮಿನ ಯುವಕರಿಂದ ಮೇಲಿಂದ ಮೇಲೆ ಇಂತಹ ಘಟನೆ ನಡೆಯುತ್ತಿರುವುದು ಹಿಂದೂಗಳನ್ನು ಕೆರಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next