Advertisement

ಶಾಸಕರ ನಿವಾಸ ಎದುರು ಪ್ರತಿಭಟನೆ

05:50 PM Mar 23, 2021 | Team Udayavani |

ಸುರಪುರ: 2020-21ನೇ ಸಾಲಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತುಹಿಂದುಳಿದ ವರ್ಗಕ್ಕೆ ಕಡಿಮೆ ಅನುದಾನ ನೀಡುವ ಮೂಲಕ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದಲಿತ ಸಂಘಟನೆ ಕ್ರಾಂತಿಕಾರಿ ಬಣದ ಕಾರ್ಯಕರ್ತರು ಶಾಸಕ ರಾಜುಗೌಡ ನಿವಾಸದ ಎದುರು ಸೋಮವಾರ ಸಾಂಕೇತಿಕವಾಗಿ ಪ್ರತಿಭಟಿಸಿದರು.

Advertisement

ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ಮುಖ್ಯಮಂತ್ರಿ ಯಡಿಯೂರಪ್ಪಬಜೆಟ್‌ನಲ್ಲಿ ಮೇಲ್ವರ್ಗದ ಎಲ್ಲ ನಿಗಮಮಂಡಳಿ ಮತ್ತು ಮಠ ಮಂದಿರಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ.ಆದರೆ 3 ನೂರಕ್ಕೂ ಹೆಚ್ಚು ಜಾತಿಒಳಗೊಂಡಿರುವ ಪರಿಶಿಷ್ಟ ಜಾತಿ,ಪಂಗಡ ಮತ್ತು ಹಿಂದುಳಿದ ವರ್ಗಗಳ12 ನಿಗಮ ಮಂಡಳಿ ಸೇರಿಸಿ ಕೇವಲ500 ಕೋಟಿ ನೀಡಿ ಪರಿಶಿಷ್ಟ ಮತ್ತುಹಿಂದುಳಿದವರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ಲಿಂಗಾಯತ ಅಭಿವೃದ್ಧಿ ನಿಗಮಒಂದಕ್ಕೆ 5 ನೂರು ಕೋಟಿ ನೀಡಿ ಇತರೆನಿಗಮಗಳನ್ನು ಕಡೆ ಗಣಿಸಿರುವುದುಸರಿಯಲ್ಲ. ಕಲ್ಯಾಣ ಕರ್ನಾಟಕಭಾಗದಲ್ಲಿ ಪರಿಶಿಷ್ಟ ಜಾತಿ ಪಂಗಡಮತ್ತು ಹಿಂದುಳಿದ ವರ್ಗದ ಶಾಸಕರುಸಚಿವರು ಸಂಸದರು ಈ ಕುರಿತುಆಕ್ಷೇಪಣೆ ಎತ್ತದೆ ಸಿಎಂ ತಾರತಮ್ಯಕ್ಕೆಸಹಮತ ವ್ಯಕ್ತಪಡಿಸಿ ಸಮುದಾಯಕ್ಕೆ ಅನ್ಯಾಯ ಎಸೆಗುತ್ತಿದ್ದಾರೆ ಎಂದು ದೂರಿದರು.

ಈ ಕುರಿತು ಈ ಭಾಗದ ಶಾಸಕರು ಸಚಿವರು ಸದನದಲ್ಲಿ ಧ್ವನಿಎತ್ತಿ ಸರಕಾರದ ಮೇಲೆ ಒತ್ತಡ ತಂದುಪ್ರತೇಕ ಅನುಧಾನ ಘೋಷಿಸಿಸಲುಸಹಕರಿಸುವಂತೆ ಒತ್ತಾಯಿಸಿದರು.

ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ,ಪ್ರಮುಖರಾದ ಮಾನಪ್ಪ ಬಿಜಾಸ್ಪೂರ,ಮರಿಲಿಂಗಪ್ಪ ಹುಣಸಿಹೊಳೆ, ಮಾನಪ್ಪಶೆಳ್ಳಗಿ, ಜಟ್ಟೆಪ್ಪ ನಾಗರಾಳ, ಖಾಜಾಹುಸೇನ ಗುಡುಗುಂಟಿ, ಮಹೇಶಯಾದಗಿರಿ, ಮರಿಲಿಂಗಪ್ಪ ಹೊಸಮನಿ,ಶೇಖಪ್ಪ ಬಂಡಾರಿ, ಮಹೇಶ ಸುಂಗಲಕರ್‌ ಇತರರಿದ್ದರು.

Advertisement

ವಕೀಲರ ಸಂಘ ರಚನೆ ಕುರಿತು ಹೇಳಿಕೆ ನೀಡಿಲ್ಲ: ಎಪಿಪಿ ಸ್ಪಷ್ಟನೆ :

ಸುರಪುರ: ರಾಜ್ಯ ಪರಿಷತ್‌ನಿಂದ ಅಧಿಕೃತವಾಗಿ ಒಂದು ಸಂಘಇರುವಾಗ ವಕೀಲರು ಇನ್ನೊಂದುಸಂಘ ರಚನೆ ಮಾಡಿಕೊಂಡಿರುವುದು ಸರಿಯಲ್ಲ. ಕರ್ತವ್ಯ ನಿರ್ವಹಿಸುವನ್ಯಾಯಾಧೀಶರಿಗೂ ಇದು ಇರಿಸುಮುರಿಸು ಉಂಟು ಮಾಡುತ್ತದೆ ಎಂಬ ವರದಿ ಮಾ.19ರ ಪತ್ರಿಕೆಯಲ್ಲಿ ನನ್ನಹೆ ಸರಿನಿಂದಪ್ರಕಟವಾಗಿದೆ. ನಾನು ಆ ರೀತಿ ಹೇಳಿಕೆ ನೀಡಿಲ್ಲ. ಈ ಹೇಳಿಕೆಗೂ ಮತ್ತು ಸಂಘಕ್ಕೂ ಯಾವುದೇಸಂಬಂಧವಿಲ್ಲ ಎಂದು ಸರಕಾರಿ ಸಹಾಯಕ ಅಭಿಯೋಜಕ (ಎಪಿಪಿ) ರಾಘವೇಂದ್ರರಾವ್‌ ಜಹಾಗೀರದಾರ ಸ್ಪಷ್ಟನೆ ನೀಡಿದ್ದಾರೆ.

ವಕೀಲರ ಸಂಘದ ಕಾರ್ಯಾಲಯದಲ್ಲಿ ಅಂದು ನೂತನ ಎಜಿಪಿನಂದನಗೌಡ ಪಾಟೀಲ ಮತ್ತು ನನಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ವಕೀಲರಿಂದ ಸನ್ಮಾನ ಸ್ವೀಕರಿಸಿದ್ದೆ. ಆದರೆ  ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.ಸಂಘ ರಚನೆ ಕೈ ಬಿಟ್ಟು ಎಲ್ಲರೂ ಒಂದೇ ಸಂಘದಲ್ಲಿ ಮುಂದುವರಿಯುವಂತೆ ಯಾವುದೇ ರೀತಿಯ ಸಲಹೆ ನೀಡಿಲ್ಲ. ಸರಕಾರಿ ವಕೀಲನಾಗಿ ಕರ್ತವ್ಯಕ್ಕೆನಿಯುಕ್ತಿಗೊಂಡಿದ್ದೇನೆ. ವಕೀಲರ ಸಂಘಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next