ಮುಳಬಾಗಿಲು: ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಸ್ಥೆಸರಿಪಡಿಸಿ, ಇಲ್ಲವೇ ಸರ್ಕಾರಿ ಆಸ್ಪತ್ರೆಯನ್ನುಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಿ ಎಂದು ರೈತಸಂಘದ ಕಾರ್ಯಕರ್ತರು, ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ತಾಲೂಕಿನಲ್ಲಿಎಲ್ಲಾ ಆಸ್ಪತ್ರೆಗಳಲ್ಲಿ ಎಲ್ಲೆಡೆ ಅವ್ಯವಸ್ಥೆಹೇಳತೀರದಾಗಿದೆ. ಒಳ, ಹೊರ ರೋಗಿಗಳು ಪ್ರತಿಯೊಂದು ಸೌಲಭ್ಯ ಪಡೆಯಲು ಲಂಚನೀಡಬೇಕಾಗಿದೆ. ಅವ್ಯವಸ್ಥೆಗಳಿಂದ ಸಾಕಷ್ಟುತೊಂದರೆಗೆ ಸಿಲುಕಿದ್ದಾರೆ. ಹೆಸರಿಗೆ ಮಾತ್ರವೇ ತಾಲೂಕು ಆಸ್ಪತ್ರೆಯಾಗಿದ್ದು, ಇಲ್ಲಿ ಯಾವ ಸೌಲಭ್ಯವಿಲ್ಲ ಎಂದು ಆರೋಪಿಸಿದರು.
ಅಧಿಕಾರಿ, ಸಿಬ್ಬಂದಿ ಕಾಲಹರಣ: ತುರ್ತು ಚಿಕಿತ್ಸೆ ನೀಡಲು ಸಾಧ್ಯವಿಲ್ಲದ ಈ ಆಸ್ಪತ್ರೆಯಲ್ಲಿ ಹೆರಿಗೆಸೇರಿದಂತೆ ಮತ್ತಿತರ ಸಮಸ್ಯೆಗಳಿಗೆ ಚಿಕಿತ್ಸೆಸಿಗುತ್ತದೆ ಎಂದು ಬರುವವರು ನರಕನೋಡಿಕೊಂಡೇ ಹೋಗ ಬೇಕಾಗಿದೆ. ಯಾವುದೇಒಂದು ಸಣ್ಣ ಸಮಸ್ಯೆಗೂ ಇಲ್ಲಿ ಚಿಕಿತ್ಸೆ ನೀಡಲುಸಾಧ್ಯವಾಗದೆ ಖಾಸಗಿ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಅಧಿಕಾರಿಗಳು ಮತ್ತು ಸಿಬ್ಬಂದಿ ಕಾಲಹರಣ ಮಾಡಿಕೊಂಡು ಹೋಗುತ್ತಿದ್ದಾರೆ. ಇದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲೆ ಜನರಿಗೆ ವಿಶ್ವಾಸ, ನಂಬಿಕೆ ಇಲ್ಲವಾಗಿದೆ ಎಂದರು.
ಅನುದಾನ ಎಲ್ಲಿ ಖರ್ಚಾಗಿದೆ: ಸರ್ಕಾರಿ ಆಸ್ಪತ್ರೆಗಳಿಗೆ ನೂರಾರು, ಸಾವಿರಾರು ಕೋಟಿ ಅನುದಾನ ನೀಡಲಾಗಿದೆ ಎಂದು ಆರೋಗ್ಯಸಚಿವರು ಹೇಳುತ್ತಲೇ ಇದ್ದಾರೆ. ಆದರೆ, ಆಅನುದಾನ ಎಲ್ಲಿ ಖರ್ಚಾಗಿದೆ ಎನ್ನುವುದುಯಾರಿಗೂ ತಿಳಿಯುತ್ತಿಲ್ಲ. ಇಲ್ಲಿನ ಅವ್ಯವಸ್ಥೆಗಳಂತೂಬದಲಾಗುವ ಸಾಧ್ಯತೆ ಕಾಣುತ್ತಿಲ್ಲ. ಹೀಗಾಗಿಖಾಸಗಿ ಆಸ್ಪತ್ರೆಗಳಿಗೆ ಸರ್ಕಾರಿ ಆಸ್ಪತ್ರೆಗಳನ್ನುಮಾರಾಟ ಮಾಡಿ ಎಂದು ಆಗ್ರಹಿಸಿದರು. ತಹಶೀಲ್ದಾರ್ ರಾಜಶೇಖರ್ ಮತ್ತು ಡಾ.ಶಂಕರ್‌ಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಫಾರೂಖ್‌ಪಾಷ, ಹಸಿರು ಸೇನೆ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್,ಪ್ರಧಾನ ಕಾರ್ಯದರ್ಶಿ ವಿಜಯ್‌ಪಾಲ್, ಅಣ್ಣಿಹಳ್ಳಿ ನಾಗರಾಜ್, ವೆಂಕಟರವಣಪ್ಪ, ಬಸ್‌ವಿಶ್ವ, ಮೇಲಗಾಣಿ ದೇವರಾಜ್, ಹೆಬ್ಬಣಿಆನಂದರೆಡ್ಡಿ, ರಾಜ್ಯ ಸಂಚಾಲಕ ನಲ್ಲಾಂಡಹಳ್ಳಿಕೇಶವ, ಪೊಂಬರಹಳ್ಳಿ ನವೀನ್, ಜುಬೇದ್‌ಪಾಷ,ವೇಣು, ಪುತ್ತೇರಿ ರಾಜು, ಲಾಯರ್ ಮಣಿ ಹಾಜರಿದ್ದರು.