Advertisement

ಮೂಲ ಸೌಕರ್ಯಕ್ಕಾಗಿ ಅನಿರ್ದಿಷ್ಟಾವಧಿ ಧರಣಿ

03:56 PM Oct 01, 2019 | Suhan S |

ಸಿರವಾರ: ತಾಲೂಕಿನ ಮಲ್ಲಟ ಗ್ರಾಮದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಗ್ರಾಪಂ ಸದಸ್ಯ ಬಸವರಾಜ ನಾಯಕ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ಗ್ರಾಮ ಪಂಚಾಯಿತಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

Advertisement

ಗ್ರಾಮ ಪಂಚಾಯಿತಿಗೆ ಸತತ ಗೈರಾಗುತ್ತಿರುವ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು. ಗ್ರಾಮದ 1ನೇ ವಾರ್ಡ್‌ನಲ್ಲಿ ಸಿಸಿ ರಸ್ತೆ, ಚರಂಡಿ, ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. 2016ರಿಂದ 2019ನೇ ಸಾಲಿನವರೆಗೆ ಕೈಗೊಂಡ 14ನೇ ಹಣಕಾಸು ಯೋಜನೆಗಳ ಕಾಮಗಾರಿ ತನಿಖೆ ನಡೆಸಬೇಕು. ಎನ್‌ಆರ್‌ಇಜಿ ಯೋಜನೆಯಡಿ ದನದ ಶೆಡ್‌ ನಿರ್ಮಿಸಿಕೊಂಡವರಿಗೆಸಹಾಯಧನ ಬಿಡುಗಡೆ ಮಾಡಬೇಕು. ಕೂಲಿ ಕಾರ್ಮಿಕರಿಗೆ ಕೂಲಿ ಪಾವತಿಸಬೇಕು. ವಿದ್ಯಾರ್ಥಿಗಳ ಪುಸ್ತಕಗಳಿಗೆ ಸಹಾಯಧನ ನೀಡಬೇಕು ಎಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಲಿಖೀತ ಭರವಸೆ ನೀಡುವವರೆಗೆ ಧರಣಿ ನಡೆಸಲಾಗುವುದು. ನಿರ್ಲಕ್ಷಿಸಿದರೆ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.  ಶಿವುಕುಮಾರ, ಶಾಂತಮ್ಮ, ಮುಖಂಡರಾದ ಶಿಖರೇಶ್ವರ ಸ್ವಾಮಿ, ಆಂಜನೇಯ ನಾಯಕ, ರಮೇಶ ಭಂಡಾರಿ, ಶಂಕರ ಮರಾಟ, ಗ್ರಾಮಸ್ಥರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next