ಮದ್ದೂರು: ಹೊರಗುತ್ತಿಗೆ ವಾಹನ ಚಾಲಕರನ್ನು ಕೆಲಸದಿಂದ ತೆಗೆದು ಹಾಕಿ ಕಿರುಕುಳ ನೀಡುತ್ತಿರುವ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ರಾಜ್ಯಪಾಲಿಕೆ, ನಗರಸಭೆ, ಪುರಸಭೆ, ಪಪಂ ಹೊರ ಗುತ್ತಿಗೆ ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಕೆಲ ಪುರಸಭೆ ಸದಸ್ಯರ ಜತೆಗೂಡಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಜಮಾವಣೆಗೊಂಡ ಸಂಘಟನೆ ಕಾರ್ಯಕರ್ತರು ಹಾಗೂ ಕೆಲ ಪುರಸಭೆ ಸದಸ್ಯರು, ಮುಖ್ಯಾಧಿಕಾರಿ ಹಾಗೂ ಟೆಂಡರ್‌ದಾರರ ವಿರುದ್ಧ ಘೋಷಣೆ ಕೂಗಿದರಲ್ಲದೇ ಕೆಲಸದಿಂದ ತೆಗೆದುಹಾಕಿರುವ ನೌಕರ ಶ್ರೀನಿವಾಸ್ ಅವರನ್ನು ಕೂಡಲೇ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳುವಂತೆ ಆಗ್ರಹಿಸಿದರು.
ಕರ್ತವ್ಯ ಲೋಪವಿಲ್ಲ: ಹೊರಗುತ್ತಿಗೆ ಚಾಲಕರ ಸಂಘದ ಜಿಲ್ಲಾ ಉಪಾ ಧ್ಯಕ್ಷ ಶ್ರೀನಿವಾಸ್ ಅವರ ಕರ್ತವ್ಯದಲ್ಲಿ ಯಾವುದೇ ಲೋಪವಿಲ್ಲ. ಗುತ್ತಿಗೆ ಏಜೆನ್ಸಿ ಮೂಲಕ ಏಕಾ ಏಕಿ ಕೆಲಸದಿಂದ ತೆಗೆದು ಹಾಕಿದ್ದು ಈ ಹಿಂದೆ ಪುರಸಭೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರನ್ನು ಮಲದ ಗುಂಡಿಗೆ ಇಳಿಸಿ ದ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡಿದ್ದಾರೆಂಬ ಕಾರಣದಿಂದ ಏಕಾಏಕಿ ಕರ್ತವ್ಯ ದಿಂದ ವಜಾಗೊಳಿಸಿದ್ದಾರೆಂದು ಆರೋಪಿಸಿದರು.
ಅಮಾನತುಪಡಿಸಿ: ಯಾವುದೇ ಸುರಕ್ಷಾ ಸಾಮಗ್ರಿ ನೀಡದೆ ಪೌರಕಾರ್ಮಿಕರನ್ನು ಮ್ಯಾನ್‌ಹೋಲ್‌ಗಿಳಿಸಿ ಮಲ ಸ್ವಚ್ಛಗೊಳಿಸು ವಂತೆ ಮಾಡಿರುವ ಮುಖ್ಯಾಧಿಕಾರಿ ಮುರುಗೇಶ್‌ರನ್ನು ಅಮಾನತುಪಡಿಸುವಂತೆ ಆಗ್ರಹಿಸಿದರು. ನಿಯಮ ಮೀರಿ ಗುತ್ತಿಗೆ ಪಡೆದಿರುವ ಅರಕೇಶ್ವರ ಎಂಟರ್ ಪ್ರೈಸಸ್ ಆದೇಶ ಹಿಂಪಡೆಯುವುದು, ನೌಕರರಿಗೆ ಸಮವಸ್ತ್ರ, ನೇರ ವೇತನ ಜಾರಿಗೊಳಿಸುವಂತೆ ಆಗ್ರಹಿಸಿದರು.
ಸೌಲಭ್ಯ ಕಲ್ಪಿಸಿ: ಪುರಸಭೆ ಅಧ್ಯಕ ಸುರೇಶ್ ಕುಮಾರ್ ಮಾತನಾಡಿ, ಕೆಲಸದಿಂದ ತೆಗೆದು ಹಾಕಿರುವ ವಾಹನ ಚಾಲಕನನ್ನು ಮತ್ತೆ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳುವ ಜತೆಗೆ ಅರಕೇಶ್ವರ ಏಜೆನ್ಸಿಗೆ ನೋಟೀಸ್ ಜಾರಿ ಮಾಡಿ ಮಾಹಿತಿಪಡೆದು ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಪುರಸಭೆ ಸದಸ್ಯರಾದ ಪ್ರಿಯಾಂಕ, ಕಮಲ್‌ನಾಥ್, ಮನೋಜ್, ಸಂಘಟನೆ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಪ್ರಾಂತ ರೈತಸಂಘದ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್, ಮುಖಂಡ ಅಪ್ಪು.ಪಿ.ಗೌಡ, ಅಂಬರೀಷ್, ದಿನೇಶ್, ಚಂದ್ರು, ಇನಾಯಿತ್, ಪುಟ್ಟಸ್ವಾಮಿ, ವೆಂಕಟಲಕ್ಷ್ಮೀ ನೇತೃತ್ವ ವಹಿಸಿದ ರು .