Advertisement

ಆಸರೆ ಮನೆಗಳ ಹಕ್ಕು ಪತ್ರಕ್ಕೆ ಒತ್ತಾಯ : ತಲೆ ಮೇಲೆ ಕಲ್ಲುಹೊತ್ತು ಪ್ರತಿಭಟನೆ

04:21 PM Mar 10, 2021 | Team Udayavani |

ರೋಣ (ಗದಗ) : ತಾಲೂಕಿನ ನೆರೆ ಪೀಡಿತ ಪ್ರದೇಶದ ಗಾಡಗೋಳಿ ನವಗ್ರಾಮದಲ್ಲಿ ನಿರ್ಮಿಸಿರುವ ಆಸರೆ ಮನೆಗಳ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಎದುರು ಫಲಾನುಭವಿಗಳು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟಿಸುವ ಮೂಲಕ ಸ್ಥಳೀಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕಳೆದ ಎರಡು ದಿನಗಳಿಂದ ನಿರಂತರ ಹೋರಾಟ ಮುಂದುವರಿಸಿರುವ ನೆರೆ ಸಂತ್ರಸ್ತರು, ಗಾಡಗೋಳಿ ನವಗ್ರಮದ ಆಸರೆ ಮನೆಗಳ ಹಕ್ಕುಕ್ಕಾಗಿ ಒತ್ತಾಯಿಸುತ್ತಿದ್ದಾರೆ.

ಎರಡನೇ ದಿನಕ್ಕೆ ಕಾಲಿಟ್ಟಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ನರಗುಂದ ಕ್ಷೇತ್ರದ ಮಾಜಿ ಶಾಸಕ ಬಿ.ಆರ್.ಯಾವಗಲ್ ಸ್ಥಳಕ್ಕೆ ಭೇಟಿ ನೀಡಿ, ನೆರೆ ಸಂತ್ರಸ್ತರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಬಳಿಕ ಪ್ರತಿಭಟನಾ ಸ್ಥಳಕ್ಕೆ ರೋಣ ತಹಶಿಲ್ದಾರ ಜೆ.ಬಿ.ಜಕ್ಕನಗೌಡ್ರ ಅವರನ್ನು ಕರೆಯಿಸಿ, ಸಮಸ್ಯೆ ಬಗೆಹರಿಸಲು ಎರಡು ವಾರಗಳ ಗಡುವು ನೀಡಿದರು. ಅದಕ್ಕೆ ತಹಶೀಲಾರ್ ಜೆ.ಬಿ.ಜಕ್ಕನಗೌಡ್ರ ತಲೆ ದೂಗಿಸಿದ್ದರಿಂದ ನೆರೆ ಸಂತ್ರಸ್ತರು ಪ್ರತಿಭಟನೆ ಹಿಂಪಡೆದರು.

Advertisement

ಪ್ರತಿಭಟನೆಯಲ್ಲಿ ಎನ್.ಬಿ.ಚಲವಾದಿ, ಈರಣ್ಣ ತಳವಾರ,  ಶರಣಪ್ಪ ಜಂಗಣ್ಣವರ, ಮುತ್ತಣ್ಣ ಹಾಲಣ್ಣವರ, ಗ್ರಾಪಂ ಸದಸ್ಯ ಪ್ರಕಾಶ ಭಜಂತ್ರಿ, ಸಿದ್ದು ಬೊಮ್ಮನಗೌಡ್ರ, ಲಲಿತಾ ಪಂಚಾಳ, ಸುವರ್ಣ ಗಣಿ, ಲಕ್ಕಮ್ಮ ತಳವಾರ, ಯಲ್ಲಮ್ಮ ತಳವಾರ, ದ್ರಾಕ್ಷಾಯಿಣಿ ಪುರಾಣಿಕಮಠ, ಕಲಾವತಿ ತಳವಾರ, ಹುಸನವ್ವ ಬೇಟಗೇರಿ, ಮಂಜುಳಾ ಭಜಂತ್ರಿ, ಪ್ರೇಮಾ ಪರಸಣ್ಣವರ, ಬೇಗಂ ನಧಾಪ, ಖಾತನಬೀ ನಧಾಪ, ಗಿರಿಜವ್ವ ತಳವಾರ, ಲಕ್ಷ್ಮೀಬಾಯಿ ಹೂಗಾರ, ಶಾರದಾ ದೇಶಾಯಿ, ಪಾರವ್ವ ಮಡಿವಾಳರ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next