Advertisement

ನೀರಿಗಾಗಿ ಹರವಾಳ ಗ್ರಾಪಂ ಎದುರು ಪ್ರತಿಭಟನೆ

09:50 AM Apr 19, 2022 | Team Udayavani |

ಜೇವರ್ಗಿ: ಕುಡಿಯುವ ನೀರಿನ ಸೌಕರ್ಯ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘ ಗ್ರಾಮ ಘಟಕದ ವತಿಯಿಂದ ಸೋಮವಾರ ತಾಲೂಕಿನ ಹರವಾಳ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಬೇಸಿಗೆಯಲ್ಲಿ ಹರವಾಳ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದರಿಂದ ಮಹಿಳೆಯರು, ಮಕ್ಕಳು ನಿತ್ಯ ಸಾಕಷ್ಟು ತೊಂದರೆ ಅನುಭವಿಸುವಂತೆ ಆಗಿದೆ. ಕೂಡಲೇ ಸಂಬಂಧಪಟ್ಟವರು ಮುತುವರ್ಜಿ ವಹಿಸಿ ಸಮರ್ಪಕ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಬೇಕು. ಉದ್ಯೋಗ ಖಾತ್ರಿ ಕೆಲಸ ನಿರಂತರವಾಗಿ ನೀಡಬೇಕು. 14ನೇ ಹಣಕಾಸು ಅನುದಾನ ಸಮರ್ಪಕ ಬಳಕೆ ಮಾಡಬೇಕು. ಎನ್‌ಎಂಎಂಎಸ್‌ ಆ್ಯಪ್‌ ರದ್ದುಪಡಿಸಬೇಕು. ಹರವಾಳ ಗ್ರಾಮದ ಗಲ್ಲಿಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಂತರ ಗ್ರಾಪಂ ಅದ್ಯಕ್ಷ ಆಕಾಶ ಗಣಜಲಖೇಡಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ತಾಲೂಕು ಅದ್ಯಕ್ಷ ಸಿದ್ಧರಾಮ ಅದ್ವಾನಿ, ಗ್ರಾಮ ಘಟಕದ ಅಧ್ಯಕ್ಷೆ ಜಯಶ್ರೀ ಜವಳಿ, ಕಾರ್ಯದರ್ಶಿ ಸಂತೋಷ ಉಮ್ಮರಗಿ, ಖಜಾಂಚಿ ಅಬ್ದುಲ್‌ ಮೈನಾಳ, ಉಪಾಧ್ಯಕ್ಷ ನಾಗರಾಜ ಕಾಳಪ್ಪಗೋಳ, ಆನಂದಪ್ಪ ಚಿಂಚೋಳಿ, ಸಂತೋಷ ಬಂಗಾರಶೆಟ್ಟಿ, ಬೀರಣ್ಣ ಜಗಲಿಮನಿ, ಮಲ್ಲಮ್ಮ ಜಮಾದಾರ, ಸಂಗಣ್ಣ ಅರಳಗುಂಡಗಿ, ನಾಗಮ್ಮ ಉಮ್ಮರಗಿ, ಗುರಣ್ಣ ಚಿಂಚೋಳಿ, ಮರೆಪ್ಪ ಜೇವರ್ಗಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next