Advertisement

ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ

12:03 PM Jun 30, 2019 | Suhan S |

ಕೊಪ್ಪಳ: ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಿವೃತ್ತಿ ಬಿಲ್ ಮಾಡದೇ ವರ್ಷದಿಂದ ಗೊಳಾಡಿಸುತ್ತಿರುವ ಅಧಿಕಾರಿಗಳ ವೈಖರಿಗೆ ಬೇಸತ್ತು ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ವೈ. ಸುದರ್ಶನ ಅವರು ಡಿಡಿಪಿಐ ಕಚೇರಿ ಮುಂದೆ ದಿಢೀರ್‌ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ.

Advertisement

ವೈ. ಸುದರ್ಶನ ಅವರು ಜಿಲ್ಲೆಯಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಕಾಲ ಜಿಲ್ಲಾ ಪ್ರಭಾರಿ ದೈಹಿಕ ಶಿಕ್ಷಣಾಕಾರಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಕಳೆದ 2018ರಲ್ಲಿ ಅವರು ನಿವೃತ್ತಿಯಾಗಿದ್ದು, ಪಿಂಚಣಿ ಬಿಟ್ಟರೆ ವಿಮೆ ಸೇರಿದಂತೆ ಇತರೆ ಕೆಲವೊಂದು ಕ್ಲೈಮ್‌ಗಳನ್ನು ಮಾಡಿಕೊಳ್ಳಲು ಪತ್ರ ವ್ಯವಹಾರ ನಡೆಸದ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿಯ ನಿವೃತ್ತಿ ಹಣ ಪಡೆಯಲು ಅಲೆದಾಡುವಂತಾಗಿದೆ. ಈ ಬಗ್ಗೆ ಹಲವು ಬಾರಿ ಇಲಾಖೆಗೆ ಬಂದು ಮಾಹಿತಿ ನೀಡಿ, ಮನವಿ ಕೊಟ್ಟು ತೆರಳಿದರೂ ಇಲಾಖೆ ಅಯ್ಯನಗೌಡ ಅವರು ಸ್ಪಂದಿಸುತ್ತಿಲ್ಲ. ಇದರಿಂದ ಸಾಕಾಗಿ ಹೋಗಿದೆ. ಗ್ರುಪ್‌ ಇನ್ಸೂರೆನ್ಸ್‌ ಸೇರಿ ವಿವಿಧ ಬಿಲ್ ಸೇರಿ ಒಟ್ಟು 25 ಲಕ್ಷಕ್ಕೂ ಹೆಚ್ಚು ಹಣ ನನಗೆ ಬರಬೇಕಿದೆ. ಆದರೆ ಅಯ್ಯನಗೌಡ ಅವರು ನಿಮ್ಮಿಂದ ಇನ್ನೂ ಪತ್ರ ಬಂದಿಲ್ಲ ಎಂಬ ನೆಪ ಹೇಳುತ್ತಿದ್ದಾರೆ.

ಸುಮ್ಮನೆ ಗುಲಬುರ್ಗಾ ಕಚೇರಿಯಿಂದ ಕ್ಲಿಯರೆನ್ಸ್‌ ಪತ್ರ ಬಂದಿಲ್ಲ ಎನ್ನುವ ಕಾರಣ ನೀಡುತ್ತಿದ್ದು ರಾಜ್ಯದ ಯಾವುದೇ ವಿಭಾಗದಲ್ಲಿ ಈ ರೀತಿಯ ನಿಯಮ ಇಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಇವರ ಗುಲಬುರ್ಗಾದಿಂದ ಕ್ಲಿಯರೆನ್ಸ್‌ ಬರಬೇಕು ಎನ್ನುವ ನಿಯಮ ಹೇಳುತ್ತಿದ್ದಾರೆ. ಇದರಿಂದ ಸಾಕಾಗಿ ಹೋಗಿದೆ. ಇವರ ವರ್ತನೆಗೆ ಬೇಸತ್ತಿದ್ದೇನೆ. ನಾನೂ ಇದೇ ಇಲಾಖೆಯಲ್ಲಿಯೇ ಹಲವು ವರ್ಷಗಳ ಕಾಲ ಸೇವೆ ಮಾಡಿದ್ದೇನೆ. ಆದರೂ ನನ್ನನ್ನು ಗೋಳಾಡಿಸುತ್ತಿದ್ದಾರೆ. ಇದಕ್ಕೆ ಬೇಸತ್ತು ನಾನು ಧರಣಿ ನಡೆಸುತ್ತಿದ್ದೇನೆ ಎಂದು ನಿವೃತ್ತ ಅಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಯಾರಿಗೂ ಒಂದು ಪೈಸೆ ದುಡ್ಡು ಕೊಡುವ ವ್ಯಕ್ತಿಯಲ್ಲ. ನನಗೆ ಬರಬೇಕಾದ ಹಣವು ಸಕಾಲಕ್ಕೆ ಬಾರದಿದ್ದರೆ ಕೋರ್ಟ್‌ ಮೋರೆ ಹೋಗುವೆನು. ಅಯ್ಯನಗೌಡ ಅವರ ವಿರುದ್ಧವೇ ಬೆಂಗಳೂರಿನಲ್ಲಿ ಕೇಸ್‌ ಮಾಡಿ ಕೋರ್ಟ್‌ ಮೂಲಕ ನಿಯಮಾನುಸಾರ ಬಾಕಿ ಬಿಲ್ ಪಡೆಯುವೆನು ಎನ್ನುವ ಮಾತನ್ನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next