ದೊಡ್ಡಬಳ್ಳಾಪುರ: ಕೇರಳ ಸರ್ಕಾರ ಕರ್ನಾಟಕದಿಂದ ಅಯ್ಯಪ್ಪ ದರ್ಶನಕ್ಕೆ ತೆರಳುವ ಭಕ್ತರಿಗೆ, ಕೋವಿಡ್-19 ಹೆಸರಲ್ಲಿ ಕಿರುಕುಳ ಹಾಗೂ ಪರೀಕ್ಷೆ ಹೆಸರಲ್ಲಿ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಮತ್ತು ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ ನಗರದ ನೆಲದ ಆಂಜನೇಯ ದೇವಾಲಯದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತು.
ಈ ವೇಳೆಮಾತನಾಡಿದಪ್ರತಿಭಟನಾ ನಿರತರು, ಕರ್ನಾಟಕದಿಂದ ಶಬರಿಮಲೆಗೆ ತೆರಳುತ್ತಿರುವ ಮಾಲಾಧಾರಿಗಳು ಸರ್ಕಾರದ ಸೂಚನೆಯ ಅನ್ವಯ ಕೋವಿಡ್-19 ಪರೀಕ್ಷೆಗೆ ಒಳಗಾಗಿ ವರದಿಕೊಂಡೊಯ್ದರು. ಕೇರಳ ಸರ್ಕಾರ ಅದನ್ನು ಪಡೆಯದೆ ಮತ್ತೆ ಟೆಸ್ಟ್ ಮಾಡಿಸಿ ನೆಗೆಟಿವ್ ಮುದ್ರೆ ಒತ್ತಿ ಸುಲಿಗೆ ಮಾಡುತ್ತಿದ್ದಾದು ದೂರಿದರು.
ಪವಿತ್ರ ಕ್ಷೇತ್ರಗಳಾದ ಶಿರಡಿ, ಧರ್ಮಸ್ಥಳ, ಮಂತ್ರಾಲಯ, ಹಾಗೂ ಇನ್ನಿತರೆಡೆ ದಿನಕ್ಕೆ 10 ಸಾವಿರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿದರೆ ಕೇರಳ ಸರ್ಕಾರ 10-15 ಕೋಟಿ ಭಕ್ತರು ತೆರಳುವ ಶಬರಿಮಲೆಗೆ ಕೇವಲ 1 ಸಾವಿರ ಭಕ್ತರಿಗೆ ಅವಕಾಶ ನೀಡಿ ಹಿಂದೂ ವಿರೋಧಿ ನೀತಿ ಮುಂದುವರಿಸಿದೆ. ಈ ಕೂಡಲೇ ಕೇಂದ್ರ-ರಾಜ್ಯ ಸರ್ಕಾರ ಈ ಧೋರಣೆಯನ್ನು ಗಮನಿಸಿ ಅಯ್ಯಪ್ಪ ಮಾಲೆ ಹಾಕುವ ಭಕ್ತರಿಗೆ ನೆಮ್ಮದಿಯಿಂದ ಭಗವಂತನ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.
ಅಯ್ಯಪ್ಪ ಗುರು ಸ್ವಾಮಿಗಳಾದಮಹಾಂತೇಶ್,ಹಿಂದುಜಾಗರಣವೇದಿಕೆ ಬೆಂ.ಗ್ರಾ.ಜಿಲ್ಲಾ ಪ್ರಧಾನ ಕಾರ್ಯದರ್ಶಿಆನಂದ್, ತಾಲೂಕು ಮುಖಂಡರಾದ ಘಾಟಿ ಚಿನ್ನಿ. ಖಾಸ್‌ಭಾಗ್‌ವಾಸು,ನಗರಕಾರ್ಯದರ್ಶಿಕರೇನಹಳ್ಳಿ ಮಂಜುನಾಥ, ಸುನಾಮಿ ಸಂತು ವಕೀಲರಾದ ಚಂದ್ರು,ಶಶಿಕುಮಾರ್ ಯಾಧವ್, ಹಿಂ ಜಾ ವೇ ತಾಲೂಕುಮುಖಂಡರಾದ ಘಾಟಿ ಚಿನ್ನಿ, ಸಾಹಿಲ್ ಸುರಾಣ, ,ಸುಬ್ಬರಮಣಿ, ಸುಬ್ರಮಣಿ (ಸುಬ್ಬಣ್ಣ), ಗ್ಯಾಸ್ ಅಭಿ ಮತ್ತಿತರರು ಭಾಗವಹಿಸಿದ್ದರು.