Advertisement

ಮೀಸಲಿಗೆ ಆಗ್ರಹಿಸಿ ಒನಕೆ ಪ್ರದರ್ಶನ  

07:51 PM Feb 04, 2021 | Team Udayavani |

ಚಿತ್ರದುರ್ಗ: ಮೀಸಲಾತಿಗೆ ಒತ್ತಾಯಿಸಿ ದಾವಣಗೆರೆಯಲ್ಲಿ ಬಾರುಕೋಲು ಚಳವಳಿ ನಡೆಸಿದ್ದ ಪಂಚಮಸಾಲಿ ಸಮುದಾಯದ  ಪಾದಯಾತ್ರಿಗಳು ಚಿತ್ರದುರ್ಗದಲ್ಲಿ ಬುಧವಾರ ಒನಕೆ ಪ್ರದರ್ಶನ ಮಾಡಿ ವಿಭಿನ್ನವಾಗಿ ಪ್ರತಿಭಟಿಸಿದರು. ಕೂಡಲಸಂಗಮದಿಂದ ಬೆಂಗಳೂರಿಗೆ ಹೊರಟಿರುವ ಪಂಚಲಕ್ಷ ಹೆಜ್ಜೆಗಳ ಪಾದಯಾತ್ರೆಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಒನಕೆ ಹಿಡಿದ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಬಿ.ಡಿ. ರಸ್ತೆಯ ಪಂಚಾಚಾರ್ಯ ಕಲ್ಯಾಣ ಮಂಟಪದಿಂದ ಹೊರಟ ಪಾದಯಾತ್ರೆಯಲ್ಲಿ ಮಹಿಳೆಯರು ಒನಕೆ ಹಿಡಿದು ಶಕ್ತಿ  ಪ್ರದರ್ಶಿಸಿದರು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಕುರಿತ ಘೋಷಣೆ ಕೂಗಿದರು. ಒನಕೆ ಹಿಡಿದು ಪಾಲ್ಗೊಳ್ಳಲು ಮಂಗಳವಾರ ಪೊಲೀಸರು ಅವಕಾಶ ಕಲ್ಪಿಸಿರಲಿಲ್ಲ. ಹೀಗಾಗಿ ಒಂದು ದಿನ ತಡವಾಗಿ ಚಳವಳಿ ನಡೆಯಿತು.

ಈ ವೇಳೆ ಮಾತನಾಡಿದ ಕೂಡಲಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ, ಓಬವ್ವನ ಪರಾಕ್ರಮದ ಸಂಕೇತವಾದ  ಒನಕೆಯನ್ನು ಮಹಿಳೆಯರು ಸ್ವಾಭಿಮಾನದಿಂದ ಹಿಡಿದಿದ್ದಾರೆ. ರೈತರು, ಗ್ರಾಮೀಣ ಮಹಿಳೆಯರು ನಿತ್ಯ ಒನಕೆ ಬಳಕೆ ಮಾಡುತ್ತಾರೆ. ಇದನ್ನು ಆಯುಧ ಎಂದು ಭಾವಿಸಬೇಡಿ. ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಸಮುದಾಯದ ಪರವಾಗಿ ವಿಧಾನ ಮಂಡಲದ ಸದನದ ಬಾವಿಗೆ ಇಳಿದು ಪ್ರತಿಭಟಿಸಿರುವುದು ಶ್ಲಾಘನೀಯ. ನಮ್ಮ ಧ್ವನಿ ಅಲ್ಲಿಗೆ ಮುಟ್ಟಿದೆ. ಹಾಲುಮತ  ಸಮುದಾಯದ ಇತರರು ಇದಕ್ಕೆ ಬೆಂಬಲ ನೀಡಿದ್ದು ಸ್ಫೂರ್ತಿ ತಂದಿದೆ. ಪಂಚಮಸಾಲಿ ಸಮುದಾಯದ ಶಾಸಕರು ಯತ್ನಾಳ ಅವರಂತೆ ಧೈರ್ಯ ತೋರಬೇಕು ಎಂದರು.

 ಇದನ್ನೂ ಓದಿ :60 ಅಡಿ ಸಮುದ್ರದಾಳದಲ್ಲಿ ತಾಳಿ ಕಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ಜೋಡಿ

ಸ್ವಾಮೀಜಿಗಳೊಂದಿಗೆ ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲ, ಮಾಜಿ ಶಾಸಕ ಬಿ.ಆರ್‌. ಪಾಟೀಲ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ ಸೇರಿದಂತೆ ಅನೇಕರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next