Advertisement
“ರೈಟ್ಸ್ ಆಕ್ಟಿವಿಸ್ಟ್ಸ್’ ಹೆಸರಿನ ಅಡಿಯಲ್ಲಿ ಈ ಪ್ರತಿಭಟನೆ ನಡೆದಿದ್ದು, ಟ್ರಂಪ್ ಅವರ ವಲಸೆ ನೀತಿ, ಅವರ ಉದ್ಯಮ ಒಪ್ಪಂದಗಳು, ಅಧ್ಯ ಕ್ಷೀಯ ಚುನಾವಣೆ ವೇಳೆ ಟ್ರಂಪ್ ಪರವಾಗಿ ರಷ್ಯಾ ಮಧ್ಯ ಪ್ರವೇಶಿಸಿರುವ ಸಾಧ್ಯತೆಗಳ ವಿರುದ್ಧ ಪ್ರತಿಭಟನೆ ನಡೆದಿದೆ. ಟ್ರಂಪ್ ಅಧಿಕಾರಕ್ಕೆ ಬಂದ ಮೊದಲನೇ ದಿನದಿಂದಲೇ ಸಂವಿಧಾನವನ್ನು ಉಲ್ಲಂ ಸುತ್ತಲೇ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು, ಲಾಸ್ ಏಂಜಲೀಸ್ ಒಂದರಲ್ಲೇ ಪ್ರತಿಭಟನೆಗೆ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ. ಇದೇ ವೇಳೆ ಟ್ರಂಪ್ ಅವರಿಗೆ ಸೇರಿದ, ನ್ಯೂಯಾರ್ಕ್‌ನಲ್ಲಿರುವ ಟ್ರಂಪ್ ಇಂಟರ್‌ನ್ಯಾಷನಲ್ ಹೋಟೆಲ್ ಎದುರೂ ಪ್ರತಿಭಟನೆ ನಡೆದಿದೆ. ಅಟ್ಲಾಂಟಾ, ಆಸ್ಟಿನ್, ಷಿಕಾಗೋ, ನ್ಯೂ ಓರಾÉನ್ಸ್‌ನಲ್ಲಿ ಭಾರೀ ಪ್ರತಿಭಟನೆಗಳು ನಡೆದಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾನಸಿಕ ಅಸ್ವಸ್ಥರಾ ಗಿದ್ದು, ಅವರನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಒತ್ತಾಯಗಳು ಕೇಳಿಬರತೊಡಗಿವೆ. ಈ ಕುರಿತು ಸಂಸದ ಜೇಮಿ ರಸ್ಕಿನ್ ವಿಧೇಯಕವೊಂದನ್ನು ಮಂಡಿಸಿದ್ದು, ಇದಕ್ಕೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನ ಕನಿಷ್ಠ 25 ಮಂದಿ ಡೆಮಾಕ್ರಾಟ್‌ಗಳ ಬೆಂಬಲ ದೊರೆತಿದೆ. ಮನಶಾÏಸ್ತ್ರಜ್ಞರು, ಇತರೆ ವೈದ್ಯರನ್ನು ಒಳಗೊಂಡ 11 ಮಂದಿಯ ಸಮಿತಿಯನ್ನು ರಚಿಸಿ, ಟ್ರಂಪ್ ಅವರ ಮಾನಸಿಕ ಸ್ಥಿತಿ ಸರಿಯಿದೆಯೇ, ಇಲ್ಲವೇ ಎಂಬುದನ್ನು ದೃಢಪಡಿಸಬೇಕು ಎಂದು ವಿಧೇಯಕದಲ್ಲಿ ಆಗ್ರಹಿಸಲಾಗಿದೆ. ಅಧ್ಯಕ್ಷೀಯ ಅಸಮರ್ಥತೆ ಇದ್ದಾಗ ಅಧ್ಯಕ್ಷರನ್ನು ಕಿತ್ತುಹಾಕುವಂಥ ನಿಯಮವು ಅಮೆರಿಕ ಸಂವಿಧಾನದ 25ನೇ ತಿದ್ದುಪಡಿಯಲ್ಲಿದೆ. 1967ರಲ್ಲಿ ಅಂದಿನ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಹತ್ಯೆ ನಡೆದಾಗ ಸಂವಿಧಾನಕ್ಕೆ ಇಂತಹುದೊಂದು ತಿದ್ದುಪಡಿಯನ್ನು ತರಲಾಗಿತ್ತು. ಇದೀಗ ಟ್ರಂಪ್ ಅವರ ವಿವಾದಾತ್ಮಕ ನೀತಿಗಳು, ಮಾಧ್ಯಮಗಳ ವಿರುದ್ಧ ಅವರು ನಡೆದುಕೊಳ್ಳುತ್ತಿರುವ ರೀತಿ ಮತ್ತಿತರ ಅಂಶಗಳನ್ನು ಮುಂದಿಟ್ಟುಕೊಂಡು ಅವರನ್ನು ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕುವ ಯತ್ನ ಆರಂಭವಾಗಿದೆ.