Advertisement
ಬಿಜೆಪಿಯ ಜತೆಗೆ ಕೆಲವು ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮರಳು ನೀತಿಯನ್ನು ವಿರೋಧಿಸಿ ಸಮ್ಮಿಶ್ರ ಮೈತ್ರಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ವಿನೋದ್ ಬೊಳ್ಳೂರು, ತಾ.ಪಂ. ಸದಸ್ಯರಾದ ರಶ್ಮಿ ಸತೀಶ್, ಶರತ್ ಕುಬೆವೂರು, ಜೀವನ್ ಪ್ರಕಾಶ್ ಕಾಮೆರೊಟ್ಟು, ಜಿಲ್ಲಾ ಬಿಜೆಪಿ ಮುಖಂಡರಾದ ಸುಖೇಶ್ ಶೆಟ್ಟಿ ಶಿರ್ತಾಡಿ, ಕೆ.ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ರಘುರಾಮ್ ಪುನರೂರು, ಭೋಜರಾಜ ಶೆಟ್ಟಿ, ನಗರ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್, ಸದಸ್ಯ ಉಮೇಶ್ ಮಾನಂಪಾಡಿ, ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಉದ್ದಕ್ಕೂ ಮರಳಿನ ಕೊರತೆ ಇಲ್ಲದಿದ್ದರೂ ಕೆಲವು ರಾಜಕೀಯ ಕುಳಗಳು ಕಳ್ಳ ಮಾರಾಟದ ಮೂಲಕ ಸಮೀಪದ ಕೇರಳ ಮತ್ತು ರಾಜಧಾನಿ ಬೆಂಗಳೂರಿಗೆ ಮರಳು ಸಾಗಿಸುವ ಮೂಲಕ ಕಳ್ಳ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಮರಳು ನೀತಿಯ ವಿರುದ್ಧ ನಡೆದ ಪ್ರತಿಭಟನೆ ಹಾಗೂ ಧರಣಿಯ ನೇತೃತ್ವ ವಹಿಸಿ ಶಾಸಕ ಉಮಾನಾಥ ಕೋಟ್ಯಾನ್‌ಮಾತನಾಡಿದರು.