ಮೂಡಿಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಮತ್ತು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆಯನ್ನು ವಿರೋಧಿ ಸಿ ಮೂಡಿಗೆರೆ ಪ್ರದೇಶ ಕಾಂಗ್ರೆಸ್ ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಮಾಜಿ ಸಚಿವೆ ಮೋಟಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಹಾಗೂ ಬಡವರ ಜೀವನದ ಮೇಲೆ ಬರೆ ಎಳೆಯಲಾಗುತ್ತಿದೆ. ಬಿಜೆಪಿಯವರಿಗೆ ಜನಸಾಮಾನ್ಯರ ಹಾಗೂ ರೈತರ ಮತ ಮಾತ್ರ ಬೇಕು. ಆದರೆ ಅವರ ಜೀವನ ರಕ್ಷಣೆ ಬೇಕಾಗಿಲ್ಲ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಅಚ್ಛೇ ದಿನ್ ಯಾವಾಗ ಬರುತ್ತದೆ ಎಂದು ಸ್ಪಷ್ಟವಾಗಿ ಹೇಳಬೇಕು. ರೈತರನ್ನು ಹಾಳು ಮಾಡಿ, ಉಳ್ಳವರ ಪರವಾಗಿ ಕೆಲಸ ಮಾಡಲು ಜನತೆ ನಿಮ್ಮನ್ನು ಆಯ್ಕೆ ಮಾಡಿ ಅ ಧಿಕಾರದಲ್ಲಿ ಕೂರಿಸಿಲ್ಲ. ಮೊದಲು ರೈತರ, ಬಡವರ, ಜನಸಮಾನ್ಯರ ಕಷ್ಟಗಳನ್ನು ಅರಿತು ಕೆಲಸ ಮಾಡಿ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ. ಸುರೇಂದ್ರ ಮಾತನಾಡಿ, ಅಚ್ಚೇ ದಿನ್ ಹೆಸರಿನಲ್ಲಿ ಆಡಳಿತಕ್ಕೆ ಬಂದ ಕೇಂದ್ರ ಸರ್ಕಾರವು ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗದೆ ದಿನಕ್ಕೊಂದು ಸುಳ್ಳುಗಳನ್ನು ಸೃಷ್ಟಿ ಮಾಡಿ ಜನರ ಕಣ್ಣಿಗೆ ಮಣ್ಣೆರೆಚುವಕೆಲಸ ಮಾಡುತ್ತಿದೆ. ಇದೊಂದು ಸುಳ್ಳಿನ ಸರ್ಕಾರ ಎಂದು ಜನತೆ ಈಗಾಗಲೇ ಅರ್ಥ ಮಾಡಿಕೊಳ್ಳುವ ಕಾಲ ಬಂದಾಗಿದೆ. ಬೆಲೆ ಏರಿಕೆ ಜೊತೆಗೆ ರೈತ ವಿರೋಧಿ ಕಾಯ್ದೆಯನ್ನು ಜನತೆ ಇರಲಿ ಸ್ವತಃ ಆಡಳಿತ ಪಕ್ಷದ ನಾಯಕರೇ ವಿರೋಧ ಮಾಡುತ್ತಿದ್ದಾರೆ. ಕೋವಿಡ್ ಸೋಂಕಿನಿಂದ ಬಳಲಿರುವ ಜನತೆಗೆ ಮತ್ತಷ್ಟು ಹಿಂಸೆ ನೀಡಬೇಡಿ. ಉಳ್ಳವರ ಬದಲು ಜನರ ಹಿತ ಕಾಯ್ದುಕೊಂಡು ಜನಪರ ಕೆಲಸ ಮಾಡಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಜೂನ್ ವೇಳೆಗೆ ಕಿಣಯೇ ಡ್ಯಾಂ ಲೋಕಾರ್ಪಣೆ
ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್, ಪದಾ ಧಿಕಾರಿಗಳಾದ ಸಿ.ಬಿ. ಶಂಕರ್, ರಮೇಶ್ ಹೊಸ್ಕೆರೆ, ಹಂಜಾ, ಪೂವಪ್ಪ, ರವಿ, ಜಯಮ್ಮ, ಸಂಪತ್, ಕಣಚೂರು ದೀಕ್ಷಿತ್, ಸುಧಿಧೀರ್, ಪಾರ್ವತಮ್ಮ, ಉಮ್ಮರ್, ಕಲ್ಪನಾ ಶ್ರೀನಿವಾಸ್, ಶಿವಸಾಗರ್ ತೇಜಸ್ವಿ ಮತ್ತಿತರರು ಇದ್ದರು.