Advertisement
ಈ ವೇಳೆ ಮಾತನಾಡಿದ ಪ್ರತಿಭಟನಾನಿರತ ವಿದ್ಯಾರ್ಥಿಗಳು, ಬಳ್ಳಾರಿ ಜಿಲ್ಲೆಗೆ ಕಾಲೇಜು ವ್ಯಾಸಂಗಕ್ಕೆ ಸೋಮಸಮುದ್ರ, ಏರಂಗಳ್ಳಿ, ಶ್ರೀನಿವಾಸ್ ಕ್ಯಾಂಪ್ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನ ನಿತ್ಯ ಸರಕಾರಿ ಬಸ್‌ಗಳನ್ನು ಅವಲಂಬಿಸಬೇಕಿದೆ. ಆದರೆ ಈ ಮಾರ್ಗದಲ್ಲಿ ಸಂಚರಿಸುವ ಸರಕಾರಿ ಬಸ್‌ಗಳು ಸೂಕ್ತ ಸಮಯಕ್ಕೆ ಬಾರದಿರುವುದರಿಂದ ಸರಿಯಾಗಿ ಕಾಲೇಜಿಗೆ ತೆರಳಲಾಗುತ್ತಿಲ್ಲ. ಅಲ್ಲದೇ, ವಿಳಂಬವಾಗಿ ತೆರಳುವ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಬಿಡದ ಕಾರಣ ಪಾಠಪ್ರವಚನಗಳಿಂದ ವಂಚಿತರಾಗುವಂತಾಗಿದೆ ಎಂದು ಅಳಲು ತೋಡಿಕೊಂಡರು. ಈ ಕುರಿತಂತೆ ಅಧಿಕಾರಿಗಳಿಗೆ ದೂರು ನೀಡಿದರೂ ಸ್ಪಂಧಿಸುತ್ತಿಲ್ಲ ಎಂದು ದೂರಿದರು.
Related Articles
Advertisement
ಅಲ್ಲದೇ, ಬೆಳಿಗ್ಗೆ ಬಸ್ ಕಳೆದುಕೊಂಡರೆ ಸೋಮಸಮುದ್ರ ಹೈವೇ ರಸ್ತೆ ಪಕ್ಕದಲ್ಲಿ ಇರುವುದರಿಂದ ಕೆಲವೊಂದು ಬಸ್ ಗಳು ಗ್ರಾಮದ ನಿಲ್ದಾಣದಲ್ಲಿ ನಿಲ್ಲಿಸುವುದಿಲ್ಲ. ಜೊತೆಗೆ ಸಂಜೆ ಕೂಡ ಇದೆ ಪರಿಸ್ಥಿತಿ ಇದ್ದು ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನೂ ಬಳ್ಳಾರಿ ಉಸ್ತುವಾರಿ ಸಚಿವ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವ ಮಾರ್ಗದಲ್ಲಿ ಏತ ನೀರಾವರಿ ಯೋಜನೆಯನ್ನು ಉದ್ಘಾಟನೆ ಮಾಡಲು ಬರುವ ಸುದ್ದಿ ಕೇಳಿ ಡಿಪೋ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡುವುದನ್ನು ಕೈ ಬಿಡಿ ಇನ್ಮುಂದೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ವಿದ್ಯಾರ್ಥಿಗಳನ್ನು ಮನವೊಲಿಸಲು ಹರಸಾಹಸ ಪಟ್ಟರು.
ವಿದ್ಯಾರ್ಥಿಗಳನ್ನು ಮನವೊಲಿಸಲು ಪ್ರಯತ್ನಿಸಿದರೂ ಪಟ್ಟುಬಿಡದೆ ಪ್ರತಿಭಟನೆ ಮುಂದುವರೆಸಿದರು. ನಂತರ ಹೆಚ್ಚುವರಿ ಬಸ್ ಕರೆ ತಂದ ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದರು.
ಸುಮಾರು ಅರ್ಧಗಂಟೆ ಕಾಲ ಬಳ್ಳಾರಿ ಮುಖ್ಯ ರಸ್ತೆಯಲ್ಲಿ ಸಿರುಗುಪ್ಪ ಕಡೆಯಿಂದ ಹಾಗೂ ಬಳ್ಳಾರಿ ಕಡೆಯಿಂದ ಬರುವ ವಾಹನಗಳು ಟ್ರಾಫಿಕ್ ಜಾಮ್ ಆದ ಹಿನ್ನಲೆ ಪ್ರಯಾಣಿಕರು ಪರದಾಡಬೇಕಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಕೆ.ಕೆಂಚ, ಚಂದ್ರ, ಮಾರುತಿ, ಅಜಯ, ಮಣಿಕಂಠ, ಶಾಸ್ತ್ರೀ, ಮನೋಜ, ಮನಮೋಹನ್, ದೇವರಾಜ್, ಉದಯ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.