Advertisement

ಕಗ್ಗಂಟಾದ ಬಿಜೆಪಿ ಟಿಕೆಟ್: ಸಿಎಂ ಮನೆಮುಂದೆ ಧರಣಿ ಕುಳಿತ ಶರತ್ ಬಚ್ಚೇಗೌಡ ಬೆಂಬಲಿಗರು

09:41 AM Sep 25, 2019 | keerthan |

ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವನಣೆ ಘೋಷಣೆಯಾದ ನಂತರ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯ ತಲೆನೋವು ಆರಂಭವಾಗಿದೆ. ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಈಗ ಬಿಜೆಪಿಯಲ್ಲಿಯೇ ಲಾಭಿ ಆರಂಭವಾಗಿದ್ದು, ಮಂಗಳವಾರ ಬೆಳಿಗ್ಗೆ ಸಂಸದ ಬಿ ಎನ್ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡರಿಗೆ ಟಿಕೆಟ್ ಕೊಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ನಿವಾಸದ ಮುಂದೆ ಧರಣಿ ನಡೆಯಿತು.

Advertisement

ಸಂಸದ ಬಿ ಎನ್ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಅವರು ಹೊಸಕೋಟೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅಥವಾ ಅವರ ಕಡೆಯವರಿಗೆ ಬಿಜೆಪಿಯಿಂದ ಟಿಕೆಟ್ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಬಚ್ಚೇಗೌಡ ಬೆಂಬಲಿಗರಿಂದ ಈ ಧರಣಿ ನಡೆಯಿತು.

ಬೆಂಗಳೂರಿನ ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸದ ಮುಂದೆ ಇಂದು ಮುಂಜಾನೆ ಆಗಮಿಸಿದ ಬೆಂಬಲಿಗರು ಬಿಎಸ್ ವೈ ವಿರುದ್ಧ ಧಿಕ್ಕಾರ ಕೂಗಿದರು.  ಪ್ರತಿಭಟನಾಕಾರರನ್ನು ರಸ್ತೆಯಲ್ಲಿಯೇ ತಡೆದ ಪೊಲೀಸರು ಬಿ ಎನ್ ಬಚ್ಚೇಗೌಡ, ಸಹೋದರ ಗೋಪಾಲ ಗೌಡ ಸೇರಿದಂತೆ ಕೇವಲ ಐವರಿಗೆ ಬಿಎಸ್ ವೈ ಮನೆಯೊಳಗೆ ತೆರಳಲು ಅವಕಾಶ ಮಾಡಿಕೊಟ್ಟರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಉಪಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next