Advertisement

ಖಾತ್ರಿ ಕೂಲಿಗಾಗಿ ಪ್ರತಿಭಟನೆ

11:24 AM Jun 16, 2019 | Suhan S |

ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ ಗ್ರಾಪಂನಲ್ಲಿ ಎನ್‌ಆರ್‌ಇಜಿ ಯೋಜನೆಯಡಿ ಸಮರ್ಪಕ ಉದ್ಯೋಗ ನೀಡುವಂತೆ ಆಗ್ರಹಿಸಿ ಶನಿವಾರ ನೂರಾರು ಕೂಲಿ ಕಾರ್ಮಿಕರು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

Advertisement

ಕಳೆದ ಮೂರ್‍ನಾಲ್ಕು ದಿನಗಳಿಂದ ಗ್ರಾಮದ ಜನರಿಗೆ ಉದ್ಯೋಗ ನೀಡಲಾಗಿತ್ತು. ಆದರೆ ಶನಿವಾರ ದಿಢೀರನೆ ಇವತ್ತು ಕೆಲಸ ಬೇಡ ಎನ್ನುತ್ತಿದ್ದಾರೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗಲು ಸಿದ್ಧತೆಯಲ್ಲಿ ಬಂದಿದ್ದ ಕಾರ್ಮಿಕರೆಲ್ಲರೂ ಕೆರಳಿ ನೇರವಾಗಿ ಗ್ರಾಪಂ ಎದುರು ಪ್ರತಿಭಟನೆ ಆರಂಭಿಸಿದರು.

ಇದರಿಂದ ಗ್ರಾಮದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಅನೇಕರು ಇದೇ ಸಂದರ್ಭದಲ್ಲಿ ಗ್ರಾಪಂ ವಿರುದ್ಧ ಹರಿಹಾಯ್ದರು. ಸತತ ಬರಗಾಲದಿಂದ ಕೃಷಿ ಕೆಲಸವಿಲ್ಲದೇ ಪರದಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಎನ್‌ಆರ್‌ಇಜಿಯಡಿ ಕೆಲಸ ಕೊಡಿ ಎಂದು ಕೇಳಿದರೆ ಇಲ್ಲ ಎನ್ನುತ್ತೀರಿ. ಎಲ್ಲರೂ ಕೂಡಿ ಜೆಸಿಬಿ ಹಚ್ಚಿ ಕೆಲಸ ಮಾಡಿಸುತ್ತಿರಿ. ನಾವೆಲ್ಲಿಗೆ ಹೋಗೋಣ ಎಂದು ಸದಸ್ಯರ ವಿರುದ್ಧ ಜಾಬ್‌ ಕಾರ್ಡ್‌ದಾರರು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಮತ್ತು ಗಾಪಂನ ಎಲ್ಲ ಸದಸ್ಯರು ಸ್ಥಳಕ್ಕೆ ಬಂದು ಸಮರ್ಪಕ ಉದ್ಯೋಗ ಭರವಸೆ ಮತ್ತು ಸೂಕ್ತ ಮಾಹಿತಿ ಕೊಡಬೇಕು ಎಂದು ಪಟ್ಟು ಹಿಡಿದು ಗುದ್ದಲಿ, ಬುಟ್ಟಿ, ಸಲಕೆ ಸಮೇತ ಗ್ರಾಪಂ ಎದುರು ಕುಳಿತರು.

ಈ ಕುರಿತು ಗ್ರಾಪಂ ಅಧ್ಯಕ್ಷ ಪ್ರತಿಭಟನಾಕಾರರಿಗೆ ಸಮರ್ಪಕ ಉದ್ಯೋಗ ಮತ್ತು ಸಕಾಲಿಕ ಕೂಲಿ ಹಣ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಿಮಗೆ ಇವತ್ತು ಕೂಲಿ ಇಲ್ಲ ಎಂದು ಯಾರೂ ತಪ್ಪು ಮಾಹಿತಿ ನೀಡಿದ್ದಾರೆ. ಯಾರೂ ಗೊಂದಲಕ್ಕೊಳಗಾಗಬಾರದು. ಕ್ರಿಯಾಯೋಜನೆಯಂತೆ ಮಂಜೂರಾದ ಅನುದಾನ ಮುಗಿಯುವರೆಗೂ ಕೆಲಸ ನೀಡುವ ಭರವಸೆ ನೀಡಿದರು.

ಗ್ರಾಪಂ ಸದಸ್ಯರಾದ ಸಿದ್ದು ಹವಳದ, ಸುರೇಶ ತೋಟದ, ಮುಖಂಡರಾದ ವೈ.ಸಿ. ರೊಳ್ಳಿ, ನಿಂಗಪ್ಪ ಪ್ಯಾಟಿ, ಕೂಲಿಕಾರರಾದ ಬಸವರಾಜ ಹರ್ಲಾಪುರ, ರೇಣಮ್ಮ ಅಳ್ಳಳ್ಳಿ, ಲಕ್ಷ್ಮವ್ವ ಮುಳಗುಂದ, ನಿರ್ಮಲವ್ವ ರೊಳ್ಳಿ, ನಾಗನಗೌಡ ಪಾಟೀಲ, ಕಲ್ಲಪ್ಪ ಗಂಗಣ್ಣವರ, ಗಂಗವ್ವ ಮೆಳ್ಳಿ, ನಂದಾ ಮಾಗಡಿ, ಶಿಲ್ಪಾ ಹಡಪದ, ಗಿರಿಜವ್ವ ಕುಂಬಾರ, ಹಾಲಮ್ಮ ಇಟಗಿ, ಲಕ್ಷ್ಮವ್ವ ಶಿರಹಟ್ಟಿ, ವಿಜಯಲಕ್ಷಿ ್ಮೕ ಹಡಪದ, ಪಾರವ್ವ ಚಕ್ರಸಾಲಿ ಸೇರಿ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next