ಕಾಳಗಿ: ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುತ್ತಿಲ್ಲ ಎಂದು ಕೂಲಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಗಡಿಕೇಶ್ವಾರ ಗ್ರಾಮದ ಎಸ್‌ಸಿ ಓಣಿ ಜನರಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್ ಕಳೆದ ಮಾರ್ಚ್, ಏಪ್ರಿಲ್ ತಿಂಗಳಿಂದ ಕೂಲಿಕಾರ್ಮಿಕರಿಗೆ ಉದ್ಯೋಗ ಒದಗಿಸದೇ ಸತಾಯಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾರ್ಚ್ ತಿಂಗಳಿನಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಮಗೆ ಬೇಕಾದ 40ರಿಂದ 50 ಕೂಲಿ ಕಾರ್ಮಿಕರ ಹೆಸರಿನ ಮೇಲೆ ಎನ್‌ಎಂಆರ್ ತೆಗೆದು ನಾಮಕಾವಾಸ್ತೆ ಕೆಲಸ ಮಾಡಿ ಉದ್ಯೋಗ ಖಾತ್ರಿ ಅನುದಾನ ದುರ್ಬಳಕೆ ಮಾಡಿದ್ದಾರೆ ಎಂದು ಕೂಲಿಕಾರ್ಮಿಕ ಶಿವಲಿಂಗಪ್ಪ ಆರೋಪಿಸಿದ್ದಾರೆ.
ಗಡಿಕೇಶ್ವಾರ ಗ್ರಾಪಂದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ದುರ್ಬಳಕೆ ಮಾಡಿಕೊಂಡಿರುವುದನ್ನು ತನಿಖೆ ಮಾಡಿ ಶೀಘ್ರವೇ ಕೂಲಿಕಾರ್ಮಿಕರಿಗೆ ಕೆಲಸ ನೀಡುವಂತೆ ತಾಪಂ ಸಹಾಯಕ ಅಕಾರಿ ಗಂಗಾಧರ ವಿಶ್ವಕರ್ಮ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ದಲಿತ ಸೇನೆ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಮೋಹನ ಚಿನ್ನ, ಕಾರ್ಮಿಕರಾದ ಶರಣಮ್ಮ, ಶಿವಲಿಂಗಪ್ಪ, ಮಹೇಶ, ಹಾಜಪ್ಪ, ಪ್ರಭು, ಸುನೀಲ, ಶರಣಪ್ಪ, ಜಗನ್ನಾಥ, ಮರೇಪ್ಪ, ಭೀರಪ್ಪ, ರೇವಣಸಿದ್ಧ, ಸಿದ್ಧಪ್ಪ, ಶರಣಮ್ಮ, ಕಮಲಮ್ಮ, ಜಗದೇವಿ, ರಾಮಲಿಂಗ, ರೇಣುಕಾ, ಕಮಲಾಬಾಯಿ, ಬಾಬುರಾವ್, ಮಲ್ಲಮ್ಮ, ಕಸ್ತೂರಿಬಾಯಿ, ನಾಗಮ್ಮ, ಶಾರದಾಬಾಯಿ ಪಾಲ್ಗೊಂಡಿದ್ದರು.