Advertisement

ಸಮಸ್ಯೆ ಪರಿಹರಿಸಲುಆಗ‹ಹಿಸಿ ಪ‹ತಿಭಟನೆ

04:19 PM Dec 12, 2019 | Team Udayavani |

ಮಾಲೂರು: ತಾಲೂಕಿನ ಸರ್ಕಾರಿ ಗೋಮಾಳ ಮತ್ತು ಸರ್ಕಾರಿ ಅಸ್ತಿಗಳ ಅಕ್ರಮವಾಗಿ ಪರಭಾರೆ ಮಾಡಿರುವ ಕ್ರಮ ಖಂಡಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಮಾರಸಂದ್ರ ಸೇರಿ ಅನೇಕ ಗ್ರಾಮಗಳ ಗೋಮಾಳಗಳಿಗೆ ಅಕ್ರಮ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿದ್ದು, ತಾಲೂಕಿನಾದ್ಯಂತ ರಾಜಕಾಲುವೆ ಮತ್ತು ಜಲ ಕಾಯಗಳ ಒತ್ತುವರಿಯಾಗಿದೆ. ತಾಲೂಕಿನ ಟೇಕಲ್‌ ಹೋಬಳಿಯ ಮರಲಹಳ್ಳಿಯ ದಲಿತ ಸಮುದಾಯಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡುವುದು. ತಾಲೂಕು ಕಚೇರಿ ದಾಖಲೆಗಳಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು, ಪಟ್ಟಣದ ಡಾ. ಅಂಬೇಡ್ಕರ್‌ ಭವನದ ಉಳಿಕೆ ಕಾಮ ಗಾರಿ ಪೂರ್ಣ, ಸೂಕ್ತ ನಿರ್ವಹಣೆ ದಲಿತರ ಸಮಾರಂಭಗಳಿಗೆ ಒದಗಿಸುವುದು.

ಮಾಸ್ತಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿ ನನೆಗುದಿಗೆ ಬಿದ್ದಿರುವ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದ ಕಟ್ಟಡದ ಕಾಮಗಾರಿ ಕೂಡಲೇ ಆರಂಭಿಸಿ ಪೂರ್ಣಗೊಳಿಸುವುದು ಸೇರಿದಂತೆ ಅನೇಕ ಸಮಸ್ಯೆ ಬಗೆ ಹರಿಸುವಂತೆ ಅಗ್ರಹಿಸಿ ಪ್ರತಿಭಟನೆ ನಡೆಸಿದರು. ಪಟ್ಟಣದ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಅವರಣದಿಂದ ಪ್ರತಿಭಟನೆ ರ್ಯಾಲಿ ಆರಂಭಿಸಿ, ಬಸ್‌ ನಿಲ್ದಾಣದ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ, ಉದ್ಯಾನವನದಲ್ಲಿನ ಡಾ.ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ,ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ಮುಕ್ತಾಯಗೊಳಿಸಿದರು. ರಾಜ್ಯ ಸಂಚಾಲಕ ಮೇಡಿಹಾಳ ಬೈರಪ್ಪ, ಚಂದ್ರಶೇಖರ್‌, ಮಂಜುನಾಥ್‌, ಕೃಷ್ಣಪ್ಪ, ಶಂಕರ್‌, ಮಹಾಲಕ್ಷ್ಮೀ, ಆನಂದ್‌, ಮಾಸ್ತಿ ಅನಂದ್‌, ಕರಿಸಂದ್ರ ರಾಜು, ಚಂದ್ರು ಮತ್ತಿತರರು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next