Advertisement

ಮೇಲ್ಸೇತುವೆಗೆ ಆಗ್ರಹಿಸಿ ಹೆದ್ದಾರಿ ತಡೆ ಹೆದ್ದಾರಿ ತಡೆ

04:53 PM Mar 13, 2021 | Team Udayavani |

ಅಂಕೋಲಾ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 66 ರ ಬಳಲೆಮಾದನಗೇರಿಯಲ್ಲಿ ಮೆಲ್ಸೇತುವೆ ನಿರ್ಮಿಸುವಂತೆಒತ್ತಾಯಿಸಿ ನಾಗರಿಕರಿಂದ ಹೆದ್ದಾರಿ ತಡೆದು ಅಣಕು ಶವ ಇಟ್ಟು ಪ್ರತಿಭಟನೆ ನಡೆಸಲಾಯಿತು.

Advertisement

ಮಾದನಗೇರಿ ರಾಷ್ಟ್ರೀಯ ಮತ್ತು ರಾಜ್ಯಹೆದ್ದಾರಿಯ ಕೂಡು ರಸ್ತೆಯ ಗೋಕರ್ಣ ಜಂಕ್ಷನನಲ್ಲಿಮೇಲ್ಸೇತುವೆಗಾಗಿ ಕಳೆದ ಎರಡು ವರ್ಷಗಳಿಂದಇಲ್ಲಿಯ ಜನರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅಂಕೋಲಾ ತಹಶೀಲ್ದಾರ್‌ ಉದಯ ಕುಂಬಾರಐಆರ್‌ಬಿ ಕಂಪನಿ ಮತ್ತು ಹೋರಾಟಗಾರರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲುಪ್ರಯತ್ನಿಸಿದರೂ ಫಲಿಸದ ಕಾರಣ ಆಕ್ರೋಶಗೊಂಡ ಹೋರಾಟಗಾರರು ಸಾರ್ವತ್ರಿಕವಾಗಿ ಹೆದ್ದಾರಿ ತಡೆ ನಡೆಸುವುದಾಗಿ ಘೋಷಿಸಿತ್ತು.

ಜಿಲ್ಲಾ ಗ್ರಾಮೀಣ ಹೋರಾಟಗಾರರ ಸಂಘಟನೆಮುಂದಾಳತ್ವದಲ್ಲಿ ನಡೆದ ಪಕ್ಷಾತೀತ ಹೋರಾಟದಲ್ಲಿ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು. ಜಿಪಂಮಾಜಿ ಅಧ್ಯಕ್ಷ ರಮಾನಂದ ನಾಯಕ ಮಾತನಾಡಿ,ಮೇಲ್ಸೇತುವೆಗಾಗಿ ಹಲವು ಬಾರಿ ಮನವಿ ಸಲ್ಲಿಸಿದರೂಪ್ರಯೋಜನವಾಗದೆ ಹೆದ್ದಾರಿ ತಡೆ ಮಾಡುವುದು ಅನಿವಾರ್ಯವಾಯಿತು. ರಾಷ್ಟ್ರೀಯ ಹೆದ್ದಾರಿಅಧಿಕಾರಿಗಳು ಸಾರ್ವಜನಿಕರ ತಾಳ್ಮೆ ಪರೀಕ್ಷಿಸದೆಕೂಡಲೇ ಸಮಸ್ಯೆ ಬಗೆಹರಿಸಲು ಮುಂದಾಗದೇಇದ್ದರೆ ಹೋರಾಟ ಇನ್ನೂ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು. ತಹಶೀಲ್ದಾರರು ಇದುವರೆಗೆನಡೆದ ಪ್ರಕ್ರಿಯೆಗಳ ಬಗ್ಗೆ ವಿವರಿಸಿ ಹೋರಾಟಗಾರರ ಮನವೊಲಿಸಲು ಪ್ರಯತ್ನಿಸಿದರೂ ಹೋರಾಟಗಾರರುಪಟ್ಟು ಬಿಡದೆ ರಸ್ತೆತಡೆ ನಡೆಸಿ ರಾಷ್ಟ್ರೀಯ ಹೆದ್ದಾರಿಅಧಿಕಾರಿಗಳು ಅಥವಾ ಜಿಲ್ಲಾಧಿಕಾರಿಗಳು ಸ್ಥಳಕ್ಕೆಬರುವವರೆಗೂ ರಸ್ತೆತಡೆ ನಡೆಸಲು ಮುಂದಾದಾಗ ಸ್ವಲ್ಪಹೊತ್ತು ಬಿಗುವಿನ ವಾತಾವರಣ ಉಂಟಾಗಿ ಪೊಲೀಸರುಪ್ರತಿಭಟನಾಕಾರರನ್ನು ಚದುರಿಸಿ ವಾಹನಗಳು ಸಾಗಲು ಅನುವು ಮಾಡಿಕೊಟ್ಟರು.

ಅಸಿಸ್ಟಂಟ್‌ ಕಮೀಶನರ್‌ ಎಂ. ಅಜಿತ್‌ ಸ್ಥಳಕ್ಕಾಗಮಿಸಿ ಮೇಲ್ಸೇತುವೆ ಪ್ರಸ್ತಾವನೆಯನ್ನು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ದೆಹಲಿ ಕಚೇರಿಗೆ ರವಾನಿಸಲಾಗಿದೆ.ಹೊಸ ಎಸ್ಟಿಮೇಟಿನ ಒಪ್ಪಿಗೆ ಪಡೆದ ತಕ್ಷಣ ಮುಂದಿನ ಕ್ರಮ ಕೈಗೊಳ್ಳಲಾಗುವದು ಹಾಗೂ ಈ ಬಗ್ಗೆ ಮುಂದಿನವಾರದಲ್ಲಿ ಹಿರೇಗುತ್ತಿ ಪಂಚಾಯತದಲ್ಲಿ ರಾಷ್ಟ್ರೀಯಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕರೆಸಿ ಸಭೆನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದ ಬಳಿಕ ಪ್ರತಿಭಟನೆ ನಿಲ್ಲಿಸಲಾಯಿತು.

ಆಶ್ರಯ ಫೌಂಡೇಶನ್‌ ಅಧ್ಯಕ್ಷ ರಾಜೀವಗಾಂವಕರ, ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ,ಆನಂದು ಕವರಿ, ಜಿಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ,ಮಾಜಿ ಶಾಸಕ ಸತೀಶ ಸೈಲ್‌, ಜೆಡಿಎಸ್‌ ತಾಲೂಕಾಧ್ಯಕ್ಷಸಂದೀಪ ಬಂಟ, ಜಿಪಂ ಸದಸ್ಯ ಜಗದೀಶ ನಾಯಕಮೊಗಟ, ಸಗಡಗೇರಿ ಗ್ರಾಪಂ ಅಧ್ಯಕ್ಷೆ ಸೀತಾ ಗೌಡ, ಉಪಾಧ್ಯಕ್ಷ ಶ್ರವಣಕುಮಾರ ನಾಯ್ಕ, ಹಿಲ್ಲೂರ ಗ್ರಾಪಂಅಧ್ಯಕ್ಷ ಬೀರಣ್ಣ ನಾಯಕ, ಜಿಲ್ಲಾ ಗ್ರಾಮೀಣ ಯುವಹೋರಾಟಗಾರರ ಸಂಘದ ಅಧ್ಯಕ್ಷ ದೇವರಾಯನಾಯಕ, ಹಾಗೂ ಸದಸ್ಯರು, ಸ್ವಾತಂತ್ರ್ಯ ಹೋರಾಟಗಾರ ಹೊನ್ನಪ್ಪ ನಾಯಕ ಮೊಗಟಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Advertisement

ಸಿಪಿಐ ಕೃಷ್ಣಾನಂದ ನಾಯಕ ಮಾರ್ಗದರ್ಶನದಲ್ಲಿ ಪಿಎಸ್‌ಐ ಈ.ಸಿ. ಸಂಪತ್‌ ಸೂಕ್ತ ಬಂದೋಬಸ್ತ ವ್ಯವಸ್ಥೆಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next