ಹಾಸನ: ನಗರದ ಸುತ್ತಮುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ತುಂಡು ಕೃಷಿ ಭೂಮಿಯನ್ನು ವಸತಿ ಸೇರಿದಂತೆ ಇತರೆ ಉದ್ದೇಶಕ್ಕೆ ಭೂ ಪರಿವರ್ತನೆ (ಅನ್ಯಸಂಕ್ರಮಣ) ಮಾಡುವು ದನ್ನು ನಿರ್ಬಂಧಿಸಿರುವುದನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ಮತ್ತು ಖಾಸಗಿ ವಸತಿ ಬಡಾವಣೆ ನಿರ್ಮಾಣದಾರರು ಪ್ರತಿಭಟನೆ ನಡೆಸಿದರು.
ಹಾಸನ ನಗರದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿನ ಕೃಷಿ ಭೂಮಿಯನ್ನು 5 ಗುಂಟೆ ಒಳಗಡೆ ಅನ್ಯ ಸಂಕ್ರಮಣ (ಅನ್ಯ ಉದ್ದೇಶಕ್ಕೆ ಭೂ ಪರಿವರ್ತನೆ) ಮಾಡಬಾರ ದೆಂದು ಎಚ್.ಡಿ.ರೇವಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದರು.
ಖಾಸಗಿ ವಸತಿ ಬಡಾವಣೆ ನಿರ್ಮಾಣ ದಾರರು ರೈತರಿಂದ ಭೂಮಿ ಖರೀದಿಸಿ ಬಡಾ ವಣೆ ನಿರ್ಮಿಸುವುದರಿಂದ ರಸ್ತೆ, ಒಳ ಚರಂಡಿ ಮತ್ತಿತರ ಮೂಲ ಸೌಕರ್ಯ ಕಲ್ಪಿಸದೇ ಹೊಸ ವಸತಿ ಬಡಾವಣೆಗಳು ಕೊಳಚೆ ಪ್ರದೇಶವಾಗಿ ರೂಪುಗೊಳ್ಳುತ್ತವೆ ಎಂಬ ಹಿನ್ನೆಲೆಯಲ್ಲಿ 5 ಗುಂಟೆಯೊಳಗೆ ಭೂಮಿಯ ಅನ್ಯ ಸಂಕ್ರಮಣ ಮಾಡದಂತೆ ರೇವಣ್ಣ ಅವರು ಸರ್ಕಾರದಿಂದ ಆದೇಶ ಮಾಡಿಸಿದ್ದರು. ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಗೃಹಮಂಡಳಿ ಯಿಂದ ಹೊಸ ಬಡಾವಣೆಗಳ ನಿರ್ಮಾಣಕ್ಕೂ ಮುಂದಾ ಗಿದ್ದರು. ಆನಂತರದ ರಾಜಕೀಯ ಬೆಳವಣಿಗೆ ಯಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ ಎಚ್.ಡಿ. ರೇವಣ್ಣ ಅವರು ಅಧಿಕಾರ ಕಳೆದು ಕೊಂಡ ನಂತರ ಈಗ ತುಂಡು ಭೂಮಿ ಅನ್ಯ ಸಂಕ್ರಮಣಕ್ಕೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದಿದೆ.
ಡೀಸಿಗೆ ಶಾಸಕರ ಮನವಿ: ಪ್ರತಿಭಟನಾಕಾರರ ಪರವಾಗಿ ಜಿಲ್ಲಾಧಿಕಾರಿಯವರನ್ನು ಭೇಟಿ ಯಾದ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಅವರು,ನಗರದ ಸುತ್ತ ಮುತ್ತಲಿನ ರೈತರು ತಮ್ಮ ಜಮೀನಿನಲ್ಲಿ ಮನೆ ನಿರ್ಮಾಣ, ಆರ್ಥಿಕ ಸಂಕಷ್ಟಗಳ ನಿವಾರಣೆಗೆ ಜಮೀನು ಮಾರಾಟಕ್ಕೆ ಅವಕಾಶವಿಲ್ಲದಂತೆ ಹಿಂದಿನ ಸರ್ಕಾರ ಆದೇಶ ಹೊರಡಿಸಿತ್ತು. ಆ ಆದೇಶ ವನ್ನು ರದ್ದುಪಡಿಸಿ ತುಂಡು ಭೂಮಿಯ ರೈತ ರಿಗೆ ಅನುಕೂಲವಾಗುವಂತೆ ಆದೇಶ ಮಾರ್ಪಡಿಸಬೇಕೆಂದು ರೈತರು ಮನವಿ ಸಲ್ಲಿಸಿದ್ದಾರೆ.
ರೈತರಿಗೆ ಅನುಕೂಲ ಕಲ್ಪಿಸಿ: ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿಯೂ ತುಂಡು ಭೂಮಿ ಅನ್ಯ ಸಂಕ್ರಮಣ ಮಾಡಬಾರದೆಂಬ ಆದೇಶ ಇಲ್ಲ. ರಾಜ್ಯಕ್ಕೊಂದು ಹಾಗೂ ಹಾಸನಕ್ಕೊಂದು ಕಾನೂನು ಮಾಡಬಾರದು. ಈ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತುಂಡು ಭೂಮಿ ರೈತರಿಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿದರು.
ಎರಡೂವರೆ ಸಾವಿರ ಅರ್ಜಿ: ಪ್ರತಿಭಟನಾ ಕಾರರ ಅಹವಾಲು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು, ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಪರಿವರ್ತನೆ ಮಾಡುವ ಸಂದರ್ಭದಲ್ಲಿ ಶೇ.40ರಷ್ಟನ್ನು ರಸ್ತೆ, ಒಳ ಚರಂಡಿ, ವಿದ್ಯುತ್ ಮಾರ್ಗ ಮತ್ತು ಸಾರ್ವಜನಿಕ ಬಳಕೆಗೆ ಬಿಡಬೇಕಾಗುತ್ತದೆ. ಒಂದು ಎಕರೆಯನ್ನು 5 ಗುಂಟೆಗಳಾಗಿ ವಿಂಗ ಡಿಸಿ ಭೂ ಪರಿವರ್ತನೆಗೆ ಅರ್ಜಿಗಳು ಸಲ್ಲಿಕೆ ಯಾಗುತ್ತಿವೆ. ಕಳೆದ 4 ತಿಂಗಳಲ್ಲಿ ಭೂ ಪರಿವರ್ತನೆ ಕೋರಿ ಸುಮಾರು ಎರಡೂವರೆ ಸಾವಿರ ಅರ್ಜಿಗಳು ಬಂದಿದೆ. ರಾಜ್ಯದಲ್ಲಿ ಇಷ್ಟೊಂದು ಅರ್ಜಿಗಳು ಯಾವ ಜಿಲ್ಲೆಯ ಲ್ಲಿಯೂ ಬಂದಿಲ್ಲ. ಈ ಸಂಬಂಧ 5 ಗುಂಟೆ ಒಳಗೆ ಇರುವವರಿಗೆ ಅನ್ಯಸಂಕ್ರಮಣ ಮಾಡಬೇಕೇ ಅಥವಾ ಕೈಬಿಡಬೇಕೇ ಎಂದು ಸರ್ಕಾರಕ್ಕೆ ಪತ್ರ ಬರೆದು ನಿರ್ದೇಶನ ಕೋರಲಾಗಿದೆ. ಸರ್ಕಾರದಿಂದ ಬರುವ ಸೂಚನೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.