ಕಮಲನಗರ: ಗಣರಾಜ್ಯೋತ್ಸವದಂದು ರಾಯಚೂರು ಜಿಲ್ಲಾ ನ್ಯಾಯಾಧೀಶರು ಡಾ| ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದು, ಕೂಡಲೇ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ವಿವಿಧ ದಲಿತಪರ ಸಂಘಟನೆಗಳಿಂದ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಮಿನಿ ಬಸ್ ನಿಲ್ದಾಣದ ಎದುರು ಜಮಾಯಿಸಿದ ಪ್ರಮುಖರು ಅಲ್ಲಿಂದ ಪ್ರಮುಖ ರಸ್ತಗಳ ಮೂಲಕ ತಹಶೀಲ್ದಾರ್ ಕಚೇರಿವರೆಗೆ ರ್ಯಾಲಿ ನಡೆಸಿ, ಘೋಷಣೆ ಕೂಗಿದರು. ಬಳಿಕ ಉತ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಮನವಿ ಪತ್ರ ತಹಶೀಲ್ದಾರ್‌ಗೆ ಸಲ್ಲಿಸಿದರು.
ಗಣರಾಜ್ಯೋತ್ಸವದಂದು ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿ ವೃತ್ತಿ ಗೌರವಕ್ಕೂ ಅವಮಾನ ಮಾಡಿದ್ದಲ್ಲದೇ ಸಂವಿಧಾನಕ್ಕೂ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ನ್ಯಾಯಾಧೀಶರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಭಾರತದ ಪೌರತ್ವ ರದ್ದುಪಡಿಸುವಂತೆ ಆಗ್ರಹಿಸಿದರು.
ಈ ವೇಳೆ ಡಿಎಸ್ಸೆಸ್ ತಾಲೂಕು ಅಧ್ಯಕ್ಷ ಉತ್ತಮ ಸುತಾರ, ಸಹ ಸಂಚಾಲಕ ಭುಜಂಗ ಕದಮ, ನೀಲಕಂಠರಾವ್ ಕಾಂಬಳೆ, ಪ್ರವೀಣ ಕದಮ, ವಿಶ್ವನಾಥ ದಿನೆ, ರಾಹುಲ ಖಂದಾರೆ, ನಿಲೇಶ ಘಾಗರೆ, ಸಾಯಿನಾಥ ಕಾಂಬಳೆ, ಓಂಕಾರ ಸೊಲ್ಲಾಪೂರೆ, ದಯಾಸಾಗರ ಬೆಣ್ಣೆ, ಶಾಂತಕುಮಾರ ಬಿರಾದಾರ, ಅಮೋಲ್ ಸೂರ್ಯವಂಶಿ ಇತರರಿದ್ದರು.