Advertisement

ಜಾಲಹಳ್ಳಿ ತಾಲೂಕಿಗಾಗಿ 30ರಂದು ಪ್ರತಿಭಟನೆ

06:49 PM Sep 25, 2020 | Suhan S |

ಜಾಲಹಳ್ಳಿ: ಜಾಲಹಳ್ಳಿ ತಾಲೂಕು ರಚನೆಗೆ ಒತ್ತಾಯಿಸಿ ಸೆ.30ರಂದು ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಾಲೂಕು ರಚನೆ ಹೋರಾಟ ಸಮಿತಿ ಅಧ್ಯಕ್ಷ ಕೆರಿಲಿಂಗಪ್ಪ ನಾಡಗೌಡ ಹೇಳಿದರು.

Advertisement

ಗುರುವಾರ ಪಟ್ಟಣದ ಹೊರವಲಯದ ಉತ್ತಿನ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆ ನಂತರ ಮಾತನಾಡಿದ ಅವರು, ಜಾಲಹಳ್ಳಿ ಪಟ್ಟಣ ತಾಲೂಕು ಕೇಂದ್ರವಾಗಲು ಎಲ್ಲ ಅರ್ಹತೆ ಹೊಂದಿದ್ದರು ತಾಲೂಕು ರಚನೆಗೆ ಕಡೆಗಣಿಸಲಾಗಿದೆ. ಎಲ್ಲರೂ ಪಕ್ಷ ಭೇದ ಮರೆತು ಒಗ್ಗಟ್ಟಾಗಿ ಹೋರಾಡೋಣ. ಎಲ್ಲ ಸಂಘಟನೆ ಮುಖಂಡರು, ಜನಪ್ರತಿನಿ ಧಿಗಳು, ಪ್ರಗತಿಪರ ವಿಚಾರವಂತರು, ರೈತರು ವಿದ್ಯಾರ್ಥಿಗಳು ಸಾರ್ವಜನಿಕರು ಹೋರಾಟಕ್ಕೆ ಕೈ ಜೋಡಿಸಬೇಕೆಂದು ವಿನಂತಿಸಿದರು.

ಹೋರಾಟ ಸಮಿತಿ ರಚನೆ: ಇದೇ ವೇಳೆ ತಾಲೂಕು ರಚನೆಗಾಗಿ ಹೋರಾಟ ಸಮಿತಿ ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಬಸವರಾಜ ಎಚ್‌.ಪಿ., ಸಿದ್ದನಗೌಡ ಮೂಡಲಗುಂಡ, ಅಧ್ಯಕ್ಷರನ್ನಾಗಿ ಕೆರಿಲಿಂಗಪ್ಪ ನಾಡಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಎನ್‌.ಲಿಂಗಪ್ಪ, ಉಪಾಧ್ಯಕ್ಷರಾಗಿ ಲಕ್ಕಪ್ಪ ಚಿಂಚೋಡಿ, ವಾಸುದೇವ ಕರಡಿಗುಡ್ಡ, ಭೀಮರಾಯಗೌಡ ನವಿಲಗುಡ್ಡ, ಅಮರೇಗೌಡ ಪಾಟೀಲ ಕಮ್ಮಲದಿನ್ನಿ, ಮೌನೇಶ ಗಾಣದಾಳ, ಸಂಜೀವಪ್ಪ ಹೊಸೂರು ಸಿದ್ದಾಪುರು, ಮಲ್ಲೇಶಪ್ಪ ಗಲಗ, ಮಲ್ಲನಗೌಡ ಫಲಕನ ಮರಡಿ, ಕಾರ್ಯದರ್ಶಿಗಳಾಗಿ ಆದನಗೌಡ ಬುಂಕಲದೊಡ್ಡಿ, ತಿಮ್ಮಣ್ಣ ನಾಯಕ ದಿವಾಣ, ಅಯ್ಯಪ್ಪ ಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾಗಿ ಮೇಲಪ್ಪ ಭಾವಿಮನಿ, ಹುಸೇನಪ್ಪ ಚಲುವಾದಿ, ವೆಂಕೋಬ ಯರಕಮಟ್ಟಿ, ಖಜಾಂಚಿಗಳಾಗಿ ಭೀಮಣ್ಣ ಗುಮೇದಾರ, ರಂಗಣ್ಣ ಕೋಲ್ಕಾರ ಕಾನೂನು ಸಲಹೆಗಾರರನ್ನಾಗಿ ರಾಜ ವಾಸುದೇವ ನಾಯಕ, ರಂಗಪ್ಪ ಹೆದ್ದಾರಿ, ರವಿಕುಮಾರಗೌಡ ಚಿಂಚೋಡಿ, ವಸಂತಕುಮಾರ ಸೋಮನಮರಡಿ, ನಿರಂಜನ ಕುರುಕುಂದಿ ಮುದುಗೋಟ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಕೆರಿಲಿಂಗಪ್ಪ ನಾಡಗೌಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next