Advertisement

ಬೇಡಿಕೆಗಳ ಈಡೇರಿಕೆಗೆ ಆಗ್ರಹ

02:32 PM Jul 16, 2019 | Team Udayavani |

ಶ್ರೀರಂಗಪಟ್ಟಣ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಅಂಗನವಾಡಿ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಿದರು.

Advertisement

ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು ಸೇರಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ತೆರೆದ ಬಳಿಕ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಕೆಲಸಗಳನ್ನು ಸರ್ಕಾರ ಕಿತ್ತುಕೊಳ್ಳುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಈಗಾಗಲೇ ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು, 3-4 ವರ್ಷಗಳಲ್ಲಿ ಅಂಗನವಾಡಿಗೆ ಬರುತ್ತಿದ್ದ ಮಕ್ಕಳು, ಈಗ ಬೇರೆ ಬೇರೆ ಇಂಗ್ಲಿಷ್‌ ಶಾಲೆಗಳಿಗೆ ಸೇರಿಕೊಂಡು 2 ವರ್ಷ 6 ತಿಂಗಳ ಮಕ್ಕಳಿಗೂ ಪಬ್ಲಿಕ್‌ ಶಾಲೆಯಲ್ಲಿ ಅವಕಾಶಗಳಿ ರುವುದರಿಂದ ಅಂಗನವಾಡಿಗೆ ಪೋಷಕರು ಮಕ್ಕಳನ್ನು ಸೇರಿಸುವುದಿಲ್ಲ. ಕರ್ನಾಟಕ ಪಬ್ಲಿಕ್‌ ಶಾಲೆಗಳ ತೆರೆದಂತೆ ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಇಂಗ್ಲಿಷ್‌ ಕಾನ್ವೆಂಟ್, ನರ್ಸರಿ ಶಾಲೆಗಳಾಗಿ ಪರಿವರ್ತಿಸಿ ಆದೇಶ ಹೊರಡಿಸಬೇಕು ಎಂದರು.

ರಾಜ್ಯ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿರ ತಾಲೂಕು ಸಮಿತಿ ಸಂಚಾಲಕಿ ವಸಂತ, ಮೀನಾಕ್ಷಿ, ಶೈಲಜಾ, ಅನಂತಲಕ್ಷ್ಮೀ, ದುಂಡಮ್ಮ ಮತ್ತಿತರರಿದ್ದರು. ಪುರಸಭೆ ಸದಸ್ಯ ಪ್ರಕಾಶ್‌, ಅಂಗನನಾಡಿ ಕಾರ್ಯಕರ್ತರ ಧರಣಿಗೆ ಬೆಂಬಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next