Advertisement
ಸರ್ಕಾರದ ಯೋಜನೆಗಾಗಿ ಮನೆ, ಮಠ ಹಾಗೂ ಜಮೀನುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ತಿಗಡಿ ಹರಿನಾಲಾ ಹಿನ್ನೀರಿನಲ್ಲಿ ಮನೆ, ಜಮೀನುಗಳನ್ನು ಕಳೆದುಕೊಂಡ ಸಂತ್ರಸ್ತರಾದವರನ್ನು ಕಳೆದ 20 ವರ್ಷಗಳ ಹಿಂದೆ ಪುನರ್ವಸತಿ ಕೇಂದ್ರಗಳಲ್ಲಿ ನಿವೇಶನ ನೀಡಿ ಸ್ಥಳಾಂತರಿಸಲಾಗಿದೆ. ಆದರೆ ಪುನರ್ವತಿ ಕೇಂದ್ರದಲ್ಲಿ ಜನರು ಬಸ್ ಸೌಕರ್ಯ ಇಲ್ಲದೇ ಪರದಾಡಬೇಕಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕಪಡಿಸಿದರು.
Related Articles
Advertisement
ಇದಲ್ಲದೇ ಪಡಿತರ ಧಾನ್ಯವನ್ನು ನಾಲ್ಕು ಕಿಮಿ ದೂರದಲ್ಲಿರುವ ನಾವಲಗಟ್ಟಿ ಗ್ರಾಮಕ್ಕೆ ಬಂದು ತೆಗೆದುಕೊಂಡು ಹೋಗಬೇಕಿದೆ. ಕಾರಣ ಪುನರ್ವಸತಿ ಕೇಂದ್ರ-2 ಕ್ಕೆ ಬಸ್ ಸೌಕರ್ಯ, ಸ್ಮಶಾನ ಭೂಮಿ ನೀಡುವುದು ಹಾಗೂ ಪಡಿತರ ಧಾನ್ಯವನ್ನು ಪುನರ್ವಸತಿ ಕೇಂದ್ರದಲ್ಲಿಯೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಸಮೀರ ಮುಲ್ಲಾ ಹಾಗೂ ನೀರಾವರಿ ಇಲಾಖೆ ಎಂಜಿನಿಯರ್ ಆರ್.ಜಿ.ಯಲಿಗಾರ
ಮಾತನಾಡಿ, ಮುಂಬರುವ 20 ದಿನಗಳಲ್ಲಿ ಸಂತ್ರಸ್ತರ ಕುಂಟುಂಬಗಳು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸಿ ಕೊಡುವುದಾಗಿ ಹೇಳಿದರು.
ಅಡವಯ್ಯ ಚಿಕ್ಕಮಠ, ಬಸವರಾಜ ಪಾತ್ರೋಟ, ಸಂತೋಷ ಕಲ್ಲೂರ, ಸುರೇಶ ಕೇಂದ್ರಿ, ಮಲ್ಲಿಕಾರ್ಜುನ ಕಲ್ಲೂರ, ಬಸವರಾಜ ಹೊಸಮನಿ, ದುಂಡಪ್ಪ ಕಲ್ಲೂರ, ಈರಯ್ಯ ಚಿಕ್ಕಮಠ, ಯಲ್ಲಪ್ಪ ಉಪ್ಪಾರಟ್ಟಿ, ಬಸವರಾಜ ಉರಮನಟ್ಟಿ, ಪ್ರವೀಣ ಪಾತ್ರೋಟ, ಶಿವಪ್ಪ ಕಮ್ಮಾರ, ರವಿ ಮರೆದ, ಶೋಭಾ ಪಾತ್ರೋಟ, ಇಂದ್ರವ್ವ ಪಾತ್ರೋಟ ಪಾಲ್ಗೊಂಡಿದ್ದರು.