Advertisement
ಜಿಲ್ಲಾಡಳಿತ ಭವನದ ಎದುರು ಹೋರಾಟ ಆರಂಭಿಸಲಾಗಿದ್ದು ಕಾರ್ಮಿಕರು 2010ರಿಂದ 2020ರವರೆಗಿನ ಎಪಿಎಫ್ ಮತ್ತು ಇಎಸ್‌ಐ ದಾಖಲೆ ನೀಡುವುದು ಹಾಗೂ ಬಾಕಿ ವೇತನವನ್ನು ಬಿಡುಗಡೆಗೊಳಿಸಿ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ಹೋರಾಟ ನಡೆಯುತ್ತಿದೆ.
Related Articles
Advertisement
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಹೊರಗುತ್ತಿಗೆ ಕಾರ್ಮಿಕರಿಗೆ 5 ತಿಂಗಳಿನಿಂದ ವೇತನವಿಲ್ಲ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆಯ ಗುತ್ತಿಗೆ ಕಾರ್ಮಿಕರಿಗೆ 2020ರ ಮಾರ್ಚ್, ಎಪ್ರಿಲ್, ಮೇ, ತಿಂಗಳ ಹಾಗೂ ನವೆಂಬರ್, ಡಿಸೆಂಬರ್ ತಿಂಗಳ ಪಾವತಿಯಾಗದ ವೇತನ ತಕ್ಷಣವೇ ನೀಡಲು ಒತ್ತಾಯಿಸಲಾಯಿತು.
ಇದನ್ನೂ ಓದಿ:ಪರಿಷತ್ ಸಭಾಪತಿ ಸ್ಥಾನಕ್ಕೆ ಕೆ. ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ
ಬೇಕಿ ವೇತನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವವರೆಗೆ ಧರಣಿ ನಿರಂತರವಾಗಿ ನಡೆಯುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ ಹೇಳಿದರು.
ಧರಣಿಯಲ್ಲಿ ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ, ರಾಮಲಿಂಗಪ್ಪ ಬಿ.ಎನ್., ಸೇರಿದಂತೆ ಕಾರ್ಮಿಕರು ಭಾಗವಹಿಸಿದ್ದಾರೆ.