Advertisement

ಬಸ್‌ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ

01:05 PM Feb 25, 2020 | Suhan S |

ಕುರುಗೋಡು: ಸಮೀಪದ ಎಮ್ಮಿಗನೂರು ವ್ಯಾಪ್ತಿಯಲ್ಲಿ ನಿತ್ಯ ವಿದ್ಯಾರ್ಥಿಗಳಿಗೆ ಬಸ್‌ಗಳ ಅನುಕೂಲವಿಲ್ಲದ ಕಾರಣ ಕೂಡಲೇ ಬಸ್‌ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ದಿಢೀರನೆ ಎಮ್ಮಿಗನೂರು ಗ್ರಾಮದ ಎಸ್‌.ಎಚ್‌. ಮುಖ್ಯ ರಾಜ್ಯ ರಸ್ತೆಯಲ್ಲಿ ಈಶಾನ್ಯ ಸಾರಿಗೆ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಶಾಲಾ- ಕಾಲೇಜ್‌ ವಿದ್ಯಾರ್ಥಿಗಳು ಮಾತನಾಡಿ, ಈಗಾಗಲೇ ಕೆಎಸ್‌ಆರ್‌ಟಿಸಿ ಇಲಾಖೆ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್‌ ಒದಗಿಸುವಂತೆ ಅನೇಕ ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಬಸ್‌ಗಳು ಸರಿಯಾದ ಸಮಯಕ್ಕೆ ಬರದೆ ಇರುವುದರಿಂದ ವಿದ್ಯಾರ್ಥಿಗಳ ತರಗತಿಗಳು ಮಿಸ್‌ ಆಗುತ್ತಿದ್ದು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ. ಅಲ್ಲದೆ ಈಗಾಗಲೇ ಶಾಲೆ-ಕಾಲೇಜ್‌ ಶೈಕ್ಷಣಿಕ ವರ್ಷ ಕೊನೆ ಹಂತದಲ್ಲಿದ್ದು ಪರೀಕ್ಷೆಗಳು ಕೂಡ ಸಮೀಪಿಸುತ್ತಿವೆ.

ಇನ್ನೂ ವ್ಯಾಸಂಗಕ್ಕೆ ಗ್ರಾಮದಿಂದ ಬೆಳಗ್ಗೆ ಕುರುಗೋಡು-ಹಾಗೂ ಬಳ್ಳಾರಿ ಮಾರ್ಗದ ವ್ಯಾಪ್ತಿಯಲ್ಲಿ ಹೋಗುವ ವಿದ್ಯಾರ್ಥಿಗಳು ಉನ್ನತ್ತ ವ್ಯಾಸಾಂಗಕ್ಕೆ ಹೋಗಲು ಬಸ್‌ಗಳೇ ಇಲ್ಲವಾಗಿದೆ. ಈ ಮಾರ್ಗದಲ್ಲಿ ನಿತ್ಯ ಶಾಲಾ ಕಾಲೇಜುಗೆ ನೂರಾರು ಗ್ರಾಮೀಣ ಭಾಗದ ವಿಧ್ಯಾರ್ಥಿಗಳು ಹೋಗುತ್ತಾರೆ. ಆದ್ದರಿಂದ ವಿಧ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿ ಇನ್ನೂ ಹೆಚ್ಚಿನ ಸಾರಿಗೆ ವ್ಯವಸ್ಥೆ ಮಾಡಬೇಕು ಇಲ್ಲವಾದರೆ ಇದೆ ಸಮಸ್ಯೆ ಮುಂದುವರೆದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶಾಲಾ- ಕಾಲೇಜು ವಿಧ್ಯಾರ್ಥಿಗಳಾದ ಎಂ.ರಾಜಶೇಖರ, ದೇವರಾಜ.ಕೆ, ಜಗ ದೀಶ, ಸೌದ್ರಿ ಬಸವರಾಜ, ಜಡೇಮ್ಮ, ಸಿ. ರಾಜಮ್ಮ, ಕೆ.ವಿ.ರಾಜು, ಬಸವರಾಜು ಎಂ., ಶೇಕ್ಷವಲಿ, ಜೆ.ಚಂದ್ರು, ಪಾಂಡುರಂಗ, ಮುಖಂಡರಾದ ಪಿಗ್ನಿಶರಣ ಬಸವನಗೌಡ, ನೆಲ್ಲುಡಿ, ರಾಮಚಂದ್ರಾಪುರ ಕ್ಯಾಂಪ್‌, ಕೋಟ್ಟಾಲ್‌, ಗುತ್ತಿಗನೂರು,  ಶಾಂತಿನಗರ, ಬಳ್ಳಾಪುರ ಗ್ರಾಮದ ನೂರಾರು ವಿದ್ಯಾರ್ಥಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next