Advertisement

ಕನ್ನಡಿಗರ ಮೇಲೆ ದೌರ್ಜನ್ಯಗೆ ಖಂಡನೆ: ಪ್ರತಿಭಟನೆ

05:40 PM Jan 01, 2020 | Team Udayavani |

ದೊಡ್ಡಬಳ್ಳಾಪುರ: ಕರ್ನಾಟಕದ ನಾಡ ಧ್ವಜವನ್ನುಸುಟ್ಟು ಕನ್ನಡಿಗರಹಾಗೂ ಮರಾಠಿಗರ ಕೋಮುಸೌಹಾರ್ದವನ್ನು ಕದಡಿಗಡಿಯಲ್ಲಿ ಉದಿಗ್ನಪರಿಸ್ಥಿತಿಯನ್ನು ಉಂಟುಮಾಡುತ್ತಿರುವ ಶಿವಸೇನೆ ಹಾಗೂ ಎಂಇಎಸ್ ಧೋರಣೆಖಂಡಿಸಿ, ಕರ್ನಾಟಕರಕ್ಷಣಾ ವೇದಿಕೆ ಪ್ರವೀಣ್‌ಶೆಟ್ಟಿ ಬಣದ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Advertisement

ಸಹನೆಪರೀಕ್ಷಿಸುತ್ತಿದ್ದಾರೆ: ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯಕಾರ್ಯದರ್ಶಿ ರಾಜ ಘಟ್ಟರವಿ,ಕನ್ನಡಿಗರು ಶಾಂತಿಪ್ರಿಯರು, ಸಹಿಷ್ಣುಗಳುಆದರೆ ಗಡಿ ಭಾಗಗಳಲ್ಲಿರುವ ರಾಜ್ಯಗಳು ವಿನಾಕಾರಣಸದಾ ಒಂದಿಲ್ಲೊಂದುವಿಚಾರವನ್ನು ಕೆದಕಿ ಕನ್ನಡಿಗರಮೇಲೆ ಆಕ್ರಮಣ ಮಾಡುತ್ತಾನಮ್ಮ ಸಹನೆಯನ್ನುಕೆಣಕುತ್ತಿರುತ್ತಾರೆ. ಇತ್ತೀಚೆಗಷ್ಟೆ ಮಹಾರಾಷ್ಟ್ರದಲ್ಲಿನಮ್ಮನಾಡ ದ್ವಜವನ್ನು ಸುಟ್ಟುಕನ್ನಡಿಗರ ಪ್ರತಿನಿಧಿಯಾದ ಮುಖ್ಯಮಂತ್ರಗಳ ಪ್ರತಿಕೃತಿದಹಿಸಲ್ಲದೆ ಗಡಿಭಾಗಗಳ್ಳಿ ಕನ್ನಡ ಚಲನಚಿತ್ರದ ಪ್ರದರ್ಶನಕೂಡ ನಿಲ್ಲಿಸಿ ನಾಮಫಲಕಗಳಿಗೆ ಮಸಿಬಳಿದು ಕನ್ನಡಿಗರಸ್ವಾಭಿಮಾನವನ್ನುಕೆಣಕ್ಕಿದ್ದಾರೆ.

ನಿಷೇಧಿಸಿ: ಕಾಂಗ್ರೆಸ್‌ ಪಕ್ಷಕೇಂದ್ರದಹೆ„ ಕಮಾಂಡ್‌ಮೇಲೆ ಒತ್ತಡ ಏರಿ ಶಿವಸೇನೆನೀಡಿರುವ ಬೆಂಬಲವನ್ನುಹಿಂಪಡೆದು ಕಿಡಿಗೇಡಿಗಳಿಗೆ ತಕ್ಕಶಿಕ್ಷೆನೀಡಬೇಕಿದೆ. ದೇಶದ ಒಕ್ಕೂಟ ವ್ಯವಸ್ಥೆಗೆಯ ಮೂಲ ಉದ್ದೇಶಗಳನ್ನುಬುಡಮೇಲು ಮಾಡುತ್ತಿರುವವ ಶಿವಸೇನೆ ಹಾಗೂ ಎಂಇಎಸ್‌ ಸಂಘಟನೆಗಳನ್ನುಕೇಂದ್ರಸರ್ಕಾರ ನಿಷೇಧಿಸ ಬೇಕೆಂದು ಒತ್ತಾಯಿಸಿದರು.

ಪದೇಪದೇ: ತಾಲೂಕು ಅಧ್ಯಕ್ಷ ಹಮಾಮ್‌ ವೆಂಕಟೇಶ್‌ ಮಾತನಾಡಿ, ಕನ್ನಡಿಗರ ಭಾವನೆಗಳ ಮೇಲೆಪದೇಪದೇ ಅನ್ಯರಾಜ್ಯದವರ ಕಿಟಲೇ ಹೆಚ್ಚಾಗುತ್ತಿದೆ,ಕೇರಳರಾಜ್ಯದ ಭೇಟಿಗೆ ತೆರಳಿದ್ದ ರಾಜ್ಯದ ಮುಖ್ಯಮಂತ್ರಿಯಡಿಯೂರಪ್ಪರ ಮೇಲೆಹಲ್ಲೆಗೆ ಮುಂದಾಗಿದ್ದ ಘಟನೆ ಸಂಭವಿಸಿದ್ದು, ಒಂದು ರಾಜ್ಯದ ಮುಖ್ಯಮಂತ್ರಿಗೆ ಸೂಕ್ತಭದ್ರತೆ ಕಲ್ಪಿಸಲಾಗದ ಕೇರಳ ಸರ್ಕಾರದ ಮುಖ್ಯಮಂತ್ರಿವೈಯಕ್ತಿಕಹೊಣೆಹೊತ್ತು ರಾಜೀನಾಮೆನೀಡಬೇಕಿದೆ.

ಪರಿಣಾಮ ಎದುರಿಸಬೇಕಾಗುತ್ತದೆ: ಇನ್ನು ತಮಿಳುನಾಡಿನಲ್ಲಿ ಕನ್ನಡ ಭಾವುಟ ವಾಹನದ ಮೇಲೆ ಕಟ್ಟಿದ್ದಕ್ಕೆವಾಹನ ಚಾಲಕನ ಮೇಲೆ ಹಲ್ಲೆ ನಡೆಸಿರುವುದು ಸಹ ಖಂಡನೀಯ,ಶಾಂತಿ ಮಂತ್ರ ಜಪಿಸುತ್ತೇವೆ ಎಂಬಕಾರಣಕ್ಕೆ ನಾವುಗಳು ಕೈಲಾಗದವರಲ್ಲ. ಮತ್ತೆಇಂತಹಘಟನೆಗಳು ಅನ್ಯರಾಜ್ಯಗಳಲ್ಲಿಕಂಡುಬಂದಲ್ಲಿಪ ರಿಣಾಮ ಎದುರಿಸಬೇಕಾಗುವುದೆಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಕರವೇಪ್ರವೀಣ್‌ಶೆಟ್ಟಿ ಬಣದ ಜಿಲ್ಲಾಧ್ಯಕ್ಷರು ರಮೇಶ್‌ವಿರಾಜ್‌,ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಸ್‌ಎಲ್‌ಎನ್‌ ವೇಣು,ಕಾರ್ಯದರ್ಶಿ ಜೋಗಹಳ್ಳಿ ಅಮ್ಮ,ತಾಲೂಕುಗೌರವಾಧ್ಯಕ್ಷಪು. ಮಹೇಶ್‌ ,ಕಾನೂನುಸಲಹೆಗಾರ ಆನಂದ್ , ಖಜಾಂಚಿಆನಂದ್‌ ,ಸಂಚಾಲ ಕಮಂಜುನಾಥ್‌, ನಗರಾಧ್ಯಕ್ಷರುಶ್ರೀನಗರ ಬಷೀರ್‌, ನಗರಪ್ರಧಾನಕಾರ್ಯದರ್ಶಿ ಸುಬ್ರಮಣಿ, ಕಾರ್ಯಕರ್ತರಾದಮುರಳಿ, ರವಿ, ಕೋಡಹಳ್ಳಿ ಬಾಬು, ದಯಾನಂದ್‌ ,ಕರಾಟೆಮಂಜು, ರಾಘವೇಂದ್ರ, ಘಾಟಿ ತಿಮ್ಮರಾಜು ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next