Advertisement

ಕೃಷ್ಣಾ ನದಿಗೆ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ

02:40 PM May 13, 2019 | Team Udayavani |

ಉಗಾರ ಬಿಕೆ: ನಾಲ್ಕು ದಿನದಲ್ಲಿ ಕೃಷ್ಣಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಉಗಾರ ಬುದ್ರುಕ ಗ್ರಾಮದ ಮಹಾವೀರ ಸರ್ಕಲ್ದಲ್ಲಿ ಉಗಾರ ವಿಕಾಸ ವೇದಿಕೆ ಆಶ್ರಯದಲ್ಲಿ ರವಿವಾರ ಪ್ರತಿಭಟನೆ ನಡೆಸಲಾಯಿತು.

Advertisement

ಈ ವೇಳೆ ಯುವ ಮುಖಂಡ ಶೀತಲ ಪಾಟೀಲ ಮಾತನಾಡಿ, ಕಳೆದ 2 ತಿಂಗಳುಗಳಿಂದ ಕೃಷ್ಣಾ ನದಿಯು ಸಂಪೂರ್ಣ ಬತ್ತಿ ಹೋಗಿ ನೀರಿನ ಹಾಹಾಕಾರ ಉಂಟಾಗಿದ್ದರು ಕೂಡ ರಾಜ್ಯ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಿ ಪ್ರಾಮಾಣಿಕವಾಗಿ ಈ ಗಂಭೀರ ಸಮಸ್ಯೆಗೆ ಸ್ಪಂದಿಸದಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆಂದು ಆರೋಪಿಸಿದರು.

ತಾಪಂ ಸದಸ್ಯ ವಸಂತ ಖೋತ ಮಾತನಾಡಿ, ಬಂದ್‌, ಮನವಿ, ಪ್ರತಿಭಟನೆಗಳಿಂದ ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ಖೇಧಕರ ಸಂಗತಿ. ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಅವರ ಸಹನೆಯ ಕಟ್ಟೆ ಒಡೆಯುವ ಮುಂಚೆ ಕೃಷ್ಣಾ ನದಿಗೆ ನೀರು ಹರಿಸಿ ಜನ-ಜಾನುವಾರುಗಳನ್ನು ರಕ್ಷಿಸುವಂತೆ ಒತ್ತಾಯಿಸಿದರು.

ವಿಕಾಸ ವೇದಿಕೆ ಸದಸ್ಯ ಶೀತಲ ಕುಂಬಾರ ಮಾತನಾಡಿ, ಕೃಷ್ಣಾ ನದಿಗೆ ನೀರು ಬಿಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸಿ ನದಿ ತೀರದ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಕೊಯ್ನಾ ಡ್ಯಾಮ್‌ದಿಂದ ನೀರು ಬಿಟ್ಟಾಗ ಮಾತ್ರ ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿಗೆ ಕೃಷ್ಣಾ ನದಿಯ ನೀರು ಬರಲು ಸಾಧ್ಯವೆಂದು ಹೇಳಿದರು.

ನಂತರ ಉಪ ತಹಶೀಲ್ದಾರ್‌ ವಿ.ಬಿ. ಚೌಗಲಾ, ಕಂದಾಯ ಅಧಿಕಾರಿ ಬಿ.ಬಿ. ಬೋರಗಲ್ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಶೀತಲ ಪಾಟೀಲ, ವಸಂತ ಖೋತ, ಅಪ್ಪಾಸಾಬ ಚೌಗಲಾ, ವಿಕಾಸ ವೇದಿಕೆಯ ಬಂಡು ತಮದಡ್ಡಿ, ಉದಯ ಉಮರಾಣಿ, ಶೀತಲ ಕುಂಬಾರ, ಅಭಿನಂದನ ಸದಲಗೆ, ಅಪ್ಪು ಸಲಗರೆ, ಮುರಗೇಶ ಕುಂಬಾರ, ರಾಹುಲ ಕಬಾಡಗೆ, ಅಣ್ಣಾಸಾಬ ಖೋತ, ವಿಜಯ ಸಿಂಧೆ, ಸುರೇಶ ಸಮಾಜಗೆ, ಶಾಂತಿನಾಥ ವಸವಾಡೆ, ಮನೋಹರ ದೇವಮೂರೆ, ಶೀತಲ ಶಹಾ, ದಾದಾಪೀರ ನೇಜಕರ, ಕಲ್ಲು ಕುರಬರ, ಸಾಗರ ಪೂಜಾರಿ, ಸುಭಾಷ ಪೋತದಾರ, ಸುನೀಲ ಮಹಾಜನ, ಇಕಬಾಲ ಜಮಖಾನೆ, ಬಾಳು ಚೌಗಲೆ, ಮಹಾವೀರ ಖಂಡೆರಾಜುರಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹೋರಾಟಕ್ಕೆ ಬೆಂಬಲ

ಕೃಷ್ಣಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಗ್ರಾಮದ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಮಾಡಿ ಬೆಂಬಲ ವ್ಯಕ್ತಪಡಿಸಿದರು. ನಂತರ ಉಗಾರ ಬುದ್ರುಕ ಮಹಾವೀರ ಸರ್ಕಲ್ದಲ್ಲಿ ಸಾಂಕೇತಿಕವಾಗಿ ರಸ್ತೆತಡೆ ನಡೆಸಲಾಯಿತು.
Advertisement

Udayavani is now on Telegram. Click here to join our channel and stay updated with the latest news.

Next