Advertisement

ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

02:37 PM Dec 03, 2019 | Team Udayavani |

ಶಹಾಬಾದ: ನಗರದ ಮರಗೋಳ ಕಾಲೇಜು ವೃತ್ತದಿಂದ ಎಬಿಎಲ್‌ ಕ್ರಾಸ್‌ವರೆಗೆ ಹಾಗೂ ರಿಂಗ್‌ ರೋಡನಿಂದ ನೆಹರು ಚೌಕ್‌ವರೆಗಿನ ಹದಗೆಟ್ಟ ರಸ್ತೆ ದುರಸ್ತಿಗೊಳಿಸಬೇಕು ಮತ್ತು ಒಳಚರಂಡಿಯನ್ನು ವೈಜ್ಞಾನಿಕವಾಗಿ ನಿರ್ಮಿಸಲು ಒತ್ತಾಯಿಸಿ ಸೊಷಲಿಷ್ಟ್ಯೂ ನಿಟಿ ಸೆಂಟರ್‌ ಆಪ್‌ ಇಂಡಿಯಾ (ಕಮ್ಯೂನಿಷ್ಟ್) ಸ್ಥಳೀಯ ಸಮಿತಿ ವತಿಯಿಂದ ಸೋಮವಾರ ಬಸವೇಶ್ವರವೃತ್ತದಲ್ಲಿ ಪ್ರತಿಭಟನೆ ನಡೆಯಿತು.

Advertisement

ಎಸ್‌.ಯು.ಸಿ.(ಸಿ) ಪಕ್ಷದ ಸ್ಥಳೀಯ ಸಮಿತಿ ಕಾರ್ಯದರ್ಶಿ ಕಾಮ್ರೇಡ್‌ ಗಣಪತರಾವ ಕೆ. ಮಾನೆಮಾತನಾಡಿ, ನಗರವುತಾಲೂಕು ಕೇಂದ್ರವಾಗಿದ್ದು, ರಾಷ್ಟ್ರೀಯ ಹೆದ್ದಾರಿ ನಗರದ ಹೊರವಲಯದಿಂದ ಹಾದು ಹೋಗಿದ್ದರೂ ಇಲ್ಲಿನ ಜನರಿಗೆ ಕನಿಷ್ಟ ಮಟ್ಟದ ಸಾರಿಗೆ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರಗಳು ಸಂಪೂರ್ಣವಿಫಲವಾಗಿವೆ ಎಂದು ದೂರಿದರು.

ಶಹಾಬಾದನಿಂದ ಜೇವರ್ಗಿಗೆ ಹೋಗುವ ರಸ್ತೆ ಹಾಗೂ ಒಳಚರಂಡಿ ವೈಜ್ಞಾನಿಕವಾಗಿ ನಿರ್ಮಾಣ ಮಾಡದಿರುವುದರಿಂದ ಸಂಪೂರ್ಣ ಹದಗೆಟ್ಟು ಹೋಗಿ ಕಳಪೆ ಕಾಮಗಾರಿಗೆ ಸಾಕ್ಷಿ ತೋರುತ್ತಿದೆ. ಪ್ರಮುಖವಾಗಿ ಮರಗೋಳ ಕಾಲೇಜು ಕ್ರಾಸ್‌ನಿಂದ ಎಬಿಎಲ್‌ ಕ್ರಾಸ್‌ವರೆಗೆ ಹಾಗೂ ರಿಂಗ್‌ ರೋಡ್‌ನಿಂದ ನೆಹರು ಚೌಕ್‌ವರೆಗಿನ ರಸ್ತೆ ಹದಗೆಟ್ಟಿದೆ.

ಜನಸಾಮಾನ್ಯರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಇದು ಹಲವು ಅಪಘಾತಗಳಿಗೆ ಕಾರಣವಾಗಿ ಕೆಲ ಜನರು ಜೀವವನ್ನು ಕಳೆದುಕೊಂಡರೆ ಮತ್ತೆ ಹಲವರು ಗಾಯಾಳುಗಳಾಗಿದ್ದಾರೆ. ಇಷ್ಟಾದರೂ ಜನಪ್ರತಿನಿ ಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ಅವರು ತೀವ್ರವಾಗಿ ಖಂಡಿಸಿದರು.

ಎಸ್‌.ಯು.ಸಿ.(ಸಿ) ಪಕ್ಷದ ಸ್ಥಳೀಯ ಸಮಿತಿಯ ಸದಸ್ಯ ಕಾಮ್ರೇಡ್‌ ರಾಘವೇಂದ್ರ ಎಂ.ಜಿ ಮಾತನಾಡಿದರು. ಉಪತಹಶೀಲ್ದಾರ್‌ ಮಲ್ಲಿಕಾರ್ಜುನ ಶಿವುಪೂರೆ ಮನವಿ ಸ್ವೀಕರಿಸಿದರು. ಕಂದಾಯ ಅಧಿಕಾರಿ ವೀರಭದ್ರಪ್ಪ, ಎಸ್‌.ಯು.ಸಿ.(ಸಿ) ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಕಾಮ್ರೇಡ್‌ ರಾಮಣ್ಣ ಎಸ್‌. ಇಬ್ರಾಹಿಂಪೂರ, ಕಾಮ್ರೇಡ್‌ ರಾಜೇಂದ್ರ ಆತೂ°ರ್‌, ಜಗನ್ನಾಥ ಎಸ್‌.ಎಚ್‌., ಸಿದ್ದು ಚೌಧರಿ ಹಾಗೂತುಳಜಾರಾಮ, ಕೀರ್ತಿ. ಎಸ್‌.ಎಮ್‌., ವಿಜಯಕುಮಾರ ಮಾನೆ, ತಿಮ್ಮಯ್ಯಮಾನೆ, ನೀಲಕಂಠ ಹುಲಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next