Advertisement

ಕಬ್ಬಿನ ಬಾಕಿ ಪಾವತಿಗೆ ಒತ್ತಾಯಿಸಿ ಪ್ರತಿಭಟನೆ

11:14 AM Oct 19, 2021 | Team Udayavani |

ಆಳಂದ: ತಾಲೂಕಿನ ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆಗೆ ಕಳೆದ ಸಾಲಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತರ ಪ್ರತಿಟನ್‌ 200 ರೂ. ಬಾಕಿ ಬಿಲ್‌ ಪಾವತಿ ಹಾಗೂ ಹಂಗಾಮಿನ ಕಬ್ಬು ನುರಿಸಲು ವಾರದಲ್ಲಿ ಬೆಲೆ ನಿಗದಿ ಪಡಿಸದೆ ಹೋದಲ್ಲಿ ಕಾರ್ಖಾನೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಜಯ ಕರ್ನಾಟಕ ತಾಲೂಕು ಘಟಕದ ಕಾರ್ಯಕರ್ತರು ಎಚ್ಚರಿಸಿದರು.

Advertisement

ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ಕೈಗೊಂಡ ಕಾರ್ಯಕರ್ತರು, ತಹಶೀಲ್ದಾರ್‌ ಕಚೇರಿಗೆ ತೆರಳಿ ಶವದ ಪ್ರತಿಕೃತಿ ದಹಿಸಿ, ಉಪ ತಹಶೀಲ್ದಾರ್‌ ಮನೋಜ ಲಾಡೆ ಅವರಿಗೆ ಮನವಿ ಸಲ್ಲಿಸಿದರು. 2020-21ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ ಕಬ್ಬಿಗೆ 2300 ರೂ. ನೀಡಿವೆ. ಆದರೆ ಸ್ಥಳೀಯ ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆ 2100 ರೂ. ನೀಡಿದೆ. ಇನ್ನುಳಿದ 200 ರೂ.ಗಳನ್ನು ರೈತರ ಬ್ಯಾಂಕ್‌ ಖಾತೆಗೆ ಜಮಾ ಕೈಗೊಳ್ಳಬೇಕು ಎಂದು ಸಂಘಟನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಒತ್ತಾಯಿಸಿದರು.

ಕಬ್ಬು ಬೆಳೆಗಾರರು ಅತಿವೃಷ್ಟಿ-ಅನಾವೃಷ್ಟಿಯಿಂದಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಕಾರ್ಖಾನೆಯಿಂದ ರೈತರಿಗೆ ಬರಬೇಕಾದ 200 ರೂ. ಬಾಕಿ ಬಿಲ್‌ ಕೂಡಲೇ ಪಾವತಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶರಣು ಪಾಟೀಲ ಕೊಡಲಹಂಗರಗಾ, ಅಮಿತ್‌ ಪಾಟೀಲ, ಅಮರ ಕಾಂದೆ, ಪ್ರಕಾಶ ಬೀದಿ, ದೇವೀಂದ್ರಪ್ಪ ಖೇಡ, ಸಚಿನ್‌ ಕೊಗನೂರ, ಮಲ್ಲಿನಾಥ ವಡಗೇರಿ, ಬಸವರಾಜ ಕುಂಬಾರ, ರಾಹುಲ ಮೂಲಗೆ, ಮಹೇಶ ವಾರದ, ನಾಗೇಶ ವಡೆಯರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next