Advertisement

ಕೂಲಿ ಕೆಲಸಕ್ಕೆ ಆಗ್ರಹಿಸಿ ಪ್ರತಿಭಟನೆ

02:04 PM Jun 29, 2019 | Team Udayavani |

ದೋಟಿಹಾಳ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಆಗ್ರಹಿಸಿ ಕೂಲಿಕಾರರು ಬಿಜಕಲ್ ಗ್ರಾಪಂಗೆ ಮುತ್ತಿಗೆ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ದೊಡ್ಡನಗೌಡ ಪಾಟೀಲ ಬಿಜಕಲ್ ಮಾತನಾಡಿ, ಬಿಜಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿಕಾರರು ಫಾರಂ ನಂ.6 ಸಲ್ಲಿಸಿ 25 ದಿನಗಳಾದರು ಕೆಲಸ ನೀಡುತ್ತಿಲ್ಲ. ಸ್ಥಳೀಯವಾಗಿ ಕೆಲಸ ನೀಡದ ಹಿನ್ನೆಲೆಯಲ್ಲಿ ಬೆಂಗಳೂರು, ಗೋವಾ, ಮಂಗಳೂರಿಗೆ ಹೋಗುವುದು ಅನಿವಾರ್ಯವಾಗಿದೆ. ಇಲ್ಲಿ ಮಾಡಲು ಕೆಲಸ ಬೇಕಾದಷ್ಟಿದ್ದರೂ, ಕೆಲಸ ನೀಡುತ್ತಿಲ್ಲ. ಯಾವುದೇ ಕಾರಣಕ್ಕೂ ಈ ಯೋಜನೆಯಲ್ಲಿ ಯಂತ್ರಗಳಿಂದ ಕೆಲಸ ನಿರ್ವಹಿಸದೇ ಕೂಲಿಕಾರರಿಂದ ಕೆಲಸ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ತಾಲೂಕು ಅಧ್ಯಕ್ಷ ಗವಿಸಿದ್ದಪ್ಪ ಗಡಾದ್‌ ಮಾತನಾಡಿ, ಕೂಲಿಕಾರರರು ಬಾಕಿ ವೇತನ ಪಾವತಿಸಬೇಕು. 14ನೇ ಹಣಕಾಸು ಯೋಜನೆ ಖರ್ಚು ವೆಚ್ಚದ ಮಾಹಿತಿ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾ ಯೋಜನೆ ಮಾಹಿತಿ, ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ಮಾಹಿತಿ, 2014-15ರಿಂದ 2018-2019ನೇ ಸಾಲಿನ ಜಮಾ ಬಂದಿ, ಅಂಗವಿಕಲರ ಅನುದಾನ, ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ನೀಡಿದ ಅನುದಾನದ ಸಂಪೂರ್ಣ ಮಾಹಿತಿಗೆ ಆಗ್ರಹಿಸಿದರು. ಇದೇ ವೇಳೆ ಬಸವರಾಜ್‌ ಬೆಳಗಲ್ಲ, ವಿರೂಪನಗೌಡ ಪಾಟೀಲ, ಭದ್ರಮ್ಮ ಗುಜಮಾಗಡಿ, ಹನಮವ್ವ ವಡ್ಡರ್‌, ಮಹಾಂತೇಶ ವಂಕಲಕುಂಟ, ಸಂಗಮೇಶ ಕೊಪ್ಪಳ, ಶಾವಂತ್ರೆವ್ವ ತಳವಾರ, ಮಾನಮ್ಮ ಬಡಿಗೇರ, ಪಾರ್ವತಿ ಹೂಗಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next