Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

10:28 AM Jun 20, 2021 | Team Udayavani |

ಬನಹಟ್ಟಿ: ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಶಾಖಾ ಧಿಕಾರಿ ವೆಂಕಟೇಶ ಸರ್ಜಾಪುರ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಎಲ್‌ಐಸಿ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ರಾಜು ತಡಸದ ಮಾತನಾಡಿ, ವಿಮಾ ಗ್ರಾಹಕರ ಹಿತದೃಷ್ಟಿಯಿಂದ ಪಾಲಿಸಿಗಳ ಮೇಲಿರುವ ಬೋನಸ್‌ ಹೆಚ್ಚಿಸಬೇಕು. ವಿಮಾ ಪಾಲಿಸಿ ಮೇಲಿನ ಸಾಲದ ಬಡ್ಡಿದರ ಕಡಿತಗೊಳಿಸಬೇಕು. ವಿಮಾ ಕಂತಿನ ಮೇಲಿನ ಜಿಎಸ್‌ಟಿ ರದ್ದು ಪಡಿಸಬೇಕು. ಕಳೆದ 20-30 ವರ್ಷಗಳಿಂದ ವಿಮಾ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಹೊಸದಾಗಿ ಸೇವೆಯಲ್ಲಿರುವ ವಿಮಾ ಪ್ರತಿನಿಧಿಗಳ ಹಿತ ಕಾಪಾಡುವುದು ಅವಶ್ಯವಾಗಿದೆ. ಇಲ್ಲಿಯವರೆಗೂ ವಿಮಾ ಪ್ರತಿನಿಧಿ ಗಳು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮತ್ತು ಪ್ರತಿನಿಧಿ ಗಳ ಗ್ರಾಚ್ಯುಟಿ ಸಿಬ್ಬಂದಿ ಹೆಚ್ಚಿಸಬೇಕು, ಗುಂಪು ವಿಮೆಯನ್ನು 50 ಲಕ್ಷ ರೂ.ಗಳವರೆಗೆ ಹೆಚ್ಚಿಸಬೇಕು ಎಂದರು.

ನಂತರ ಮಾತನಾಡಿದ ಎಲ್‌ಐಸಿ ಪ್ರತಿನಿಧಿ  ಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಭರತೇಶ ಉಂದ್ರಿ ಪ್ರತಿನಿಧಿ ಗಳ ವೈದ್ಯಕೀಯ ಸೌಲಭ್ಯ ಹೆಚ್ಚಿಸಬೇಕು. ಕೋವಿಡ್‌-19 ಕ್ಕೆ ಬಲಿಯಾದ ಪ್ರತಿನಿ ಧಿಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಬೇಕು. ಕೋವಿಡ್‌ನಿಂದ ಹೊಸವ್ಯವಹಾರ ಇಲ್ಲದೆ ಸಂಕಷ್ಟದಲ್ಲಿರುವ ಪ್ರತಿನಿ ಧಿಗಳ ಕುಟುಂಬ ನಿರ್ವಹಣೆಗೆ 1 ಲಕ್ಷ ರೂ ಮುಂಗಡ, ಪ್ರತಿನಿಧಿ ಗಳ ಪೆನÒನ್‌ ಸೌಲಭ್ಯ ಕಲ್ಪಿಸಬೇಕು. ಕಾರ್ಯಾಲಯ ಭತ್ತೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಎಲ್‌ಐಸಿ ಪ್ರತಿನಿಧಿ ಗಳಾದ ಈರಣ್ಣ ಹಲಗತ್ತಿ, ಅಶೋಕ ವಸ್ತ್ರದ, ಸತೀಶ ಮೋಟಗಿ, ಅರ್ಜುನ ಪನದಿ, ಬಾಬು ಸನದಿ, ಮಲ್ಲಿಕಾರ್ಜುನ ಕುಂಚನೂರ,ಅಶೋಕ ಬಿಜಾಪುರ, ಮಹೇಶ ಸವದಿ,ಈರಣ್ಣ ಸಪ್ತಸಾಗರ, ಮಹೇಶ ಆರಿ ,ಪರಸುಜಕ್ಕನ್ನವರ, ಕಾಡಯ್ಯ ಕಾಡದೇವರಮಠ, ಎಲ್‌ .ಜಿ. ಕಾಸನೀಸ್‌, ಶಂಕರ ಮುರಗೋಡ, ಎಸ್‌.ಬಿ. ಕಪಾಳಗಂಟಿ, ಮುರಿಗೆಪ್ಪ ಬಿಲವಾಡಿ, ಶಿವಾನಂದ ಮುತ್ತೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next