Advertisement

ನೇರ ನೇಮಕಕ್ಕೆ ಒತ್ತಾಯಿಸಿ ಪ್ರತಿಭಟನೆ

02:57 PM Jul 23, 2019 | Team Udayavani |

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಸುಮಾರು 1800 ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರ ನೇಮಕಾತಿ ಅರ್ಹತೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಪೌರಕಾರ್ಮಿಕರ ಸಂಘದವರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

Advertisement

ಪ್ರಧಾನ ಅಂಚೆ ಕಚೇರಿ ಎದುರಿನ ಡಾ| ಅಂಬೇಡ್ಕರ ಪ್ರತಿಮೆ ಆವರಣದಿಂದ ಪೌರಕಾರ್ಮಿಕರು ಪ್ರತಿಭಟನಾ ಮೆರವಣಿಗೆಯಲ್ಲಿ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್‌ಗೆ, ನಂತರ ಪಾಲಿಕೆಗೆ ತೆರಳಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಪಾಲಿಕೆಯಲ್ಲಿ 15-20 ವರ್ಷಗಳಿಂದ ಹೊರಗುತ್ತಿಗೆ ಪೌರಕಾರ್ಮಿಕರಾಗಿ ಸುಮಾರು 1800 ಜನರು ಕೆಲಸ ಮಾಡುತ್ತ ಬಂದಿದ್ದಾರೆ. ಪಾಲಿಕೆ ಈಗ ನೇರ ವೇತನಕ್ಕೆ ಅಳವಡಿಸಿದ್ದು, ಅವರಲ್ಲಿ ಕೇವಲ 762 ಜನರನ್ನು ನೇರ ನೇಮಕಕ್ಕೆ ಅರ್ಹರೆಂದು ಅಳವಡಿಸಲಾಗಿದೆ. ಇದರಿಂದ ಇನ್ನುಳಿದ 1038 ಪೌರಕಾರ್ಮಿಕರಿಗೆ ಅನ್ಯಾಯವಾಗಿದ್ದು, ಪರಸ್ಪರರು ಕಿತ್ತಾಡಿಕೊಳ್ಳುವಂತಾಗಿದೆ. ಆಯ್ಕೆ ಪ್ರಕ್ರಿಯೆ ದೋಷಪೂರಿತವಾಗಿದೆ. ಎಲ್ಲ ಪೌರಕಾರ್ಮಿಕರು ಅರ್ಹತೆ ಹೊಂದಿದ್ದರೂ ಅವರನ್ನು ಕೈಬಿಡಲಾಗಿದೆ. ಕೂಡಲೇ ಸರಕಾರ ಹಾಗೂ ಸಂಬಂಧಿಸಿದ ಸಚಿವರು, ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಿ ಎಲ್ಲ ಪೌರಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. 15 ದಿನದೊಳಗೆ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಹೇಳಿದರು.

ಮುಖಂಡರಾದ ನಿಂಗಪ್ಪ ಮೊರಬದ, ಬಸಪ್ಪ ಮಾದರ, ಗಂಗಾಧರ ಟಗರಗುಂಟಿ, ಭೀಮಪ್ಪ ಕೆಂಪಣ್ಣವರ, ವೆಂಕಟೇಶ ಟಗರಗುಂಟಿ, ದುರ್ಗಪ್ಪ ವೀರಾಪುರ, ಹೊನ್ನಪ್ಪ ದೇವಗಿರಿ, ರಮೇಶ ರಾಮಯ್ಯನವರ, ಮುತ್ತರಾಜ ಕೆಲೂರ, ಸೋಮು ಮೊರಬದ, ಪರಶುರಾಮ ಕಿನಕೇರಿ, ಚಂದ್ರು ಖಾನಾಪುರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next