Advertisement

ಸುಸಜ್ಜಿತ ಮನೆಗೆ ಆಗ್ರಹಿಸಿ ಪ್ರತಿಭಟನೆ

12:17 PM Nov 12, 2019 | Team Udayavani |

ಬೆಳಗಾವಿ: ಪುನರ್ವಸತಿ ಕೇಂದ್ರದಲ್ಲಿ ನಿರ್ಮಾಣವಾಗಿರುವ ಮನೆಗಳು ಕಳಪೆ ಗುಣಮಟ್ಟದ್ದಾಗಿದ್ದು, ಅವುಗಳನ್ನು ನೆಲಸಮಗೊಳಿಸಿ ಮೂರು ಬಿಎಚ್‌ಕೆ ಸುಸಜ್ಜಿತ ಮನೆಗಳನ್ನು ನಿರ್ಮಿಸಬೇಕೆಂದು ಎಸ್ಸಿ, ಎಸ್ಟಿ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

2005ರಿಂದ 2007ರ ಅವಧಿಯಲ್ಲಿ ಕೃಷ್ಣಾ ನದಿ ಪ್ರವಾಹದಿಂದಾಗಿ ಕಾಗವಾಡ ತಾಲೂಕಿನ ಉಗಾರ ಬಿ.ಕೆ., ಉಗಾರ ಖುರ್ದ ಹಾಗೂ ಕೃಷ್ಣಾ ಕಿತ್ತೂರ ಗ್ರಾಮಗಳು ಮುಳುಗಡೆ ಆಗಿದ್ದವು. ಅನೇಕ ಕುಟುಂಬಗಳು ನಿರಾಶ್ರಿತರಾಗಿ ಬೀದಿಗೆ ಬಿದ್ದಿದ್ದವು. ಈಗಲೂ ಇತ್ತೀಚೆಗೆ ನಡೆದ ಪ್ರವಾಹದಿಂದಲೂ ದಲಿತರು ವಾಸಿಸುವ ಪ್ರದೇಶ ಜಲಾವೃತಗೊಂಡು ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡಿದ್ದಾರೆ ಎಂದು ದೂರಿದರು.

2009ರಲ್ಲಿ ಭೂಸೇನಾ ನಿಗಮದಿಂದ ಉಗಾರ ಬಿ.ಕೆ. ಗ್ರಾಮದಲ್ಲಿ 184, ಉಗಾರ ಖುರ್ದದಲ್ಲಿ 87 ಹಾಗೂ ಕೃಷ್ಣಾ ಕಿತ್ತೂರದಲ್ಲಿ 101 ಆಸರೆ ಮನೆಗಳನ್ನು ನಿರ್ಮಿಸಲಾಗಿದೆ. ಕಳಪೆ ಕಾಮಗಾರಿಯಿಂದ ಮೇಲ್ಛಾವಣಿ ಹಾಗೂ ಗೋಡೆಗಳು ಶಿಥಿಲಾವಸ್ಥೆಯಲ್ಲಿವೆ. ಕುಸಿದು ಬೀಳುವ ಹಂತದಲ್ಲಿವೆ ಎಂದು ಆರೋಪಿಸಿದರು.

ನೆರೆಯಿಂದಾಗಿ ಮನೆಗಳು ನೆಲಸಮವಾಗಿವೆ. ಹೀಗಾಗಿ ಸರ್ಕಾರ ಎ ಪಟ್ಟಿಯಲ್ಲಿ ಹೆಸರನ್ನು ಸೇರಿಸಿ ಪರಿಹಾರ ನೀಡಬೇಕು. ಆಶ್ರಯ ಮನೆಗಳನ್ನು ನೆಲಸಮಗೊಳಿಸಿ 3 ಬಿಎಚ್‌ಕೆ ಮನೆಗಳನ್ನು ನಿರ್ಮಿಸಿಕೊಡಬೇಕು. ಶೌಚಾಲಯ, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರವಣ ಕಾಂಬಳೆ, ಜಿಲ್ಲಾಧ್ಯಕ್ಷ ದುಗೇಶ ಮೇತ್ರಿ, ಶ್ರೀಕಾಂತ ಮುಚ್ಚಂಡಿ, ರಾವಸಾಬ ಕಾಂಬಳೆ, ಶಿವಾನಂದ ರಾಮಣ್ಣನವರ, ಉದಯ ಮೇತ್ರಿ, ತುಕಾರಾಮ ಕಾಂಬಳೆ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next