Advertisement

2ಎ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ

04:32 PM May 10, 2022 | Team Udayavani |

ಯಲಬುರ್ಗಾ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಹಕ್ಕೊತ್ತಾಯಿಸಿ ಸೋಮವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು ಸ್ಥಳೀಯ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಪುತ್ಥಳಿಗೆ ಮಾರ್ಲಾಪಣೆ ಮಾಡಿ ನಂತರ ತಹಶೀಲ್ದಾರ್‌ ಕಚೇರಿವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದರು.

Advertisement

ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ ಮಾತನಾಡಿ, ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣ, ಯುವ ಜನರ ಉದ್ಯೋಗ, ಮಹಿಳೆಯರ ಕಲ್ಯಾಣ, ರೈತ ಕಾರ್ಮಿಕರ ಅಭ್ಯುದಯ ಸೇರಿದಂತೆ ಸರ್ವರ ಏಳ್ಗೆಗಾಗಿ ನಡೆದ ಐತಿಹಾಸಿಕ ಬೆಂಗಳೂರು ಪಾದಯಾತ್ರೆ ಮಾಡಿದರು ಇದುವರೆಗೂ ನಮ್ಮ ಭರವಸೆ ಈಡೇರಿಲ್ಲ. ಸಮಾಜದ ಬಹುದಿನದ ಬೇಡಿಕೆಯಾದ 2ಎ ಮೀಸಲಾತಿ ಸೌಲಭ್ಯ ಒದಗಿಸಿಕೊಡುವಂತೆ ಈ ಹಿಂದೆ ಸಾಕಷ್ಟು ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿದರೂ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದನೆ ಮಾಡುತ್ತಿಲ್ಲ. ಸಮಾಜಕ್ಕೆ ನ್ಯಾಯ ಒದಗಿಸಿ ಕೊಡುವ ಪ್ರಯತ್ನ ಮಾಡುತ್ತಿಲ್ಲ. ಪದೇ ಪದೆ ಮೀಸಲಾತಿ ಒದಗಿಸಿ ಕೊಡುವ ವಿಷಯದಲ್ಲಿ ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಮಾನಗಳಲ್ಲಿ ಸರ್ಕಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆಗ್ರಹಿಸಿದರು.

ಜಿಪಂ ಮಾಜಿ ಸದಸ್ಯ ಸಿ.ಎಚ್‌. ಪೊಲೀಸ ಪಾಟೀಲ ಮಾತನಾಡಿ, ರಾಜ್ಯಾದ್ಯಂತ ಎಂಬತ್ತು ಲಕ್ಷಕ್ಕಿಂತಲೂ ಅಧಿಕವಾಗಿರುವ ಪಂಚಮಸಾಲಿ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ತೀರಾ ಹಿಂದುಳಿದಿದೆ. ಆದ್ದರಿಂದ ಸರ್ಕಾರ ಕೂಡಲೇ 2ಎ ಮೀಸಲಾತಿ ನೀಡಬೇಕು. ನಮ್ಮ ಹಕ್ಕು ನ್ಯಾಯಯುತವಾಗಿದೆ ಎಂದರು. ಮುಖಂಡ ವೀರಣ್ಣ ಹುಬ್ಬಳ್ಳಿ ಮಾತನಾಡಿ, ಸಮುದಾಯ ಕೃಷಿಯನ್ನೇ ನೆಚ್ಚಿ ಬದುಕು ಸಾಗಿಸುತ್ತಿದೆ. ಸರಕಾರ ಸಮುದಾಯದ ಬೇಡಿಕೆಯನ್ನು ತ್ವರಿತಗತಿಯಲ್ಲಿ ಈಡೇರಿಸಬೇಕು. ಸಮುದಾಯ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಇಂದಿಗೂ ನಮ್ಮ ಸಮಾಜ ಬಡತನದಲ್ಲಿ ಬೆಂದು ಬರಡಾಗಿದೆ. ತಾಲೂಕು ಅಧ್ಯಕ್ಷ ಕೆ.ಜಿ. ಪಲ್ಲೇದ, ಕಾರ್ಯದರ್ಶಿ ರಾಜಶೇಖರ ನಿಂಗೋಜಿ, ಶೇಖರಗೌಡ ಉಳ್ಳಾಗಡ್ಡಿ, ಸುರೇಶಗೌಡ ಶಿವನಗೌಡ್ರ ಮಾತನಾಡಿದರು.

ಸ. ಶರಣಪ್ಪ ಪಾಟೀಲ್‌ ಕರಮುಡಿ, ಶರಣಪ್ಪ ಗಾಂಜಿ, ಆನಂದ ಉಳ್ಳಾಗಡ್ಡಿ, ಸಿದ್ಧರಾಮೇಶ ಬೆಲೇರಿ, ಸಂಗಪ್ಪ ರಾಮತ್ನಾಳ, ಶಿವಕುಮಾರ ನಾಗನಗೌಡ್ರ, ರಾಜಶೇಖರ ಶ್ಯಾಗೋಟಿ, ಕಳಕೇಶ ಅರಕೇರಿ, ಮಹೇಶ ಭೂತೆ, ಶರಣಪ್ಪ ರಾಂಪೂರ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಶರಣಪ್ಪ ಕೊಟಗಿ, ನೀಲನಗೌಡ ತಳವಗೇರಿ, ಡಾ| ಶರಣಪ್ಪ ಕೊಪ್ಪಳ, ಮಹೇಶ ಭೂತೆ, ಶರಣಪ್ಪ, ಬಸವರಾಜ ಚಿತ್ತರಗಿ, ಶರಣಪ್ಪ ಗೋಣಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next