Advertisement

ಕೊಳಚೆ ನೀರು ತಡೆಯಲು ಆಗ್ರಹಿಸಿ ಪ್ರತಿಭಟನೆ

02:57 PM Jun 07, 2019 | Suhan S |

ಶಿರಸಿ: ನಾಡಿನ ಹಲವಡೆಯ ಭಕ್ತರು ಭಕ್ತಿಯಿಂದ ನಡೆದುಕೊಳ್ಳುವ ಇಲ್ಲಿನ ಪ್ರಾದುಕಾಶ್ರಮಕ್ಕೆ ಶಿರಸಿಯ ಕೊಳಚೆ ಹಾಗೂ ಗಟಾರದ ನೀರು ಬಾರದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಾವಿರಾರು ಭಕ್ತರು ಸಹಾಯಕ ಆಯುಕ್ತರಿಗೆ ಮೌನ ಮೆರವಣಿಗೆ ನಡೆಸಿ ಆಗ್ರಹಿಸಿದರು.

Advertisement

ಪಾದುಕಾಶ್ರಮದಿಂದ ಮೌನ ಮೆರವಣಿಗೆಯಲ್ಲಿ ಆಗಮಿಸಿದ ಭಕ್ತರು, ಪಾದುಕಾಶ್ರಮ ಇರುವಲ್ಲಿ ಯಾವುದೇ ಗಟಾರಗಳೂ ಇಲ್ಲ. ಆದರೂ ಪಟ್ಟಭದ್ರರು ಮಲೀನವಾದ ಕೊಳಚೆ ನೀರು ಹರಿಸಿ ಅಪವಿತ್ರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ, ಆಶ್ರಮದ ಪುಷ್ಕರಣಿ, ಬಾವಿಗೆ ಕಲುಷಿತ ನೀರು ಬಂದು ವಾತಾವರಣ ಕೂಡ ಹಾಳಾಗುತ್ತದೆ. ಇದು ಭಕ್ತರ ನೋವಿಗೂ ಕಾರಣವಾಗುತ್ತದೆ ಎಂದರು.

ಈ ಸಂಬಂಧ ನಗರಸಭೆಗೆ ಅನೇಕ ಬಾರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲು ವಿನಂತಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಬೇರೆ ಬೇರೆ ಕಾಲುವೆಗೆ ಟೆಂಡರ್‌ ಕರೆದರೂ ಅದೂ ವಿಳಂಬವಾಗಿದೆ ಎಂದ ಭಕ್ತರು, ಶ್ರೀಧರ ಪಾದುಕಾಶ್ರಮದ ಸ್ಥಳವನ್ನು ಸ್ವಚ್ಛವಾಗಿಡಲು ಸಹಕಾರ ನೀಡಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಸದಾಶಿವ ಹೆಗಡೆ, ಎಂ.ಎಸ್‌. ಹೆಗಡೆ ಕೊಪ್ಪ, ಗಣಪತಿ ಹೆಗಡೆ ಮಾಳೇನಳ್ಳಿ, ಎಂ.ಎನ್‌. ಹೆಗಡೆ, ದಿವಾಕರ ಭಟ್ಟ, ರಮೇಶ ಶೆಟ್ಟಿ, ಗೋದಾವರಿ ಹೆಗಡೆ, ಗಣಪತಿ ಹೆಗಡೆ, ಎಂ.ಎನ್‌. ಭಟ್ಟ ಇತರರು ಇದ್ದರು. ಸಾಗರ, ಸಿದ್ದಾಪುರ, ಯಲ್ಲಾಪುರ, ಶಿರಸಿ ಸೀಮೆ ಭಕ್ತರು ಮೌನ ಮೆರವಣಿಗೆಯಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next