Advertisement

ಅಲ್ಪಸಂಖ್ಯಾತರ ಕಲ್ಯಾಣಾಧಿ ಕಾರಿವರ್ಗಾವಣೆಗೆ ಪ್ರತಿಭಟನೆ

12:10 PM Aug 31, 2017 | Team Udayavani |

ಬೀದರ: ಜಿಲ್ಲೆಯ ಕ್ರೈಸ್ತರ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳು ಕುಂಠಿತಗೊಳಿಸುವ ಷಡ್ಯಂತ್ರ ನಡೆಸುತ್ತಿದ್ದು, ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಕ್ರೈಸ್ತ ಯುವ ರಕ್ಷಣಾ ಸಮಿತಿಯಿಂದ
ಬುಧವಾರ ನಗರದ ಅಲ್ಪಸಂಖ್ಯಾತರ ಕಚೇರಿ ಎದುರು ಧರಣಿ ನಡೆಸಲಾಯಿತು.

Advertisement

ಸಮಿತಿ ರಾಜ್ಯಾಧ್ಯಕ್ಷ ಕಾಯಲ ಎಸ್‌.ಆರ್‌. ಹಾಗೂ ಜಿಲ್ಲಾಧ್ಯಕ್ಷ ರಾಜು ಕೋಳಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರಿಗೆ ಬರೆದ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. 

ಕ್ರೈಸ್ತ ಸಮುದಾಯದ ಚರ್ಚಗಳ ನವೀಕರಣ, ದುರುಸ್ತಿ, ಶಾದಿಭಾಗ್ಯ, ಸಮುದಾಯ ಭವನ ಕಟ್ಟಡಕ್ಕಾಗಿ ಸರ್ಕಾರ ಅಲ್ಪಸಂಖ್ಯಾತರ ಇಲಾಖೆ ಮೂಲಕ ಜಿಲ್ಲೆಗೆ ವಿಶೇಷವಾಗಿ 3.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ, ಇಲಾಖೆ ಜಿಲ್ಲಾಧಿಕಾರಿಗಳು ವಿನಾಕಾರಣ ಸಮಾಜದ
ಅಭಿವೃದ್ಧಿಯನ್ನು ಹಾಳು ಮಾಡಲು ಸಂಚು ಮಾಡುತ್ತಿದ್ದಾರೆ ಮತ್ತು ಸಂಘ ಸಂಸ್ಥೆಗಳಿಗೆ ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಸಕ್ತ ಸಾಲಿನ ಅನೇಕ ಕಡತಗಳು ಅಲ್ಪಸಂಖ್ಯಾತರ ಇಲಾಖೆಯಲ್ಲಿದ್ದು ಅವುಗಳನ್ನು ತಪಾಸಣೆ ಮಾಡದೆ ಕಚೇರಿಯಲ್ಲಿ ಇಟ್ಟುಕೊಂಡು ನಿಷ್ಕಾಳಜಿ ತೋರುತ್ತಿದ್ದಾರೆ. ಸರ್ಕಾರ ಮೀಸಲಟ್ಟಿರುವ ಅನುದಾನವನ್ನು ಬಳಸಿಕೊಳ್ಳುವ ಸಂಘ ಸಂಸ್ಥೆಗಳಿಗೆ ಸಹಕಾರ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಾಗಾಗಿ ಕೂಡಲೇ ಅಲ್ಪಸಂಖ್ಯಾತರ ಅಧಿಕಾರಿಯನ್ನು ವರ್ಗಾವಣೆ ಮಾಡಿ ದಕ್ಷ ಅಧಿಕಾರಿಯನ್ನು ನೇಮಕ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next