Advertisement
ಕೊರಟಗೆರೆ ಪಟ್ಟಣದ ಪಂಚಾಯತ್‌ರಾಜ್ ಇಲಾಖೆಯ 60 ಲಕ್ಷ ರೂ. ಮೌಲ್ಯದ 7 ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಸುವ ವೇಳೆ ಕೊರಟಗೆರೆ ಎಇಇ ನೀಡಿರುವ ಮೀಸಲಾತಿ ಅಂಕಿಅಂಶದ ವರಧಿಯನ್ನೇ ಮಧುಗಿರಿ ಇಇ ಮತ್ತು ಕೊರಟಗೆರೆ ಎಇ ತಿರಸ್ಕರಿಸಿ ಸರಕಾರದ ಆದೇಶವನ್ನೇ ಉಲ್ಲಂಘಿಸಿ ಕರ್ತವ್ಯಲೋಪ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ರಾಜ್ಯ ಸರಕಾರದ ಆದೇಶವೇ ಉಲ್ಲಂಘನೆ..ಪಿಆರ್‌ಇಡಿ ಇಲಾಖೆಯ ಕಾಮಗಾರಿಯಲ್ಲಿ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರಿಗೆ ಮೀಸಲಾತಿ ನೀಡುವಂತೆ 2007 ರಲ್ಲಿ ಆದೇಶ ಮಾಡಿದೆ. ಕೊರಟಗೆರೆಯ ಪಂಚಾಯತ್‌ರಾಜ್ ಇಲಾಖೆಯಲ್ಲಿ ಪ್ರಸ್ತುತವರ್ಷ 60 ಲಕ್ಷ ರೂ ಅನುದಾನದ7 ಕಾಮಗಾರಿಗಳಿವೆ.7 ಕಾಮಗಾರಿಯಲ್ಲಿ 2 ಎಸ್‌ಸಿ, 1 ಎಸ್‌ಟಿ ಮತ್ತು4 ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಕೊರಟಗೆರೆ ಎಇಇ ರವಿಕುಮಾರ್ ಸರಕಾರದ ಆದೇಶದಂತೆ ಮಧುಗಿರಿ ಇಇ ಕಚೇರಿಗೆ ಅ.17 ರಂದೇ ಕಳುಹಿಸಿರುವ ಪ್ರತಿಗಳಿವೆ. ಕೊರಟಗೆರೆ ಎಇ ಮುಷೀರ್ ಅಹಮ್ಮದ್ ಮತ್ತು ಮಧುಗಿರಿ ಇಇ ದಯಾನಂದ್ ಸರಕಾರದ ಆದೇಶ ಉಲ್ಲಂಘಿಸಿ 7 ಕಾಮಗಾರಿಯನ್ನೇ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಟೆಂಡರ್ ಮುಗಿಸಿರುವುದೇ ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣವಾಗಿದೆ. 60 ಲಕ್ಷ ಅನುದಾನದ 7 ಕಾಮಗಾರಿಯ ಟೆಂಡರ್ ಪ್ರಕ್ರಿಯೆಗೆ ಈಗಾಗಲೇ ತಡೆ ನೀಡಲಾಗಿದೆ. ಕಂಪ್ಯೂಟರ್ ಟೆಕ್ನಿಕಲ್ ಸಮಸ್ಯೆಯಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಲೋಪವಾಗಿದೆ. ಮಧುಗಿರಿ ಮತ್ತು ಕೊರಟಗೆರೆ ಕಚೇರಿಯಲ್ಲಿ ಅಧಿಕಾರಿಗಳ ಕೊರತೆ ಸಾಕಾಷ್ಟಿದೆ. ಗುತ್ತಿಗೆ ಮೀಸಲಾತಿ ನೀಡೋದು ನಮ್ಮ ಪ್ರಮುಖ ಕರ್ತವ್ಯ. ಕೆಲಸದ ಒತ್ತಡದಿಂದ ಇಂತಹ ಲೋಪವಾಗಿದ್ದು ಮತ್ತೇ ಇಂತಹ ಘಟನೆ ನಡಿಯೋದಿಲ್ಲ.
ದಯಾನಂದ್. ಇಇ. ಪಿಆರ್‌ಇಡಿ ಇಲಾಖೆ. ಮಧುಗಿರಿ