Advertisement

ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

12:08 PM Dec 22, 2018 | |

ಶಹಾಬಾದ: ನಗರದ ಸಾರ್ವಜನಿಕರಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹದಗೆಟ್ಟ ರಸ್ತೆಯಿಂದ ತುಂಬಾ ತೊಂದರೆಯಾಗುತ್ತಿದ್ದು, ಕೂಡಲೇ ಸರ್ಕಾರ ನಗರದ ನೆಹರು ಚೌಕ್‌ದಿಂದ ನಿಜಾಮ ಬಜಾರ್‌ ವರೆಗೆ ರಸ್ತೆ ಡಾಂಬರೀಕರಣ ಮಾಡಬೇಕೆಂದು ಎಸ್‌ ಯುಸಿಐ (ಸಿ) ಕಾರ್ಯದರ್ಶಿ ಗಣಪತ್‌ ರಾವ್‌ ಮಾನೆ ಆಗ್ರಹಿಸಿದರು. 

Advertisement

ಶುಕ್ರವಾರ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯೂನಿಸ್ಟ್‌) ಸ್ಥಳೀಯ ಸಮಿತಿ ವತಿಯಿಂದ ನಗರದ ನೆಹರು
ಚೌಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಗರದ ಹಲವು ಕಡೆ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಅನುದಾನದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ ನಗರದ ನೆಹರು ಚೌಕ್‌ನಿಂದ ನಿಜಾಮ ಬಜಾರ್‌ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನಡೆದಾಡಲೂ ತೊಂದರೆಯಾಗುತ್ತಿದೆ.

ಒಂದು ಬಸ್‌ ಅಥವಾ ಲಾರಿ ಸಂಚರಿಸಿದರೆ ಇಡೀ ರಸ್ತೆ ಧೂಳಿನಿಂದ ತುಂಬಿ ಹೋಗುತ್ತದೆ. ಈ ರಸ್ತೆಯು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಾಕ್ಕೆ ಗುರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರದಿಂದ ಹೊರ ಹೋಗಲು ಹಾಗೂ ದೊಡ್ಡ ವಾಹನಗಳ ಸಂಚಾರ ಈ ರಸ್ತೆಯಿಂದಲೇ ಇದೆ. ಅಲ್ಲದೇ ಶರಣನಗರ, ಅಶೋಕ ನಗರ, ನಿಜಾಮ ಬಜಾರ, ಗೋಳಾ ಕೆ, ಶಿವಾಜಿ ನಗರ, ರಾಮಾ ಮೊಹಲ್ಲಾ ನಿವಾಸಿಗಳು ಈ ರಸ್ತೆಯಿಂದಲೇ ಸಂಚರಿಸಬೇಕಿದೆ. ಹತ್ತಿರದ ಹಳ್ಳಿಗಳಾದ ವಡ್ಡರವಾಡಿ, ಹೊನಗುಂಟಾ ಹಾಗೂ ಇಂಗಳಗಿ ಗ್ರಾಮಕ್ಕೆ ಈ ರಸ್ತೆ ಮೂಲಕವೇ ಸಂಚಾರವಿದೆ. ಆದ್ದರಿಂದ ಕೂಡಲೇ ರಸ್ತೆಯನ್ನು ಡಾಂಬರೀಕರಣ ಮಾಡಬೇಕೆಂದು ಆಗ್ರಹಿಸಿದರು.

ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ಎಸ್‌. ಇಬ್ರಾಹಿಂಪುರ, ಸ್ಥಳೀಯ ಸದಸ್ಯ ರಾಘವೇಂದ್ರ ಎಂ. ಜಿ ಮಾತನಾಡಿ, ಸಾರ್ವಜನಿಕರು ಸುಗಮವಾಗಿ ಸಂಚರಿಸಲು ಕೂಡಲೇ ರಸ್ತೆ ನಿರ್ಮಿಸಬೇಕು. ಇಲ್ಲದಿದ್ದರೆ ಉನ್ನತ ಮಟ್ಟದ ಹೋರಾಟಗಳನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ಉಪ-ತಹಶೀಲ್ದಾರ್‌ ಮಲ್ಲಿಕಾರ್ಜುನ ಶಿವಪುರ ಅವರಿಗೆ ಮನವಿ ಪತ್ರ ಸ್ವೀಕರಿಸಿ, ರಸ್ತೆ ಕಾಮಗಾರಿ ಟೆಂಡರ್‌ ಕರೆಯಲಾಗಿದೆ. ಆದಷ್ಟು ಬೇಗ ರಸ್ತೆ ನಿರ್ಮಿಸುವುದಾಗಿ ತಿಳಿಸಿದರು. ಜಗನ್ನಾಥ.ಎಸ್‌.ಎಚ್‌, ನಿಂಗಣ್ಣ. ಎಸ್‌. ಜಂಬಗಿ, ಗುಂಡಮ್ಮ ಮಡಿವಾಳ, ಸಿದ್ದು
ಚೌಧರಿ, ತುಳಜಾರಾಮ ಎನ್‌.ಕೆ., ರಮೇಶ ದೇವಕರ, ರಾಜೇಂದ್ರ ಅತನೂರ, ಅಂಬಿಕಾ ಗುರುಜಾಲಕರ್‌, ನೀಲಕಂಠ ಹುಲಿ, ರಘು ಮಾನೆ ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next