Advertisement

ಮೂಲಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

11:10 AM Jun 19, 2019 | Suhan S |

ಕಾರಟಗಿ: ಸಮರ್ಪಕ ಕುಡಿವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ನಿವಾಸಿಗಳು ಮಂಗಳವಾರ ಸ್ಥಳೀಯ ಪುರಸಭೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

Advertisement

ಪಟ್ಟಣದ 16-17-20ನೇ ವಾರ್ಡ್‌ನ ತುಂಗಭದ್ರಾ ವಿತರಣಾ ನಾಲೆಯ ದಂಡೆಯ ಭಾಗದಲ್ಲಿ 2 ತಿಂಗಳಿಂದ ನೀರು ಪೂರೈಕೆಯಾಗುತ್ತಿಲ್ಲ. ಮೂರು ನೀರಿನ ತೊಟ್ಟಿಗಳಿದ್ದರೂ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಮಹಿಳೆಯರಿಗೆ ಶೌಚಾಲಯವಿಲ್ಲದೇ ತೀವ್ರ ತೊಂದರೆ ಅನುಭವಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪುರಸಭೆ ಮುಖ್ಯಾಧಿಕಾರಿ ಎನ್‌. ಶಿವಲಿಂಗಪ್ಪ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಸಮಸ್ಯೆ ಕುರಿತು ಮಾಹಿತಿ ಪಡೆದದ್ದು ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದು ಇವಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ನಾಗರಾಜ ಬೂದಿ, ರಾಮೂಲು ನಾಡಿಗೇರ, ಕ.ವೀ. ಕನ್ನಡಿಗರ ಸೇನೆ ಅಧ್ಯಕ್ಷ, ಮಲ್ಲಾ ಸಾಲೋಣಿ, ಮಂಜುನಾಥ ಎಸ್‌, ಶರಣಮ್ಮ, ಯಲ್ಲಮ್ಮ, ಯಮನೂರಮ್ಮ, ಪಾರ್ವತೆಮ್ಮ, ಜಯಮ್ಮ, ದೇವಮ್ಮ, ಸಂಗಮ್ಮ, ಶರಣಮ್ಮ, ಮಲ್ಲಮ್ಮ, ಲಕ್ಷ್ಮಮ್ಮ, ಯಂಕಮ್ಮ, ನೀಲಮ್ಮ, ನಾಗಮ್ಮ, ಹಂಪಮ್ಮ, ಮಂಜಮ್ಮ, ಸಜ್ಜಹೊಲ ಕಳಕಮ್ಮ, ಲತೀಫ್‌, ಶಾಂತಮ್ಮ, ದುರ್ಗಮ್ಮ, ಪಾಪಮ್ಮ, ವಿರೇಶ ನಾಯಕ, ಹಾವುಗಾರ ಸಿದ್ದಾರಾವ್‌, ಹೊನ್ನೂರಮ್ಮ, ಮಲ್ಲಮ್ಮ, ಬಸವರಾಜ ಬೂದಿ, ಸಿದ್ದಪ್ಪ ಬೂದಿ, ರಮೇಶ ಬೂದಿ, ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next