Advertisement

ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

11:53 AM Jul 13, 2018 | |

ಬೆಂಗಳೂರು: ವೇತನ ಪಾವತಿಯಾಗದೆ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆ ಪೌರಕಾರ್ಮಿಕ ಸುಬ್ರಹ್ಮಣ್ಯ ಕುಟುಂಬಕ್ಕೆ 25 ಲಕ್ಷ ಪರಿಹಾರ ಕಲ್ಪಿಸಬೇಕು, ಕುಟುಂಸ್ಥರಿಗೆ ಸರ್ಕಾರಿ ಕೆಲಸ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘಟನೆ ಗುರುವಾರ ಪ್ರತಿಭಟನೆ ನಡೆಸಿತು.

Advertisement

ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಪೌರಕಾರ್ಮಿಕರು, ಗುತ್ತಿಗೆ ಪೌರಕಾರ್ಮಿಕರಿಗೆ ವೇತನ ದೊರೆಯದಿರಲು ಕಾರಣವೇನು ಎಂಬುದನ್ನು ತನಿಖೆ ನಡೆಸಬೇಕು. ಜತೆಗೆ 700 ಜನರಿಗೆ ಒಬ್ಬರು ಪೌರಕಾರ್ಮಿಕ ನಿಯಮ ಬದಲಿಗೆ 500 ಜನರಿಗೆ ಒಬ್ಬರು ಪೌರಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ನಕಲಿ ಪೌರಕಾರ್ಮಿಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿ ಮೇಯರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು. 

ಮನವಿ ಸ್ವೀಕರಿಸಿದ ಮಾತನಾಡಿದ ಮೇಯರ್‌ ಸಂಪತ್‌ರಾಜ್‌, ಪೌರಕಾರ್ಮಿಕರಿಗೆ ವೇತನ ವಿಳಂಬವಾಗಲು ಕಾರಣ ಯಾರು ಎಂಬುದರ ಕುರಿತು ತನಿಖೆ ನಡೆಸಲಾಗುವುದು. ಸುಬ್ರಹ್ಮಣ್ಯ ಕುಟುಂಬಕ್ಕೆ ಸರ್ಕಾರದಿಂದ ವಸತಿ ಹಾಗೂ ನೌಕರಿ ಕೊಡಿಸಲಾಗುವುದು. ಇನ್ನೂ ವೇತನ ದೊರೆಯದ ಕಾರ್ಮಿಕರಿಗೆ ಎರಡು ದಿನಗಳಲ್ಲಿ ವೇತನ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next