Advertisement
ಕಾಪು ಪುರಸಭೆಯ ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು, ಮಜೂರು ಗ್ರಾ.ಪಂ. ಅಧ್ಯಕ್ಷ ಸಂದೀಪ್ ರಾವ್, ಉಪಾಧ್ಯಕ್ಷೆ ಸಹನಾ ತಂತ್ರಿ, ಜಿ.ಪಂ. ಸದಸ್ಯೆ ಶಿಲ್ಪಾ ಸುವರ್ಣ, ಜನಜಾಗೃತಿ ಸಮಿತಿಯ ಪಯ್ನಾರು ಶಿವರಾಮ ಶೆಟ್ಟಿ, ವಿಜಯ ತಂತ್ರಿ, ಗಣೇಶ್ ಶೆಟ್ಟಿ, ಕವಿತಾ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಕಾಪು ಶಾಸಕ ವಿನಯಕುಮಾರ್ ಸೊರಕೆ ಹಾಗೂ ಪಂಚಾಯತ್ ಪ್ರತಿನಿಧಿಗಳ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಭೇಟಿ ನೀಡಿದರು. ಶಾಸಕ ವಿನಯಕುಮಾರ್ ಸ್ಥಳೀಯ ಸಂತ್ರಸ್ತರಲ್ಲಿ ಧೈರ್ಯ ತುಂಬಿದ್ದು ಪೊಲೀಸರು ಪ್ರಕರಣ ದಾಖಲಿಸು ವುದಾದರೆ ನನ್ನ ವಿರುದ್ಧವೂ ದಾಖಲಿ ಸಲಿ. ಮೊದಲಿಗೆ ಐಎಸ್‌ಪಿಆರ್‌ಎಲ್ ಕಂಪೆನಿಯು ನಷ್ಟದ ಪರಿಹಾರ ಧನ ವಿತರಿಸಲಿ. ಎಲ್ಲರಿಗೂ ಬದುಕುವ ಹಕ್ಕಿದೆ ಎಂದಿದ್ದಾರೆ. 114 ಮನೆಗಳಿಗೆ ಹಾನಿ
ಜನಜಾಗೃತಿ ಸಮಿತಿಯ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು ಈ ಸಂದರ್ಭದಲ್ಲಿ ಮಾತನಾಡುತ್ತಾ ಪಾದೂರು- ತೋಕೂರು ವರೆಗಿನ ಪೈಪ್‌ಲೈನ್ ಕಾಮಗಾರಿಯ ಸಂದರ್ಭ ಬಂಡೆ ಸ್ಫೋಟದಿಂದ ಕಳತ್ತೂರು ಮತ್ತು ಪಾದೂರು ಗ್ರಾಮದ 114 ಮನೆಗಳಿಗೆ ಹಾನಿಯಾಗಿದೆ. ಆದರೆ ನೈಜ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕ ವಿನಯಕುಮಾರ್ ಸೊರಕೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿದ್ದೇವೆ. ಜಿಲ್ಲಾಧಿಕಾರಿಯವರಿಗೆ ಶಾಸಕರು ತಿಳಿಸಿದ್ದರೂ ಈ ತನಕ ಯಾವುದೇ ಪರಿಹಾರ ನೀಡಿಲ್ಲ. ಕಳೆದ ಒಂದು ತಿಂಗಳಿನಿಂದ ನಾವು ನಿರಂತರವಾಗಿ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ನಾವು ಜನಜಾಗೃತಿ ಸಮಿತಿ ರಚಿಸಿಕೊಂಡು ಪರಿಹಾರ ಧನ ಸಿಗುವ ತನಕ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
Related Articles
ಸಂತಸ್ತೆ ವೀಣಾ ತಂತ್ರಿ ಮಾತನಾಡಿ, ನಮಗೆ ಕಂಪೆನಿ ಮೋಸ ಮಾಡಿದೆ. ನಾವು ನಿಜವಾದ ಸಂತಸ್ತರಾಗಿದ್ದು ನಮ್ಮನ್ನು ಗುರುತಿಸಲಾಗಿಲ್ಲ. ನಮಗೂ ಶೀಘ್ರವಾಗಿ ಪರಿಹಾರ ಧನ ನೀಡು ವಂತೆ ಆಗ್ರಹಿಸಿದರು.
Advertisement