Advertisement

ಮೌಲ್ಯಮಾಪನ ದೋಷ ನಿವಾರಣೆಗೆ ಆಗ್ರಹಿಸಿ ಪ್ರತಿಭಟನೆ

11:18 AM Mar 08, 2018 | |

ಕಲಬುರಗಿ: ಹುಬ್ಬಳ್ಳಿ ಕಾನೂನು ವಿವಿ ಮೌಲ್ಯಮಾಪನದಲ್ಲಿ ದೋಷಗಳಿದ್ದು, ಅವುಗಳನ್ನು ನಿವಾರಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಧಿಕಾರಿಗಳ ಮೂಲಕ ಉನ್ನತ ಶಿಕ್ಷಣ ಖಾತೆ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಹುಬ್ಬಳ್ಳಿ ಕಾನೂನು ವಿವಿ ಆಧೀನದಲ್ಲಿ 2009ರಿಂದ ಬರುವ ರಾಜ್ಯದ ಬಹುತೇಕ ಕಾನೂನು ವಿದ್ಯಾಲಯಗಳು ಒಳಪಟ್ಟಿವೆ. ವಿವಿ ಶೇ. 95ರಷ್ಟು ವಿದ್ಯಾರ್ಥಿಗಳು ಅನುತ್ತಿರ್ಣರಾಗಿ ಹೊರಗುಳಿಯುತ್ತಿದ್ದಾರೆ. ಪ್ರತಿಶತ ಕಡಿಮೆ ಅಂಕ ಬರಲು ಕಾರಣವೇನು.  ಮೊದಲ ಮೌಲ್ಯಮಾಪನದಲ್ಲಿ ಫೇಲ್‌ ಮಾಡಿ, ಮರುಮೌಲ್ಯಮಾಪನದಲ್ಲಿ ಪಾಸ್‌ ಮಾಡುವುದು ಏಕೆ ಎಂದು ಪ್ರಶ್ನಿಸಿದರು. 

ಪಠ್ಯಕ್ರಮದ ನೀಲಿನಕ್ಷೆ ನೀಡಬೇಕು. ವಿವಿ ತನ್ನ ಜವಾಬ್ದಾರಿ ಸರಿಯಾಗಿ ನಿಭಾಯಿಸುತ್ತಿಲ್ಲ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟವಾಡುತ್ತಿದೆ. ಕೆಲ ಉಪನ್ಯಾಸಕರು ಪಠ್ಯಮಾಡದೇ ಮೌಲ್ಯಮಾಪನ ಮಾಡುತ್ತಿದ್ದಾರೆ.

ಆದ್ದರಿಂದ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ. ಅನೇಕ ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡುವ ಉಪನ್ಯಾಸಕರು
33, 34,35 ಹಾಗೂ 36ರಂತೆ ಅಂಕ ನೀಡಿ ವಿದ್ಯಾರ್ಥಿಗಳನ್ನು ಫೇಲ್‌ ಮಾಡುತ್ತಿದ್ದಾರೆ.

ಹಲವು ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದರೆ ಪ್ರತಿ ವಿಷಯಕ್ಕೆ 500 ರೂ.ಗಳಂತೆ ಹಾಗೂ ಇನ್ನುಳಿದ ಕೆಲ ವಿದ್ಯಾರ್ಥಿಗಳು ಚ್ಯಾಲೆಂಜಿಂಗ್‌ ಮೌಲ್ಯಮಾಪನವನ್ನು ಪ್ರತಿ ವಿಷಯಕ್ಕೆ 2100 ರೂ. ಪರೀಕ್ಷಾ ಶುಲ್ಕ ಸಂದಾಯ ಮಾಡಿದರೂ ಹಲವಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ದೂರಿದರು.

Advertisement

ವಿದ್ಯಾರ್ಥಿಗಳು ಮೂರು ವರ್ಷ ಹಾಗೂ 5 ವರ್ಷಗಳ ಕಾನೂನು ಕೋರ್ಸ್‌ಗಳ ಬಗ್ಗೆ ಜಿಗುಪ್ಸೆಗೊಂಡು ಒಳ್ಳೆಯ ವಿದ್ಯಾರ್ಥಿಗಳು ಕಾನೂನು ಪ್ರವೇಶ ಕೋರ್ಸ್‌ಗೆ ಸೇರ್ಪಡೆಯಾಗಲು ಹಿನ್ನಡೆಯಾಗುತ್ತಿದೆ. ಕೂಡಲೇ ಈ ದೋಷ ನಿವಾರಿಸಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳು ನಗರದ ಸರ್ದಾರ ಪಟೇಲ್‌ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. 

Advertisement

Udayavani is now on Telegram. Click here to join our channel and stay updated with the latest news.

Next