Advertisement

ಹಲ್ಲೆಕೋರರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

03:03 PM Sep 06, 2017 | |

ಇಂಡಿ: ಸೋಮವಾರ ಸಾಯಂಕಾಲ ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು ಆರೋಪಿತರನ್ನು ಬಂಧಿಸುವಲ್ಲಿ ಪೊಲೀಸ್‌ ಇಲಾಖೆ ಮೀನ ಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಡಿವೈಎಸ್‌ಪಿ ಕಚೇರಿ ಎದುರು ಜಮಾಯಿಸಿ ಪೊಲೀಸ್‌ ಅಧಿಕಾರಿಗಳ ವರ್ತನೆಗೆ ಧಿಕ್ಕಾರ ಕೂಗಿದರು. 

Advertisement

ಹಿಂದೂಪರ ಸಂಘಟನೆಗಳ ಮುಖಂಡರು ಮಾತನಾಡಿ, ಇಂಡಿಯಲ್ಲಿ ಪದೇ ಪದೇ ಹಿಂದೂ ಯುವಕರ ಮೇಲೆ ಮಾರಣಾಂತಿಕವಾಗಿ ಹಲ್ಲೆಯಾಗುತ್ತಿದೆ. ಅನೇಕ ಬಾರಿ ಪೊಲೀಸ್‌ ಇಲಾಖೆಯವರಿಗೆ ಪ್ರಕರಣ ದಾಖಲಿಸಿದರೂ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ಹಿಂದೇಟು ಹಾಕುತ್ತಾರೆ ಎಂದು ಆರೋಪಿಸಿದರು. ಇಂಡಿ ಸೌಹಾರ್ದ ಪಟ್ಟಣವಾಗಿದ್ದು ಮೇಲಿಂದ ಮೇಲೆ ಅದನ್ನು ಕೆಡಿಸಲು ಮುಸ್ಲಿಂ ಯುವಕರು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ 2002ರಲ್ಲಿ ಮತ್ತು ಇತ್ತಿತ್ತಲಾಗಿ ಹಿಂದು ಸಂಘಟನೆ ಕಾರ್ಯಕರ್ತ ಪ್ರವೀಣ  ತಾಂಬೆ ಅವರ ಮೇಲಿನ ಹಲ್ಲೆ ಮತ್ತು ನಿನ್ನೆ ನಡೆದ ಯಲ್ಲಪ್ಪ ಕುಂಬಾರ ಅವರ ಮೇಲಿನ ಹಲ್ಲೆ ಹೀಗೆ ಹತ್ತು ಹಲವು ಪ್ರಕರಣಗಳನ್ನು ನೋಡಲಾಗಿ ವ್ಯವಸ್ಥಿತವಾಗಿ ಹಿಂದು ಯುವಕರ ಮೇಲೆ ಕ್ಷುಲ್ಲಕ ಕಾರಣಗಳಿಗಾಗಿ
ಮಾರಣಾಂತಿಕ ಹಲ್ಲೆಗಳಾಗುತ್ತಿವೆ ಎಂದರು.

ನಿನ್ನೆ ನಡೆದ ಪ್ರಕರಣದಲ್ಲಿ ಭಾಗಿಯಾದ ಗೌಸ್ಪಾಕ್‌ ಸೇಖ್‌, ಅಸ್ಪಾಕ ಶೇಖ್‌, ಯಾಶಿನ ಶೇಖ್‌, ಸದ್ದಾಂ ಶೇಖ್‌, ಸಿಕಂದರ ಶೇಕ್‌, ಜಜ್ಜು ಶೇಖ್‌ ಅವರನ್ನು ಬಂಧಿ ಸಬೇಕು. ಗುಂಡಾ ಕಾಯ್ದೆಯಡಿ ಅವರನ್ನು ಹದ್ದು ಪಾರು ಮಾಡಬೇಕು. ರೌಡಿಶೀಟರ್‌ ಅಂತ ತೆಗೆದು ಅವರನ್ನು ಗುಂಡಾಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಡಿವೈಎಸ್‌ಪಿ ರವೀಂದ್ರ ಶಿರೂರ ಮಾತನಾಡಿ, 24 ಗಂಟೆಗಳಲ್ಲಿ ಆರೋಪಿತರನ್ನು ಬಂಧಿಸುತ್ತೇವೆ. ಈಗಾಗಲೆ ಆರೋಪಿತರ ಪತ್ತೆಗಾಗಿ ತಂಡ ರಚಿಸಲಾಗಿದೆ ಎಂದು ಹೇಳಿದರು. ಪ್ರತಿಭಟನೆ ಹಿಂಪಡೆಯಲು ಮನವಿ ಮಾಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪಿಎಸ್‌ಐ ಜಿ.ಎಸ್‌. ಬಿರಾದಾರ, ಶಿವಕುಮಾರ ಮುಚ್ಚಂಡಿ ಇದ್ದರು.

ಈ ವೇಳೆ ಕಾಸುಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಭೀಮನಗೌಡ ಪಾಟೀಲ, ರವಿಕಾಂತ ಬಗಲಿ, ಜಗದೀಶ ಕ್ಷತ್ರಿ, ಅನಿಲ ಜಮಾದಾರ, ದಯಾಸಾಗರ ಪಾಟೀಲ, ಮುತ್ತು ದೇಸಾಯಿ, ಪಾಪು ಕಿತ್ತಲಿ, ಶ್ರೀಮಂತ ಬಾರಿಕಾಯಿ, ಯಮನಾಜಿ ಸಾಳುಂಕೆ, ಶೀಲವಂತ ಉಮರಾಣಿ, ಎಸ್‌.ಜಿ. ಕುಲಕರ್ಣಿ, ಬುದ್ದುಗೌಡ ಪಾಟೀಲ, ವಿಠuಲ ಕುಂಬಾರ, ದೇವೇಂದ್ರ ಕುಂಬಾರ, ಅನಿಲಗೌಡ ಬಿರಾದಾರ, ಸೋಮು ನಿಂಬರಗಿಮಠ, ಶಿವು ಕುಂಬಾರ, ಸಂಜು ಪವಾರ, ಚನ್ನಪ್ಪ ದೇವರ, ಶಾಂತು ಕಂಬಾರ, ಸಿದ್ದು ಬೇಲ್ಯಾಳ, ಮಲ್ಲು ಬಿರಾದಾರ, ಸುನೀಲ ಕುಲಕರ್ಣಿ, ಜಿ.ಎಸ್‌. ಭಂಕೂರ, ಸಿದ್ದಲಿಂಗ
ಹಂಜಗಿ, ಕೇಶವ ಕಾಟಕರ, ಮಲ್ಲು ಬಿರಾದಾರ, ಶ್ರೀಧರ ತಾಂಬೆ, ಶ್ರೀಧರ ಝಂಪಾ, ಸುನೀಲ ರಬಶೆಟ್ಟಿ, ಕಿರಣ ಕ್ಷತ್ರಿ, ಭಗತ್‌ ಹಲವಾಯಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next