Advertisement

ಸಮರ್ಪಕ ಬಸ್‌ ಸೇವೆ ಒದಗಿಸಲು ಆಗ್ರಹಿಸಿ ಪ್ರತಿಭಟನೆ

04:27 PM Nov 10, 2019 | Suhan S |

ಚನ್ನಮ್ಮನ ಕಿತ್ತೂರು: ಸಮರ್ಪಕ ಬಸ್‌ ಸಂಚಾರ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತಿಗಡೊಳ್ಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕಳೆದ 15 ದಿನಗಳಿಂದ ಸರಿಯಾಗಿ ಬಸ್‌ ಬರುತ್ತಿಲ್ಲ. ಇದರಿಂದ ನಮಗೆ ಪ್ರತಿದಿನ ಶಾಲಾ-ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದೆ. ಬೆಳಗೆ 8 ಗಂಟೆಗೆ ಬರುವ ಬಸ್‌ ಮಂಗಳವಾರ ಹಾಗೂ ಬುಧವಾರ ಬಸ್‌ ಬರುತ್ತಿಲ್ಲ. ಇನ್ನೂಳಿದ ಬಸ್ಸುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಈ ಬಗ್ಗೆ ಬಸ್‌ ನಿಲ್ದಾಣದ ನಿಯಂತ್ರಣಾಧಿ ಕಾರಿಯನ್ನು ಕೇಳಿದರೆ ಸ್ಪಂದಿಸುವುದಿಲ್ಲ. ಗ್ರಾಮ ಪಂಚಾಯತಿಯಿಂದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿ ಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇನ್ನೂ ನಾಲ್ಕು ದಿನದ ಒಳಗಾಗಿ ಸಮಸ್ಯೆ ಬಗೆಹರಿಸಿ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಡದಿದ್ದರೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿಕೊಂಡು ಕಿತ್ತೂರು ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಾವಂತ ಕಿರಬನ್ನವರ, ದೇವೇಂದ್ರ ಪಾಟೀಲ, ಚನಬಸಪ್ಪ ಮಲಶೆಟ್ಟಿ, ಬಸವರಾಜ ಶಿರಗಾಪುರ, ಅಶೋಕ ಮಡಿವಾಳರ, ಸಿದ್ದಯ್ಯ ಹೊಸಮಠ, ಬಸಪ್ಪ ದೇಗಾಂವಿ, ಸೋಮೇಶ ಗಾಣಿಗೇರ, ಈರಣ್ಣಾ ಗೋದಳ್ಳಿ, ಅದೃಶ್ಯ ಹುಡೇದ, ಕಿರಣ ಗೋದಳ್ಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.

Advertisement

Udayavani is now on Telegram. Click here to join our channel and stay updated with the latest news.

Next