ಮಂಗಳೂರು: ಭೂ ಸುಧಾರಣಾ ತಿದ್ದುಪಡಿ ಕಾಯಿದೆ, ಎಪಿಎಂಸಿ ತಿದ್ದುಪಡಿ ಕಾಯಿದೆ, ಗೋಹತ್ಯಾ ನಿಷೇಧ ಹಾಗೂ ಸಂರಕ್ಷಣಾ ಕಾಯಿದೆ ಹಿಂಪಡೆಯಬೇಕು, ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್ ಗೆ ಕನಿಷ್ಠ ಒಂದು ಲ.ರೂ. ಪರಿಹಾರ ನೀಡಬೇಕು, ಅಡಕೆ ಆಮದನ್ನು ನಿಲ್ಲಿಸಬೇಕು, ತೆಂಗಿನ ಕಾಯಿಗೆ ಕ್ವಿಂಟಾಲ್ ಗೆ 5,000 ರೂ. ಬೆಂಬಲ ಬೆಲೆ ನೀಡಬೇಕು. ಬೆಳೆ ಸಾಲ ಮನ್ನಾ ಹಣ ವನ್ನು ಕೂಡಲೆ ಪಾವತಿಸಬೇಕು ಮೊದಲಾದ ಸುಮಾರು 24 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ನಗರದ ಮಿನಿ ವಿಧಾನಸೌಧದ ಎದುರು ಕರ್ನಾಟಕ ರೈತ ಸಂಘದ ವತಿಯಿಂದ ಪ್ರತಿಭಟನಾ ಧರಣಿ ನಡೆಯಿತು.
ಇದನ್ನೂ ಓದಿ:ಕರಾವಳಿ ಪಡೆಯಲು ಕೈ ಕಸರತ್ತು; ಹಲವು ಹೊಸಮುಖಗಳಿಗೆ ಮಣೆ ಹಾಕಿದ ಕಾಂಗ್ರೆಸ್
ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ, ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್, ಸನ್ಬಿ ಡಿಸೋಜ, ಯಾದವ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.
ಮೋದಿ ಸರಕಾರ ಉದ್ಯಮಿಗಳ ಪರವಾಗಿದೆಯೇ ಹೊರತು ರೈತರ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.