ಕೊಪ್ಪಳ: ಪಾಕಿಸ್ತಾನ್ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದ ಅಶೋಕ ವೃತ್ತದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಂಘಟನೆ ಮುಖಂಡ ಗವಿಸಿದ್ದಪ್ಪ ಜಂತಗಲ್ ಮಾತನಾಡಿ, ಬೆಂಗಳೂರಿ ನ ಫ್ರೀಡಂ ಪಾರ್ಕ್ ನಲ್ಲಿ ಸಿಎಎ ವಿರೋಧಿ ಸಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅಮೂಲ್ಯ ಲಿಯೋನಾ ಎನ್ನುವ ಯುವತಿ ಪಾಕಿಸ್ತಾನ ಜಿಂದಾಬಾದ್ ಎಂದು ದೇಶ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ. ಕಾರ್ಯಕ್ರಮ ಆಯೋಜನೆ ಮಾಡಿದ ಆಯೋಜಕರ ವಿರುದ್ಧ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಬೇಕು.
ಕೇವಲ ಅಮೂಲ್ಯ ಒಬ್ಬ ಯುವತಿ ಮೇಲೆ ಪ್ರಕರಣವನ್ನು ದಾಖಲಿಸುವ ಬದಲಿಗೆ, ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವರರನ್ನು ಗಲ್ಲಿಗೆ ಏರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ನಮ್ಮ ದೇಶದ ಅನ್ನ, ನೀರು, ಗಾಳಿಯನ್ನು ಸೇವಿಸಿ ದೇಶ ವಿರೋಧಿ ಚಟುವಟಿಕೆ ಮಾಡುತ್ತಿರುವ ವಿವಿಧ ಸಂಘಟನೆಗಳನ್ನು ನಿಷೇಧಿ ಸಬೇಕು. ನಿರುದ್ಯೋಗ ಯುವಕ, ಯುವತಿಯರಿಗೆ ದೇಶ ವಿರೋಧಿ ಚಟುವಟಿಕೆಯ ತರಬೇತಿಯ ನೀಡುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ಎಲ್ಲ ಸಂಘಟನೆಯ ಮೇಲೆ ಕೂಡಲೇ ನಿಷೇಧ ಹೇರಿ ಸಂಘಟನೆ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಬೇಕು. ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನ ವಿದ್ಯಾರ್ಥಿಗಳೂ ದೇಶ ವಿರೋಧಿ ಹೇಳಿಕೆ ನೀಡಿದ್ದಾರೆ. ಕೂಡಲೇ ಅವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರಾದ ಮಹೇಶ ಅಂಗಡಿ, ಸುನೀಲ್ ಹೆಸರೂರ, ಪ್ರದೀಪ ಪಲ್ಲೇದ, ಉಮೇಶ ಕರಡೆಕರ್, ರವಿಚಂದ್ರ ಮಾಲಿಪಾಟೀಲ, ವಸಂತ ಬೆನ್ನಳ್ಳಿ, ಪರಶುರಾಮ ಬೂದಗುಂಪಾ, ಆಜೇಯ ಬಂಡಣ್ಣವರ, ಪ್ರಶಾಂತ, ಶಶಾಂಕ, ಪುಟ್ಟರಾಜ ಚಕ್ಕಿ, ರಮೇಶ ಕವಲೂರ, ಮಹೇಶ ಹಾದಿಮನಿ, ಉದಯಕುಮಾರ, ದೀಪಕ ಹಿರೇಮಠ, ಪ್ರವೀಣ ಇಟಗಿ, ಅಮರೇಶ, ಪಂಪಯ್ಯ ಶಹಪೂರ, ಉಮೇಶರಾವ್, ಸೋಮಣ್ಣ ಹಳ್ಳಿ ಮತ್ತಿತರರರು ಪಾಲ್ಗೊಂಡಿದ್ದರು.