Advertisement

ಅತಿಥಿ ಉಪನ್ಯಾಸಕರು ಅತಂತ್ರ, ಧರಣಿ

12:54 PM Jan 04, 2022 | Team Udayavani |

ಮಂಡ್ಯ: ಸೇವೆ ವಿಲೀನ ಹಾಗೂ ಭದ್ರತೆಗಾಗಿ ಆಗ್ರಹಿಸಿ ಕಳೆದ 19 ದಿನಗಳಿಂದ ನಿರಂತರವಾಗಿ ಧರಣಿನಡೆಸುತ್ತಿರುವ ಪುರುಷ ಹಾಗೂ ಮಹಿಳಾ ಅತಿಥಿ ಉಪನ್ಯಾಸಕರ ಒಬ್ಬೊಬ್ಬರ ಕುಟುಂಬದ ಆರ್ಥಿಕಸಂಕಷ್ಟ ತುಂಬಾ ಶೋಚನೀಯವಾಗಿದೆ.ಕಳೆದ 15-20 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಡಿಮೆ ಗೌರವಧನದ ಆಧಾರದಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಇದರಿಂದ ಇವರ ಜೀವನ ಸಂಕಷ್ಟಕ್ಕೆಸಿಲುಕಿದೆ. ಕಳೆದ ಹಲವಾರು ವರ್ಷಗಳಿಂದ ಸೇವಾಭದ್ರತೆಗಾಗಿ ಹೋರಾಟ ಮಾಡುತ್ತಿದ್ದರೂ ಬೇಡಿಕೆ ಈಡೇರಿಲ್ಲ.

Advertisement

ದಿನಕ್ಕೆ 180 ರೂ. ಗೌರವಧನ: ಪ್ರತಿ ಉಪನ್ಯಾಸಕರಿಗೆ 11ರಿಂದ 13 ಸಾವಿರ ರೂ.ವರೆಗೂ ಗೌರವಧನ ನೀಡಲಾಗುತ್ತದೆ. ಅದನ್ನು ಪ್ರತಿದಿನಕ್ಕೆ ಹೋಲಿಸಿದರೆ 180 ರೂ. ಮಾತ್ರ. ಪ್ರಸ್ತುತ ಜೀವನ ನಡೆಸಲು ಸಾಧ್ಯ ವಾಗುತ್ತಿಲ್ಲ. ಅಲ್ಲದೆ, ಗೌರವಧನವೂ ಪ್ರತಿ ತಿಂಗಳು ಕೊಡುವುದಿಲ್ಲ. ಮೂರು ಅಥವಾ ಆರು ತಿಂಗಳಿಗೊಮ್ಮೆ ನೀಡುತ್ತಾರೆ. ಇದರಿಂದ ಜೀವನ ಮಾಡುವುದು ಕಷ್ಟಕರವಾಗಿದೆ.

ಜೀವನಕ್ಕಾಗಿ ಕೂಲಿ: ಜಿಲ್ಲೆಯಲ್ಲಿ ಒಟ್ಟು 701 ಅತಿಥಿ ಉಪನ್ಯಾಸಕರಿದ್ದಾರೆ. ಸೇವಾ ಭದ್ರತೆ, ಸರಿಯಾಗಿ ಗೌರವಧನ ಸಿಗದೆ, ಕೆಲವು ಅತಿಥಿ ಉಪನ್ಯಾಸಕರು ಕೂಲಿ, ಆಟೋ ಚಾಲಕ, ತರಕಾರಿ, ಹಾಲು ಮಾರಾಟಮಾಡಿ ಜೀವನ ನಡೆಸುತ್ತಿದ್ದಾರೆ. ಕೆಲವರ ಬದುಕುಹೀನಾಯ ಸ್ಥಿತಿಗೆ ತಲುಪಿದೆ. ಹಾಲು, ತರಕಾರಿ,ಆಟೋ ಓಡಿಸುವಾಗ ನಮ್ಮ ವಿದ್ಯಾರ್ಥಿಗಳೇ ಎದುರಾದಾಗ ಮುಜುಗರ ಸನ್ನಿವೇಶಗಳುನಡೆದಿವೆ ಎಂದು ಅತಿಥಿ ಉಪನ್ಯಾಸಕರೊಬ್ಬರು ತಿಳಿಸಿದರು.

ಕುಟುಂಬ ನಿರ್ವಹಣೆ ಕಷ್ಟ: ಅತಿಥಿ ಉಪನ್ಯಾಸಕರು ಕುಟುಂಬ ನಿರ್ವಹಣೆ ಮಾಡುವುದು ತುಂಬಾಕಷ್ಟವಾಗಿದೆ. ಬರುವ ಗೌರವಧನದಲ್ಲಿ ವಯಸ್ಸಾದಪೋಷಕರು ಸೇರಿದಂತೆ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದಾರೆ. ಒಂದು ತಿಂಗಳು ಗೌರವಧನ ಬರದಿದ್ದರೆ ಸಾಲ ಮಾಡುವಂಥ ಪರಿಸ್ಥಿತಿನಿರ್ಮಾಣವಾಗುತ್ತದೆ. ನಂತರ ಗೌರವಧನ ಬಂದಾಗ ಸಾಲಕ್ಕೆ ಸೀಮಿತವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಮಧ್ಯಾಹ್ನದ ಊಟ ತ್ಯಜಿಸಿ ಹೋರಾಟ: ನಿರಂತರ ಧರಣಿಯಿಂದ ಅತಿಥಿ ಉಪನ್ಯಾಸಕರು ಆರ್ಥಿಕಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ವಿವಿಧೆಡೆಗಳಿಂದಆಗಮಿಸಬೇಕಾಗಿದೆ. ಬೆಳಗ್ಗೆ ತಿಂಡಿ ಮಾಡಿ ಧರಣಿಗೆ ಬಂದರೆ ನಂತರ ಸಂಜೆ ಮನೆ ಸೇರಬೇಕಾಗುತ್ತದೆ.ಅಲ್ಲಿಂದ ಬರಲು ಬಸ್‌ ಚಾರ್ಜ್‌ಗೂ ಹಣವಿಲ್ಲದೆ,ಸಾಲ ಮಾಡಿ ಧರಣಿಯಲ್ಲಿ ಭಾಗವಹಿಸುತ್ತಿದ್ದು,ಮಧ್ಯಾಹ್ನ ಊಟ ಮಾಡುತ್ತಿಲ್ಲ ಎಂದು ಅತಿಥಿ ಉಪನ್ಯಾಸಕ ವಿನಯ್‌ಕುಮಾರ್‌ ತಿಳಿಸಿದರು.

Advertisement

ಮೂವರು ಆತ್ಮಹತ್ಯೆ :

ಸೇವಾ ಭದ್ರತೆ ಇಲ್ಲದೆ ಬೇಸತ್ತ ಮೂವರು ಅತಿಥಿಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳವಳ್ಳಿಯ ಕೋಕಿಲಾ, ಸುರೇಶ್‌, ಮಂಡ್ಯದ ಲಲಿತಾ ಎಂಬ ಮೂವರು  ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಸಾಕಷ್ಟು ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ಆದರೆಮುಜುಗರ, ಅವಮಾನದಿಂದ ಯಾರೂಮುಂದೆ ಬರುತ್ತಿಲ್ಲ ಎನ್ನುತ್ತಾರೆ ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಬಿ.ಎಸ್‌.ನಾಗರಾಜು.

ಸಹಾಯಕ ಪ್ರಾಧ್ಯಾಪಕ  ನೇಮಕಾತಿ ತಡೆಗೆ ಆಗ್ರಹ : ಸಹಾಯಕ ಪ್ರಾಧ್ಯಾಪಕರ ನೇಮಕಾತಿ ನಡೆದರೆ ಸಾಕಷ್ಟು ಅತಿಥಿ ಉಪನ್ಯಾಸಕರು ಬೀದಿ ಪಾಲಾಗುತ್ತಾರೆ. ಅತಿ ಹೆಚ್ಚು ವೇತನಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆದರೆ ನಮಗೆ ಅದರಲ್ಲಿ ಶೇ.5ರಷ್ಟು ಗೌರವಧನನೀಡುವುದಿಲ್ಲ. ಆದ್ದರಿಂದ ಇದನ್ನು ತಡೆ ಹಿಡಿದುಇರುವ ಅತಿಥಿ ಉಪನ್ಯಾಸಕರನ್ನೇ ಸೇವೆಗೆ ವಿಲೀನ ಮಾಡಬೇಕು. ದೆಹಲಿ, ಪಶ್ಚಿಮ ಬಂಗಾಳ, ಕೇರಳ ಮಾದರಿಯಲ್ಲೇ ನಮಗೂಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳಿಂದ ಪ್ರತಿನಿತ್ಯ ಕರೆ :

ಜಿಲ್ಲೆಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿರುವಇವರು ಧರಣಿಯಲ್ಲಿ ಭಾಗವಹಿಸುತ್ತಿರುವುದ ರಿಂದ ವಿದ್ಯಾರ್ಥಿಗಳಿಗೆ ತರಗತಿಗಳು ನಿಂತಿವೆ.ಇದರಿಂದ ಪ್ರತಿನಿತ್ಯ ವಿದ್ಯಾರ್ಥಿಗಳು ಕರೆ ಮಾಡುತ್ತಾರೆ. ಒಂದೆಡೆ ವಿದ್ಯಾರ್ಥಿಗಳ ಭವಿಷ್ಯ,ಮತ್ತೂಂದೆಡೆ ನಮ್ಮ ಜೀವನದ ಹೋರಾಟವಾಗಿರುವುದರಿಂದ ಅತಂತ್ರರಾಗಿದ್ದೇವೆ. ಆದ್ದರಿಂದ ಸರ್ಕಾರ ಕೂಡಲೇ ನಮ್ಮ ಸೇವಾ ವಿಲೀನಮಾಡುವ ಮೂಲಕ ಸೇವಾ ಭದ್ರತೆ ನೀಡಬೇಕುಎಂದು ಮಂಡ್ಯ ನಗರದ ಮಹಿಳಾ ಕಾಲೇಜಿನ ಅತಿಥಿ ಉಪನ್ಯಾಸಕ ಶಶಿಶೇಖರ್‌ ಆಗ್ರಹಿಸುತ್ತಾರೆ.

ನನ್ನ ಪತಿ ಮೈಷುಗರ್‌ ಕಾರ್ಖಾನೆಯ ದಿನಗೂಲಿ ನೌಕರ. ನಾನು ಪದವಿ, ಎಂಫಿಲ್ ಮಾಡಿದ್ದು, ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದೇನೆ. ಮೈಷುಗರ್‌ ಕಾರ್ಖಾನೆ ಸ್ಥಗಿತಗೊಂಡಿರುವುದರಿಂದ ನನ್ನ ಪತಿಗೆ ವೇತನ ಸಿಗುತ್ತಿಲ್ಲ. ನನಗೆ ಸರಿಯಾದ ಸಮಯಕ್ಕೆ ಗೌರವಧನವೂ ಬರುತ್ತಿಲ್ಲ. ಇಬ್ಬರ ಮಕ್ಕಳ ಶಿಕ್ಷಣ, ಕುಟುಂಬನಿರ್ವಹಣೆ ತುಂಬಾ ಕಷ್ಟವಾಗಿದೆ. ಪವಿತ್ರ, ಅತಿಥಿ ಉಪನ್ಯಾಸಕಿ

ಅತಿಥಿ ಉಪನ್ಯಾಸಕನೆಂಬ ಹಿನ್ನಲೆಯಲ್ಲಿ ಎಷ್ಟೋ ಮಂದಿಗೆಇನ್ನೂ ಮದುವೆಯೂ ಆಗಿಲ್ಲ. ಮದುವೆಯಾಗಿರುವ ಅತಿಥಿ ಉಪನ್ಯಾಸಕರ ಜೀವನ ವಿಚ್ಛೇದನ ಪಡೆಯುವಂತಾಗಿದೆ. ಪೋಷಕರು, ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಕೂಡಲೇ ಸೇವೆ ವಿಲೀನಮಾಡಬೇಕು. ಮಹೇಶ್‌, ಅತಿಥಿ ಉಪನ್ಯಾಸಕ

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next