Advertisement

ಆಹಾರ ಧಾನ್ಯ-ಬೀಜ ವ್ಯಾಪಾರಿಗಳಿಂದ ಪ್ರತಿಭಟನೆ

02:47 PM Jun 02, 2022 | Team Udayavani |

ಕಲಬುರಗಿ: ಇಲ್ಲಿನ ಎಪಿಎಂಸಿ ಕಚೇರಿ ಅಧೀಕ್ಷಕ ಮಾಹಾಂತಪ್ಪ ವರ್ಗಾವಣೆಗೆ ಆಗ್ರಹಿಸಿ ಬುಧವಾರ ಎಪಿಎಂಸಿ ವ್ಯಾಪಾರ ವಹಿವಾಟು ಬಂದ್‌ ಮಾಡಿ ವರ್ತಕರು ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.

Advertisement

ವಿಚಾರಣೆ ಆಗಮಿಸಿದ್ದ ಕಾರಟಗಿ ಎಪಿಎಂಸಿ ಕಾರ್ಯದರ್ಶಿ, ಹೆಚ್ಚುವರಿ ನಿರ್ದೇಶಕರಿಗೆ ಮನವಿ ಸಲ್ಲಿಸಿ, ಮಹಾಂತಪ್ಪ ವರ್ತನೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ಹಲವು ವರ್ಷಗಳಿಂದ ಎಪಿಎಂಸಿಗೆ ಬರುವ ಎಲ್ಲ ವರ್ತಕರು, ರೈತರು ಸೇರಿಕೊಂಡು ಇತರೆ ಸಾಮಾನ್ಯರಿಗೂ ಏಕವಚನದಲ್ಲಿ ಮಾತನಾಡಿಸುವುದು, ಸಮಸ್ಯೆ ಎಂದು ಬಂದವರನ್ನು ಇನ್ನಷ್ಟು ಸಮಸ್ಯೆಗೆ ಗುರಿ ಮಾಡುವುದು, ನೊಂದವರ ಗೋಳು ಕೇಳುವುದನ್ನು ಬಿಟ್ಟು ಬೇಕಾಬಿಟ್ಟಿ ಮಾತನಾಡಿ ಅಹಂಕಾರ ತೋರಿಸುವುದನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಎರಡು ಬಾರಿ ಕಾರ್ಯದರ್ಶಿ ಮತ್ತು ಇತರೆ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದರೂ, ನಮ್ಮ ಕಾರ್ಯದರ್ಶಿ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ನಾವು ಹೋರಾಟ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಕೂಡಲೇ ಮಹಾಂತಪ್ಪ ಅವರನ್ನು ವರ್ಗಾವಣೆ ಮಾಡಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ವಿಶೇಷ ಅಧಿಕಾರಿಯಾಗಿ ವಿಚಾರಣೆ ಮಾಡಲು ಬಂದಿರುವ ಕಾರಟಗಿ ಕಾರ್ಯದರ್ಶಿ ಜತೆ ಮಾತುಕತೆ ನಡೆಸಿ, ಸಮಸ್ಯೆ ಕುರಿತು ಮಾಹಿತಿ ನೀಡಲಾಯಿತು. ಬಳಿಕ ಆಡಳಿತ ಕಚೇರಿ ಎದುರು ಘೋಷಣೆ ಕೂಗಿ ಪ್ರತಿಭಟಿಸಲಾಯಿತು.

ಸಂಘದ ಅಧ್ಯಕ್ಷ ಶ್ರೀಮಂತ ಉದನೂರು, ಕಾರ್ಯದರ್ಶಿ ಸಂತೋಷ ಜಿ.ಲಂಗರ್‌, ಎಚ್‌ಕೆಸಿಸಿಐನ ಶಶಿಕಾಂತ ಪಾಟೀಲ, ಶರಣು ಪಪ್ಪಾ, ಬಸವರಾಜ ಮಂಗಲಗಿ, ಅಂಬರಾಯ ಜೀವಣಗಿ, ಶಿವಲಿಂಗಪ್ಪ ಪಾಟೀಲ ಭೀಮು ಜೀವಣಗಿ, ಹಮಾಲರ ಸಂಘದ ಅಧ್ಯಕ್ಷ ಆಪ್ಪರಾವ್‌, ಸಂಗಣ್ಣ ಹಿರೇಗೌಡ, ಸಂತೋಷ, ಅಶೋಕ ನಿಂಗದೆ, ಸಂತೋಷ ನಿಂಗದೆ, ಶಿವಪುತ್ರಪ್ಪ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next