Advertisement

ಸಿಪಿಐಎಂ ಕಾರ್ಯಕರ್ತರಿಂದ ಪ್ರತಿಭಟನೆ

06:36 AM Feb 09, 2019 | |

ಹೊಸಪೇಟೆ: ಪ್ರಾಥಮಿಕ ಹಂತದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವ ಸರ್ಕಾರ ಕ್ರಮವನ್ನು ಖಂಡಿಸಿ ಸಿಪಿಐಎಂ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಮಾತೃ ಭಾಷೆಯಲ್ಲಿ ಆಗತಾನೆ ಬೆರಗಿನಿಂದ ಹೊರ ಜಗತ್ತನ್ನು ನೋಡುವ, ಯೋಚಿಸುವ ಎಳೆಯ ಮಗುವಿನ ಮೇಲೆ ತನ್ನದಲ್ಲದ ತನ್ನ ಪರಿಸರದಲ್ಲಿಲ್ಲದ ಅನ್ಯ ಭಾಷೆಯಲ್ಲಿ ವಿಷಯವನ್ನು ಗ್ರಹಿಸುವಂತೆ ಒತ್ತಡ ಹೇರುವುದು, ಆ ಮಗುವಿನ ಮಾನಸಿಕ ಪರಿಸರದ ವಿಕಾಸದ ಮೇಲೆ ಅಹಿತಕರ ಪರಿಣಾಮ ಬೀರುತ್ತದೆಂಬುದು ಜಗತ್ತಿನ ಹಲವು ಅಧ್ಯಯನಗಳು ಹೇಳುತ್ತಿರುವಾಗ ಸರಕಾರದ ಈ ನಡೆ ಸಾಧುವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿರುವ ನಿರ್ಧಾರ ಹಿಂಪಡೆಯ ಬೇಕು.ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ನಿರ್ಧಾರ ಹಿಂಪಡೆದು ಶಾಲೆಗಳಿಗೆ ಉತ್ತೇಜನ ನೀಡುವುದಕ್ಕೆ ಪ್ರಾತಿನಿಧ್ಯ ವಹಿಸಬೇಕು. ಜಿಲ್ಲೆಗೆ ವೈದ್ಯಕೀಯ ಶಿಕ್ಷಣ ಕಾಲೇಜು ತೆರೆಯಲು ಕ್ರಮ ವಹಿಸಬೇಕು. ಅನುದಾನಿತ ಖಾಸಗಿ ಶಾಲೆಗಳಲ್ಲಿ ಡೊನೇಷನ್‌ ಹಾವಳಿ ನಿಯಂತ್ರಿಸಬೇಕೆಂದು ಒತ್ತಾಯಿಸಿದರು. ಮುಖಂಡರಾದ ಎ.ಕರುಣಾನಿಧಿ, ಆರ್‌.ಭಾಸ್ಕರ್‌ರೆಡ್ಡಿ, ಎಂ.ಜಂಬಯ್ಯ ನಾಯಕ, ಕೆ.ನಾಗರತ್ನಮ,್ಮ ಯಲ್ಲಾಲಿಂಗ, ಎಂ.ಗೋಪಾಲ, ಕಲ್ಯಾಣಯ್ಯ, ಕೆ.ನಾಗರತ್ನಮ್ಮ, ಶಕುಂತಲಮ್ಮ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next